ವ್ಯಸನಕ್ಕೀಡಾದ ಆರೋಪಿಗಳಿಗೆ ಮನೋ ವೈದ್ಯಕೀಯ ಚಿಕಿತ್ಸೆ ನೀಡುವಂತೆ, ಸಹಾನುಭೂತಿ ತೋರುವಂತೆ ಬಾಂಬೆ ಹೈಕೋರ್ಟ್ ಸೂಚನೆ

ತನಗೆ ಕೂಡಲೇ ಊಟ ನೀಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನು ಹೊಡೆದು ಕೊಂದ ಮಾಜಿ ಸಿಆರ್ಪಿಎಫ್ ಸಿಬ್ಬಂದಿಯೊಬ್ಬನ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯಲ್ಲಿ ನಡೆಯಿತು.
Mental Health
Mental Health
Published on

ಬಂಧಿತ ಆರೋಪಿಗಳು ಮದ್ಯ ಅಥವಾ ಮಾದಕವಸ್ತು ವ್ಯಸನಿಗಳಾಗಿದ್ದರೆ ಅಂತಹವರಿಗೆ ಮನೋವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ [ಪ್ರಮೋದ್ ವಾಮನರಾವ್ ಧುಲೆ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಒಬ್ಬ ವ್ಯಕ್ತಿ ಮದ್ಯ ಅಥವಾ ನಿಷೇಧಿತ ಮಾದಕ ದ್ರವ್ಯಗಳಿಗೆ ವ್ಯಸನಿಯಾಗಿದ್ದರೆ, ಅದನ್ನುಮಾನಸಿಕ ಆರೋಗ್ಯ ಕಾಯಿದೆ- 2017ರ ಸೆಕ್ಷನ್ 2(1)(ಎಸ್‌) ಅಡಿ ಮಾನಸಿಕ ಕಾಯಿಲೆ ಎಂದೇ ಪರಿಗಣಿಸಬೇಕು ಎಂಬುದಾಗಿ ವ್ಯಕ್ತಿ ನ್ಯಾಯಮೂರ್ತಿ ಸಂಜಯ್ ಎ ದೇಶಮುಖ್ ಅವರು ತಿಳಿಸಿದರು.

Also Read
ಮಾದಕವಸ್ತು ಬಳಕೆ 'ಆಹ್ಲಾದಕರ' ಸಂಗತಿಯಲ್ಲ, ಗೆಳೆಯರ ಒತ್ತಾಯದಿಂದ ದೂರವಿರಿ: ಯುವಜನರಿಗೆ ಸುಪ್ರೀಂ ಕೋರ್ಟ್ ಕಿವಿಮಾತು

ಕೇವಲ ಔಪಚಾರಿಕ ನಿಯಮ ಪಾಲಿಸಲಷ್ಟೇ ಬಂಧಿತ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಯುತ್ತಿದ್ದು ಆರೋಪಿಗಳಲ್ಲಿ ವ್ಯಸನದ ಲಕ್ಷಣ ಕಂಡುಬಂದರೆ ಕಾಯಿದೆಯಲ್ಲಿ ವಿವರಿಸಿರುವಂತೆ ಅವರಿಗೆ ಮನೋವೈದ್ಯಕೀಯ ಪರೀಕ್ಷೆ ನಡೆಸಬೇಕು. ಮಾನಸಿಕ ಆರೋಗ್ಯ ಹದಗೆಟ್ಟಿರುವುದು ದೃಢಪಟ್ಟರೆ ಅವರನ್ನು ಜೈಲಿನಲ್ಲಿರಿಸುವ ಬದಲು ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದು ಪೊಲೀಸರು ಹಾಗೂ ನ್ಯಾಯಾಲಯಗಳ ಕರ್ತವ್ಯ ಎಂಬುದಾಗಿ ಅದು ವಿವರಿಸಿದೆ.

 ಇಂತಹ ಸಂದರ್ಭಗಳಲ್ಲಿ ಬಂಧಿತರನ್ನು ತಪ್ಪಿತಸ್ಥರೆಂದಷ್ಟೇ ನೋಡುವ ಬದಲು ಮಾನವೀಯ ಹಾಗೂ ಅವರನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ವರ್ತಿಸಬೇಕು ಎಂದು ಅದು ವಿವರಿಸಿದೆ.

ತನಗೆ ಕೂಡಲೇ ಊಟ ನೀಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನು ಹೊಡೆದು ಕೊಂದ ಮಾಜಿ ಸಿಆರ್‌ಪಿಎಫ್‌ ಸಿಬ್ಬಂದಿಯೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಜಗಳಕ್ಕೆ ಕಾರಣ ಆತನ ಮದ್ಯ ವ್ಯಸನ ಎಂದು ತಿಳಿದುಬಂದಿತ್ತು.

ಚಿಕಿತ್ಸೆ ಪಡೆಯದೆ ಹೋದಲ್ಲಿ ವ್ಯಸನಿಗಳು ಮತ್ತೆ ಅಪರಾಧ ಎಸಗುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡುವ ಮೊದಲು ಅವರ ವ್ಯಸನದ ಸ್ಥಿತಿ ಹಾಗೂ ಚಿಕಿತ್ಸೆ ಬಗ್ಗೆ ಗಮನಹರಿಸಬೇಕು ಎಂದು ಅದು ಹೇಳಿತು.

Also Read
ತಮಿಳುನಾಡು ಆನ್‌ಲೈನ್‌ ಜೂಜಾಟ ಕಾಯಿದೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್: ರಮ್ಮಿ, ಪೋಕರ್ ರೀತಿಯ ಆಟಗಳಿಗಿಲ್ಲ ಅಂಕುಶ

ಪ್ರಸ್ತುತ ಪ್ರಕರಣದ ಆರೋಪಿಗೆ ಮನೋ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನಿರ್ದೇಶಿಸಿದ ನ್ಯಾಯಾಲಯ ಮಾನಸಿಕ ಆರೋಗ್ಯ ಕಾಯಿದೆಯಲ್ಲಿ ವಿವರಿಸಿರುವಂತೆ ಅಸ್ವಸ್ಥತೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಅವನಿಗೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಬೇಕು ಎಂದು ಅದು ತಿಳಿಸಿದೆ.

ಈಸಂಬಂಧವಿವಿಧನಿರ್ದೇಶನಗಳನ್ನುನೀಡಿದನ್ಯಾಯಾಲಯ, ರಾಜ್ಯದಲ್ಲಿರುವಕಾನೂನುಸೇವಾಪ್ರಾಧಿಕಾರಗಳುವ್ಯಸನದವಿರುದ್ಧಜಾಗೃತಿಕಾರ್ಯಕ್ರಮಗಳುನಡೆಸಬೇಕುಎಂತಲೂತಿಳಿಸಿತು.

Kannada Bar & Bench
kannada.barandbench.com