ಪತ್ನಿಗೆ ಜೀವನಾಂಶ: ವಿಚ್ಛೇದಿತ ಸಹೋದರಿಗಾಗಿ ವ್ಯಕ್ತಿ ಮಾಡುತ್ತಿರುವ ಖರ್ಚನ್ನೂ ಗಮನಿಸಬೇಕು ಎಂದ ದೆಹಲಿ ಹೈಕೋರ್ಟ್

ಭಾರತೀಯ ಸಂಸ್ಕೃತಿಯಲ್ಲಿ ಸಹೋದರ ಹಾಗೂ ಸಹೋದರಿ ಪರಸ್ಪರ ಆಳವಾದ ಕಾಳಜಿ ಹೊಂದಿರುತ್ತಾರೆ ಎಂದು ನ್ಯಾ. ಎಸ್ ಕೆ ಶರ್ಮಾ ತಿಳಿಸಿದರು.
Divorce
Divorce

ತನ್ನ ವಿಚ್ಛೇದಿತ ಸೋದರಿಯ ಸಮಸ್ಯೆಗಳ ಬಗ್ಗೆ ಅದರಲ್ಲಿಯೂ ಆಕೆಗೆ ಹಣಕಾಸಿನ ಸಮಸ್ಯೆ ಇದ್ದಾಗ ಸಹೋದರನಾದವನು ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಸರಿತಾ ಬಕ್ಷಿ ಮತ್ತು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಭಾರತೀಯ ಸಂಸ್ಕೃತಿಯಲ್ಲಿ ಸಹೋದರ ಹಾಗೂ ಸಹೋದರಿ ಪರಸ್ಪರ ಆಳವಾದ ಕಾಳಜಿ ಹೊಂದಿರುತ್ತಾರೆ ಎಂದು ನ್ಯಾ. ಸ್ವರಣಾ ಕಾಂತ ಶರ್ಮಾ ತಿಳಿಸಿದರು.

“ಕುಟುಂಬ ಸದಸ್ಯರು ಹಂಚಿಕೊಳ್ಳುವ ವಾತ್ಸಲ್ಯ ಬಾಂಧವ್ಯವಾಗಿ ರೂಪುಗೊಳ್ಳಲಿದ್ದು ಕುಟುಂಬ ಸದಸ್ಯರು ಪರಸ್ಪರ ಬೆಂಬಲ ಕೊಟ್ಟುಕೊಳ್ಳುವ ಬಲವಾದ ವ್ಯವಸ್ಥೆಯಾಗಿದ್ದಾರೆ. ಅದರಲ್ಲಿಯೂ ಸಹೋದರ ಮತ್ತು ಸಹೋದರಿಯರ ನಡುವಿನ ಬಾಂಧವ್ಯ ಪರಸ್ಪರರ ಬಗ್ಗೆ ಆಳವಾದ ಕಾಳಜಿ ಹೊಂದಿರುತ್ತದೆ. ಭಾರತದಲ್ಲಿ ಹಬ್ಬಗಳು, ರೂಢಿ ಸಂಪ್ರದಾಯಗಳು ಒಡಹುಟ್ಟಿದವರ ಕಾಳಜಿ ವಾತ್ಸಲ್ಯ ಹಾಗೂ ಹೊಣೆಗಾರಿಕೆಯನ್ನು ದೃಢೀಕರಿಸುತ್ತವೆ ಹಾಗೂ ಗುರುತಿಸುತ್ತವೆ” ಎಂದು ನ್ಯಾಯಾಲಯ ಹೇಳಿತು.

Also Read
ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಹೀಗಾಗಿ ಪತ್ನಿಗೆ ಜೀವನಾಂಶ ನಿರ್ಧರಿಸುವಾಗ ವಿಚ್ಛೇದಿತ ಸಹೋದರಿಗಾಗಿ ವ್ಯಕ್ತಿ ಮಾಡುತ್ತಿರುವ ಖರ್ಚನ್ನು ಪರಿಗಣಿಸಬೇಕು ಎಂದು ಕೆಳ ನ್ಯಾಯಾಲಯಗಳಿಗೆ ಪೀಠ ಕಿವಿಮಾತು ಹೇಳಿತು.

ಪತಿ ತನಗೆ ₹ 6,000 ಜೋವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವಿಚ್ಛೇದಿತ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪತಿ ಮರುಮದುವೆಯಾಗಿದ್ದು ಅವರಿಗೆ ಒಂದು ಮಗುವೂ ಇದೆ. ವಯೋವೃದ್ಧ ತಂದೆ ಮತ್ತು ವಿಚ್ಛೇದನ ಪಡೆದ ಸಹೋದರಿ ಮಾಜಿ ಪತಿಯಿಂದ ಜೀವಾನಂಶ ಪಡೆಯುತ್ತಿದ್ದರೂ ಸೋದರನ ಮೇಲೆ ಅವಲಂಬಿತರಾಗಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ “ಪ್ರತಿ ಪ್ರಕರಣದಲ್ಲಿ ಸಂಬಂಧಗಳನ್ನು ಗಣಿತದ ಸೂತ್ರದಲ್ಲಿ ಬಂಧಿಸಿಡಲಾಗದು…” ಎಂದಿತು.

ಪತಿಯ ವೇತನದಿಂದ ಐದು ಪಾಲು ಮಾಡಿದರೆ ಪತ್ನಿಗೆ ಆಗ ₹8,000 ನೀಡಬೇಕಾಗುತ್ತದೆ. ಪತಿಯ ವಯಸ್ಸಾದ ತಂದೆ ಮತ್ತಿತರ ಅವಲಂಬಿತರನ್ನು ಗಮನಿಸಿದಾಗ ಎಲ್ಲಾ ಪಾಲುದಾರರಿಗೆ ಸಮವಾಗಿ ₹7,500 ದೊರೆಯಲಿದೆ ಎಂದ ನ್ಯಾಯಾಲಯ ಪ್ರಸ್ತುತ ಅರ್ಜಿ ಸಿಆರ್‌ಪಿಸಿಸೆಕ್ಷನ್ 127ರ ಅಡಿಯಲ್ಲಿಇರುವುದರಿಂದ ಅರ್ಜಿಯ ದಿನಾಂಕದಿಂದ ಜೀವನಾಂಶ ಹೆಚ್ಚಿಸಲಾಗದು, ಬದಲಿಗೆ ವೇತನ ಹೆಚ್ಚಳವಾದ ದಿನಾಂಕದಿಂದ ಹೆಚ್ಚುವರಿ ಜೀವನಾಂಶವನ್ನು ಹೆಚ್ಚಿಸಲಾಗುವುದು ಎಂಬುದಾಗಿ ಸ್ಪಷ್ಟಪಡಿಸಿತು.

Related Stories

No stories found.
Kannada Bar & Bench
kannada.barandbench.com