ಶತ್ರುಘ್ನ ಸಿನ್ಹಾ ವ್ಯಕ್ತಿತ್ವ ಹಕ್ಕು ದುರುಪಯೋಗವಾಗದಂತೆ ಬಾಂಬೆ ಹೈಕೋರ್ಟ್‌ ರಕ್ಷಣೆ: ʼಖಾಮೋಶ್‌ʼ ಸಂಭಾಷಣೆಗೂ ಅಭಯ

ಸಿನ್ಹಾ ಅವರ ಹೆಸರು, ಭಾವಚಿತ್ರ ಹಾಗೂ ಪ್ರಸಿದ್ಧ ಖಾಮೋಶ್‌ʼ ಸಿನಿಮಾದ ಸಂಭಾಷಣೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ಮಾರ್ಚ್ 30ರವರೆಗೆ ತಾತ್ಕಾಲಿಕ ತಡೆ ಆದೇಶ ನೀಡಲಾಗಿದೆ.
Shatrughan Sinha
Shatrughan Sinha
Published on

ಹಿರಿಯ ನಟ ಹಾಗೂ ಲೋಕಸಭಾ ಸದಸ್ಯ ಶತ್ರುಘ್ನ ಸಿನ್ಹಾ ಅವರ ಹೆಸರು, ಭಾವಚಿತ್ರ ಹಾಗೂ ಪ್ರಸಿದ್ಧ “ಖಾಮೋಶ್” ಸಂಭಾಷಣೆ ದುರುಪಯೋಗಪಡಿಸಿಕೊಳ್ಳದಂತೆ ಬಾಂಬೆ ಹೈಕೋರ್ಟ್‌ ಮಧ್ಯಂತರ ರಕ್ಷಣೆ ನೀಡಿದೆ [ಶತ್ರುಘ್ನ ಸಿನ್ಹಾ ಮತ್ತು ಅನಾಮಧೇಯ ವ್ಯಕ್ತಿಗಳು, ಮೆಟಾ ಹಾಗೂ ಇನ್ನಿತರರ ನಡುವಣ ಪ್ರಕರಣ].

ಫೆಬ್ರವರಿ 16ರಂದು ಖಾಸಗಿ ವಿಚಾರಣೆ ವೇಳೆ ನೀಡಲಾಗಿದ್ದ ಏಕಪಕ್ಷೀಯ ಆದೇಶವನ್ನು ಫೆಬ್ರವರಿ 21ರಂದು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.

Also Read
ದಿ. ಸ್ಟ್ಯಾನ್‌ಸ್ವಾಮಿ ಬುಡಕಟ್ಟು ಹೋರಾಟಗಾರ ಎನ್ನಲಾಗುತ್ತದೆ; ವಾಸ್ತವದಲ್ಲಿ ಅವರು ಯುಎಪಿಎ ಆರೋಪಿ: ಮದ್ರಾಸ್ ಹೈಕೋರ್ಟ್

ಅನಾಮಧೇಯ ವ್ಯಕ್ತಿಗಳು, ಸಾ. ಮಾಧ್ಯಮ ವೇದಿಕೆಗಳೂ ಹಾಗೂ ವಸ್ತುವಿಷಯ ಪ್ರಸಾರ ಮಾಡುವ ತಾಣಗಳು, ಇ ವಾಣಿಜ್ಯ ವೇದಿಕೆಗಳು ಸಿನ್ಹಾ ಅವರ ವ್ಯಕ್ತಿತ್ವ ಹಾಗೂ ಪ್ರಚಾರ ಹಕ್ಕು ದುರುಪಯೋಗಪಡಿಸಿಕೊಳ್ಳದಂತೆ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಅವರು ತಡೆಯಾಜ್ಞೆ ವಿಧಿಸಿದ್ದಾರೆ.

“ಶತ್ರುಘ್ನ ಸಿನ್ಹಾ” ಎಂಬ ಅವರ ಹೆಸರು, ಧ್ವನಿಯ ಶೈಲಿ, ಪ್ರಸಿದ್ಧ “ಖಾಮೋಶ್” ಸಂಭಾಷಣೆ, ಭಾವಚಿತ್ರ, ರೂಪಸಾದೃಶ್ಯ, ಸಹಿ ಹಾಗೂ ಗುರುತಿಸಬಹುದಾಧ ಇತರೆ ಲಕ್ಷಣಗಳು ಇದರಲ್ಲಿ ಸೇರಿವೆ.

ಶತ್ರುಘ್ನ ಅವರ ಹೆಸರಿನಲ್ಲಿ ನಕಲಿ ಖಾತೆಗಳು, ಮೀಮ್ಸ್‌, ಜಿಐಎಫ್‌, ಡಿಜಿಟಲ್ ಸ್ಟಿಕ್ಕರ್‌, ಎಐ ಡೀಪ್‌ಫೇಕ್‌ಗಳು ಮತ್ತು ಅಶ್ಲೀಲವಾಗಿ ಮಾರ್ಪಡಿಸಿದ ವಸ್ತುವಿಷಯಗಳು ಕಂಡುಬಂದ ಹಿನ್ನೆಲೆಯಲ್ಲಿ, ಇದು ವ್ಯಕ್ತಿತ್ವ ಹಕ್ಕುಗಳ ಹಾಗೂ ಗೌಪ್ಯತೆಯ ಉಲ್ಲಂಘನೆ ಎಂದು ನ್ಯಾಯಾಲಯ ಮೇಲ್ನೋಟಕ್ಕೆ ನಿರ್ಧರಿಸಿದೆ.

Also Read
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಶತ್ರುಘ್ನ ಅವರ ವ್ಯಕ್ತಿತ್ವ ಹಕ್ಕು ಉಲ್ಲಂಘನೆ ಮಾಡಿದವರ ವಿವರಗಳನ್ನು ಬಹಿರಂಗಪಡಿಸಲು ಪ್ರಮುಖ ಆನ್‌ಲೈನ್ ವೇದಿಕೆಗಳಿಗೆ ನಿರ್ದೇಶಿಸಲಾಗಿದೆ. ಸಾಕಷ್ಟು ದಾಖಲೆಗಳಿರುವ ಹಿನ್ನೆಲೆಯಲ್ಲಿ ಪ್ರತಿಬಂಧಕಾಜ್ಞೆಯನ್ನು ಮಾರ್ಚ್ 30ರವರೆಗೆ ಮುಂದುವರಿಸಲಾಗಿದ್ದು, ಆ ದಿನ ಮಧ್ಯಂತರ ಅರ್ಜಿಯ ವಿವರವಾದ ವಿಚಾರಣೆ ನಡೆಯಲಿದೆ.

ಸಿನ್ಹಾ ಅವರು ತಮ್ಮ “ಖಾಮೋಶ್” ಸಂಭಾಷಣೆ, ಧ್ವನಿಶೈಲಿಯನ್ನು ಅನುಮತಿಯಿಲ್ಲದೆ ಬಳಸಿದ ತಂತ್ರಜ್ಞಾನ ಕಂಪನಿಗಳು, ಇ-ವಾಣಿಜ್ಯ ವೇದಿಕೆಗಳು ಹಾಗೂ ಅನಾಮಧೇಯ ವ್ಯಕ್ತಿಗಳ ವಿರುದ್ಧ ₹20 ಕೋಟಿ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

[ಆದೇಶದ ಪ್ರತಿ]

Attachment
PDF
Shatrughan_Sinha_v__John_Doe__Meta___Ors_
Preview
Kannada Bar & Bench
kannada.barandbench.com