ಇಂದು ಅರ್ಜಿ ಸಲ್ಲಿಸಿ, ಮರುದಿನ ವಿಚ್ಛೇದನ ಪಡೆಯುವ ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಳ್ಳಲಾಗದು: ಸುಪ್ರೀಂ ಕೋರ್ಟ್

ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಮದುವೆ ರದ್ದುಗೊಳಿಸಲು ವಿವಾಹಿತ ದಂಪತಿ ಒಟ್ಟಿಗೆ ಇದ್ದ 40 ದಿನಗಳ ಕಾಲಾವಧಿ ಅತಿ ಚಿಕ್ಕದು ಎಂದು ಪೀಠ ತಿಳಿಸಿತು.
Supreme Court, Couple
Supreme Court, Couple

ಭಾರತೀಯ ಕಾನೂನು ವ್ಯವಸ್ಥೆಯಲ್ಲಿ, ವಿವಾಹ ರದ್ದುಗೊಳಿಸಲು ಇಲ್ಲವೇ ರಾಜಿ ಸಂಧಾನಕ್ಕೆ ಆದೇಶಿಸಲು ವಿಚ್ಛೇದನ ಪ್ರಕ್ರಿಯೆ ನಡುವೆ ಅಂತರ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಒತ್ತಿ ಹೇಳಿದೆ.

ವಿಚ್ಛೇದನಕ್ಕಾಗಿ ತ್ವರಿತ ಅನುಮತಿ ನೀಡುವ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ತಿಳಿಸಿತು.

Also Read
ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

"ನೀವು ಈ ದಿನ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಮರುದಿನ ಅದಕ್ಕೆ ಅನುಮೋದನೆ ನೀಡುವಂತಹ ಪಾಶ್ಚಾತ್ಯ ವ್ಯವಸ್ಥೆ ನಮ್ಮಲ್ಲಿಲ್ಲ. ಇಲ್ಲಿ ಎರಡೂ ಕಡೆಯ ಪಕ್ಷಕಾರರು (ವಿವಾಹವನ್ನು ಉಳಿಸಲು) ಪ್ರಯತ್ನಿಸಬೇಕು ಎಂದು ನಾನು ಭಾವಿಸುತ್ತೇನೆ, ನಾವು ಪಾಶ್ಚಾತ್ಯ ತಾತ್ವಿಕತೆಯನ್ನು ಆಮದು ಮಾಡಿಕೊಳ್ಳಲಾಗದು" ಎಂದು ನ್ಯಾಯಮೂರ್ತಿ ಕೌಲ್ ತಿಳಿಸಿದರು.

ತನ್ನೆದುರು ವರ್ಗಾವಣೆ ಅರ್ಜಿ ಸಲ್ಲಿಸಿದ್ದ ದಂಪತಿಗೆ ಖಾಸಗಿ ರಾಜೀ ಸಂಧಾನ ಪ್ರಕ್ರಿಯೆಗೆ ಮುಂದಾಗುವಂತೆ ಆದೇಶಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಮದುವೆ ರದ್ದುಗೊಳಿಸಲು ವಿವಾಹಿತ ದಂಪತಿ ಒಟ್ಟಿಗೆ ಇದ್ದ 40 ದಿನಗಳ ಕಾಲಾವಧಿ ಅತಿ ಚಿಕ್ಕದು ಎಂದು ಪೀಠ ಸ್ಪಷ್ಟಪಡಿಸಿತು.

Related Stories

No stories found.
Kannada Bar & Bench
kannada.barandbench.com