ʼಹಾಲ್ʼ ಸಿನಿಮಾ ಬಗ್ಗೆ ಕ್ರೈಸ್ತರ ತಕರಾರು: ಸಿನಿಮಾ ವೀಕ್ಷಿಸಲಿದೆ ಕೇರಳ ಹೈಕೋರ್ಟ್

ವಿವಿಧ ದೃಶ್ಯಗಳನ್ನು ಕತ್ತರಿಸುವ ಸಿಬಿಎಫ್‌ಸಿ ಸಲಹೆ ಜಾರಿಗೆ ತರಬೇಕೆ ಎಂದು ನಿರ್ಧರಿಸಲು, ಮತ್ತು ಯಾರೆಲ್ಲಾ ಸಿನಿಮಾ ವೀಕ್ಷಿಸಬೇಕು ಎಂಬುದನ್ನು ಅಂತಿಮಗೊಳಿಸಲು ನ್ಯಾಯಾಲಯ ಅಕ್ಟೋಬರ್ 21ಕ್ಕೆ ಪ್ರಕರಣ ಮುಂದೂಡಿತು.
HAAL
HAAL
Published on

ಬಿಡುಗಡೆಗೆ ಸಜ್ಜಾಗಿರುವ ʼಹಾಲ್‌ʼ ಮಲಯಾಳಂ ಚಿತ್ರದ ಕೆಲ ದೃಶ್ಯಗಳನ್ನು ಕತ್ತರಿಸುವಂತೆ ಅಥವಾ ಮಾರ್ಪಡಿಸುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಫ್‌ಸಿ) ಸೂಚಿಸಿರುವುದು ಸಮರ್ಥನೀಯವೇ ಎಂಬುದನ್ನು ನಿರ್ಧರಿಸುವುದಕ್ಕಾಗಿ ಕೇರಳ ಹೈಕೋರ್ಟ್ ಚಿತ್ರ ವೀಕ್ಷಿಸಲು ಶುಕ್ರವಾರ ನಿರ್ಧರಿಸಿದೆ [ಜುಬಿ ಥಾಮಸ್‌ ಮತ್ತಿತತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಚಲನಚಿತ್ರದಲ್ಲಿ ಕಂಡುಬರುವ ಒಂದು ಸಂಸ್ಥೆಯ ಹೆಸರನ್ನು ಮಸುಕುಗೊಳಿಸುವುದು, ಗೋಮಾಂಸ ಬಿರಿಯಾನಿ ತಿನ್ನುವ ದೃಶ್ಯವನ್ನು ತೆಗೆದುಹಾಕುವುದು ಮತ್ತು ಪ್ರಮುಖ ನಟಿ ಮುಸ್ಲಿಂ ಉಡುಪಿನಲ್ಲಿ ಕಾಣಿಸಿಕೊಳ್ಳುವ ಹಾಡಿನ ಸನ್ನಿವೇಶವನ್ನು ತೆಗೆದುಹಾಕುವುದು ಸೇರಿದಂತೆ ಆರು ಮಾರ್ಪಾಡುಗಳನ್ನು ಸಿಬಿಎಫ್‌ಸಿ ಸೂಚಿಸಿತ್ತು.

Also Read
ರೆಜಿಮೆಂಟ್‌ನ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗದ ಕ್ರೈಸ್ತ ಸೇನಾಧಿಕಾರಿ ವಜಾ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್

ವಿವಿಧ ದೃಶ್ಯಗಳನ್ನು ಕತ್ತರಿಸುವ ಸಿಬಿಎಫ್‌ಸಿ ಸಲಹೆ ಜಾರಿಗೆ ತರಬೇಕೆ ಎಂದು ನಿರ್ಧರಿಸಲು, ಮತ್ತು ಯಾರೆಲ್ಲಾ ಸಿನಿಮಾ ವೀಕ್ಷಿಸಬೇಕು ಎಂಬುದನ್ನು ಅಂತಿಮಗೊಳಿಸಲು ನ್ಯಾಯಾಲಯ ಅಕ್ಟೋಬರ್ 21ಕ್ಕೆ ಪ್ರಕರಣ ಮುಂದೂಡಿತು.

ಸೆನ್ಸಾರ್ ಮಂಡಳಿಯ ಕೆಲ ದೃಶ್ಯಗಳನ್ನು ಕತ್ತರಿಸಲು ಅಥವಾ ಮಾರ್ಪಡಿಸಲು ಸೂಚಿಸಿದರೆ, ಚಿತ್ರಕ್ಕೆ  'ಎ' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡುವುದಾಗಿ ಸಿಬಿಎಫ್‌ಸಿ ಮುಂದಿಟ್ಟಿರುವ ಪ್ರಸ್ತಾಪವನ್ನು ಚಿತ್ರದ ನಿರ್ಮಾಪಕರು  ಪ್ರಶ್ನಿಸಿದ್ದಾರೆ.

Also Read
ಕ್ರೈಸ್ತ ಧರ್ಮದಲ್ಲಿ ಜಾತಿ ಇಲ್ಲ, ಮತಾಂತರಗೊಂಡವರಿಗೆ ಎಸ್‌ಸಿ ಎಸ್‌ಟಿ ಕಾಯಿದೆಯಡಿ ರಕ್ಷಣೆ ಇಲ್ಲ: ಆಂಧ್ರ ಹೈಕೋರ್ಟ್

ಹಾಲ್ ಚಿತ್ರ  ಮುಸ್ಲಿಂ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿಯ ನಡುವಿನ ಅಂತರ್ಧರ್ಮೀಯ ಪ್ರೇಮಕಥೆಯನ್ನು ಹೇಳುತ್ತದೆ. ಶೇನ್ ನಿಗಮ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಗಮನಾರ್ಹವಾಗಿ ಕ್ಯಾಥೋಲಿಕ್ ಕಾಂಗ್ರೆಸ್ ತಮರಚ್ಚೇರಿ ಡಯಾಸಿಸ್‌ ಕೂಡ ಚಿತ್ರವನ್ನು ವಿರೋಧಿಸಿದ್ದು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ನ್ಯಾಯಾಲಯ ಅನುಮತಿಸಿತು.  

ಚಿತ್ರದಲ್ಲಿ ಕೆಲ ಧಾರ್ಮಿಕ ನಾಯಕರನ್ನು ನಕಾರಾತ್ಮಕವಾಗಿ ಬಿಂಬಿಸಿದ್ದು ಲವ್‌ ಜಿಹಾದ್‌ ಉತ್ತೇಜಿಸುವಂತಿದೆ ಎಂದು ಕ್ರೈಸ್ತ ಸಂಘಟನೆ ಹೇಳಿದೆ.

Kannada Bar & Bench
kannada.barandbench.com