ಪ್ರಸಕ್ತ ಸಾಲಿನ ಎಐಬಿಇ ಪರೀಕ್ಷೆ ಉತ್ತೀರ್ಣ ದರ 51% ರಿಂದ 77% ಕ್ಕೆ ಏರಿಕೆ: ಆರ್‌ಟಿಐ ಮಾಹಿತಿಯಿಂದ ಬಹಿರಂಗ
ಈ ಬಾರಿ ನಡೆದಿದ್ದ ಹತ್ತೊಂಬತ್ತನೇ ಆವೃತ್ತಿಯ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ (ಎಐಬಿಇ XIX) 52,251 ಅಭ್ಯರ್ಥಿಗಳು ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ವಕೀಲ ಬಾಲಚಂದರ್ ರೆಡ್ಡಿ ಅವರು ಆರ್‌ಟಿಐ ಕಾಯಿದೆಯಡಿ ಕೇಳಿದ ಪ್ರಶ್ನೆಗೆ ಈ ಉತ್ತರ ದೊರೆತಿದೆ. ನ್ಯಾಯಾಲಯಗಳಲ್ಲಿ ವಕೀಲರು ಪ್ರಾಕ್ಟೀಸ್ ಮಾಡಲು ಕಾನೂನು ಪದವೀಧರರು ಪರೀಕ್ಷೆ ಉತ್ತೀರ್ಣರಾಗಬೇಕಿದ್ದು 2,36,403 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು ಎಂದು ತಿಳಿದುಬಂದಿತ್ತು.
ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಅನುತ್ತೀರ್ಣ ಪ್ರಮಾಣ ಶೇ 22.73 ಆಗಿದ್ದು, ಎಐಬಿಇ XVIIIರಲ್ಲಿ ಕಂಡುಬಂದ ಶೇ 51.64ರಷ್ಟು ಅನುತ್ತೀರ್ಣ ದರಕ್ಕಿಂತ ಗಮನಾರ್ಹ ಸುಧಾರಣೆಯಾಗಿದೆ. ಕಳೆದ ವರ್ಷದ 1,44,014 ಅಭ್ಯರ್ಥಿಗಳಿಗೆ ಹೋಲಿಸಿದರೆ ಎಐಬಿಇ XIXರಲ್ಲಿ ಅಧಿಕ ಸಂಖ್ಯೆಯ ಅಭ್ಯರ್ಥಿಗಳು (2,29,843) ಪರೀಕ್ಷೆ ಬರೆದಿದ್ದಾರೆ.
ಸಾಮಾನ್ಯ/ಒಬಿಸಿ ವರ್ಗಕ್ಕೆ, ಉತ್ತೀರ್ಣ ಅಂಕವನ್ನು 93 ಅಂಕಗಳಲ್ಲಿ ಶೇ 45ರಷ್ಟು ಎಂದು ಲೆಕ್ಕಹಾಕಲಾಗಿದ್ದು, ಇದು 42ಕ್ಕೆ ಪೂರ್ಣಗೊಳ್ಳುತ್ತದೆ ಎಸ್‌ಸಿ/ ಎಸ್‌ಟಿ/ಅಂಗವಿಕಲ ವರ್ಗಕ್ಕೆ, ಉತ್ತೀರ್ಣ ಅಂಕವನ್ನು 93 ಅಂಕಗಳಲ್ಲಿ 40% ಎಂದು ಲೆಕ್ಕಹಾಕಲಾಗಿದ್ದು, ಇದು 37ಕ್ಕೆ ಪೂರ್ಣಗೊಳ್ಳುತ್ತದೆ.
ಎಐಬಿಇ XIXರ ಫಲಿತಾಂಶಗಳನ್ನು ಮಾರ್ಚ್ 22, 2025 ರಂದು ಘೋಷಿಸಲಾಗಿತ್ತು. ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ 7 ಪ್ರಶ್ನೆಗಳನ್ನುಹಿಂತೆಗೆದುಕೊಳ್ಳಲಾಗಿದ್ದು, ಫಲಿತಾಂಶ 93 ಪ್ರಶ್ನೆಗಳನ್ನುಆಧರಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.