ಹೊಸ ರೂಪದಲ್ಲಿ ಹಳೆಯ ಕಡತಗಳು: ಅಲಾಹಾಬಾದ್‌ ಹೈಕೋರ್ಟಿನಲ್ಲಿ ನ್ಯಾಯಾಂಗ ದಾಖಲೆಗಳ ಡಿಜಿಟಲೀಕರಣ ಪರ್ವ

ಇತ್ಯರ್ಥಗೊಂಡ ಸುಮಾರು ಒಂದು ಕೋಟಿ ಪ್ರಕರಣ ದಾಖಲೆಗಳಲ್ಲಿ ಅಲಾಹಾಬಾದ್‌ ಪೀಠದಲ್ಲಿ 26,44,596 ಕಡತಗಳು ಮತ್ತು ಲಖನೌ ಪೀಠದಲ್ಲಿ 6,88,368 ಫೈಲ್‌ಗಳನ್ನು ಇದುವರೆಗೆ ಡಿಜಿಟಲೀಕರಣ ಮಾಡಲಾಗಿದೆ.
Allahabad High Court
Allahabad High Court

ದೇಶದ ಅತಿ ಹಳೆಯ ನ್ಯಾಯಾಲಯಗಳಲ್ಲಿ ಒಂದಾದ ಅಲಾಹಾಬಾದ್ ಹೈಕೋರ್ಟ್ ಪ್ರಕರಣದ ದಾಖಲೆಗಳ ಡಿಜಿಟಲೀಕರಣ ಮತ್ತು ಅದರ ಫೈಲ್‌ಗಳ ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡಿದೆ.

ಹೈಕೋರ್ಟ್‌ನಲ್ಲಿ ಸುಮಾರು ಒಂದು ಕೋಟಿ ಇತ್ಯರ್ಥಗೊಂಡ ಪ್ರಕರಣದ ದಾಖಲೆಗಳಿವೆ. ಅವುಗಳಲ್ಲಿ ಅಲಾಹಾಬಾದ್‌ ಪ್ರಧಾನ ಪೀಠವೊಂದರಲ್ಲೇ 35 ಕೋಟಿ ಪುಟಗಳಷ್ಟಿರುವ 70 ಲಕ್ಷ ಕಡತಗಳಿವೆ. ಲಖನೌ ಪೀಠದಲ್ಲಿ 15 ಕೋಟಿ ಪುಟಗಳಷ್ಟಿರುವ 30 ಲಕ್ಷ ಫೈಲ್‌ಗಳಿವೆ. ಈವರೆಗೆ ಅಲಾಹಾಬಾದ್‌ ಪೀಠದಲ್ಲಿ 26,44,596 ಕಡತಗಳನ್ನು ಮತ್ತು ಲಖನೌ ಪೀಠದಲ್ಲಿ 6,88,368 ಕಡತಗಳಿಗೆ ಡಿಜಿಟಲ್‌ ಸ್ಪರ್ಶ ನೀಡಲಾಗಿದೆ.

Also Read
ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಸಮಿತಿ ರಚಿಸಿದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್
Also Read
ಆನ್‌‌ಲೈನ್ ಮೂಲಕ ಹೊಸ ಕೇಸು, ಆಕ್ಷೇಪಣಾ ಅರ್ಜಿ ಸಲ್ಲಿಕೆಗೆ ವೇಳೆ ನಿಗದಿ: ಆಪ್ ಬಿಡುಗಡೆ ಮಾಡಿದ ಕರ್ನಾಟಕ ಹೈಕೋರ್ಟ್

ಹೈಕೋರ್ಟ್ ರೂಪಿಸಿದ ನಿಯಮಗಳಿಗೆ ಅನುಸಾರವಾಗಿ ಈಗಾಗಲೇ ಡಿಜಿಟಲೀಕರಣಗೊಂಡ ಕಡತಗಳನ್ನು ಭೌತಿಕವಾಗಿ ನಾಶಪಡಿಸಲಾಗುತ್ತಿದ್ದು, ಅಗತ್ಯವಿರುವ ಪುಟಗಳನ್ನು ಡಿಜಿಟಲ್‌ ರೂಪಕ್ಕೆ ಇಳಿಸಿ ಉಳಿದವುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ, ಅಂದಾಜು 2,08,680 ಮೂಲ ನ್ಯಾಯಾಂಗ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಡಿಜಿಟಲೀಕರಿಸಿದ ದಾಖಲೆಯ ಪರಿಶೀಲನೆ ಬಳಿಕ ಭೌತಿಕವಾಗಿ ನಾಶಮಾಡಲಾಗಿದೆ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ವರದಿಯಲ್ಲಿ ತಿಳಿಸಲಾಗಿದೆ.

ಇಂತಹ ಮೌನ ನಿರ್ಣಯಕ್ಕೆ ಮತ್ತೊಂದು ಕಾರಣ ಜಾಗದ ಲಭ್ಯತೆಯ ಸಮಸ್ಯೆ. ದಾಖಲಾಗುವ ಪ್ರಕರಣಗಳ ಕಡತಗಳನ್ನು ನಿರ್ವಹಿಸಲು ಅಲಾಹಾಬಾದ್‌ ಹೈಕೋರ್ಟಿನ ಜ್ಯುಡಿಕೇಚರ್‌ನಲ್ಲಿ ಸ್ಥಳಾವಕಾಶ ಇರಲಿಲ್ಲ. ಸ್ಥಳಾವಕಾಶದ ಬಿಕ್ಕಟ್ಟನ್ನು ಎದುರಿಸುವಲ್ಲಿ ಡಿಜಟಲೀಕರಣ ವರದಾನವಾಗಿ ಪರಿಣಮಿಸಿದೆ. ವಕೀಲರಿಗೆ ಬೆರಳ ತುದಿಯಲ್ಲೇ ಹಳೆಯ ಕಡತಗಳನ್ನು ಅಧ್ಯಯನ ಮಾಡುವ, ಪರಿಶೀಲಿಸುವ ಅವಕಾಶ ದೊರೆತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ನ್ಯಾಯಾಲಯದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ದೆಹಲಿ ಸರ್ಕಾರ ಇತ್ತೀಚೆಗೆ 6 ಕೋಟಿ ರೂ ಅನುದಾನ ಬಿಡುಗಡೆ ಮಾಡಿತ್ತು.

Related Stories

No stories found.
Kannada Bar & Bench
kannada.barandbench.com