ವಾರಂಟಿ ನೀತಿ: ಪ್ರಾಬಲ್ಯ ದುರ್ಬಳಕೆ ಹಿನ್ನೆಲೆಯಲ್ಲಿ ಇಂಟೆಲ್‌ಗೆ ₹27.38 ಕೋಟಿ ದಂಡ ವಿಧಿಸಿದ ಸಿಸಿಐ

ಈ ರೀತಿಯ ನಿರ್ಬಂಧಗಳನ್ನು ಬೇರೆಡೆ ವಿಧಿಸದೆ ಭಾರತದಲ್ಲಷ್ಟೇ ಜಾರಿಗೆ ತಂದಿರುವ ಇಂಟೆಲ್‌ನ ಭರವಸೆ ಸೇವಾ ನೀತಿ ಅನ್ಯಾಯ ಮತ್ತು ತರತಮದಿಂದ ಕೂಡಿದೆ ಎಂದು ಆಯೋಗ ಹೇಳಿತು.
CCI with the logo of intel
CCI with the logo of intel
Published on

ಭಾರತದಲ್ಲಿ ಡೆಸ್ಕ್‌ಟಾಪ್‌ ಪರ್ಸನಲ್‌ ಕಂಪ್ಯೂಟರ್‌ಗಳ ಬಾಕ್ಸ್ಡ್ ಮೈಕ್ರೋಪ್ರೊಸೆಸರ್‌ಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ತನ್ನ ಪ್ರಾಬಲ್ಯ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂಟೆಲ್‌ ಕಾರ್ಪೊರೇಷನ್‌ ಸಂಸ್ಥೆಗೆ ಭಾರತೀಯ ಸ್ಪರ್ಧಾ ಆಯೋಗ ₹27.38 ಕೋಟಿ ದಂಡ ವಿಧಿಸಿದೆ.

2016ರ ಏಪ್ರಿಲ್ 25ರಿಂದ 2024ರ ಏಪ್ರಿಲ್ 1ರವರೆಗೆ ಜಾರಿಯಲ್ಲಿದ್ದ ಇಂಟೆಲ್‌ನ ಭಾರತ-ನಿರ್ದಿಷ್ಟ ವಾರಂಟಿ ನೀತಿಯಡಿ, ಭಾರತದ ಹೊರಗಿನ ಅಧಿಕೃತ ವಿತರಕರಿಂದ ಖರೀದಿಸಿದ ನಿಜವಾದ ಪ್ರೊಸೆಸರ್‌ಗಳಿಗೆ ಭಾರತದಲ್ಲಿ ವಾರಂಟಿ ಸೇವೆ ನಿರಾಕರಿಸಲಾಗುತ್ತಿತ್ತು. ಇದನ್ನು ಸಿಸಿಐ ಅನ್ಯಾಯ ಮತ್ತು ತರತಮದಿಂದ ಕೂಡಿದೆ ಎಂದಿತು.

Also Read
ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆ: ಕ್ರಿಕೆಟ್ ಮೇಲೆ ಬಿಸಿಸಿಐ ಕಪಿಮುಷ್ಠಿ ಬಗ್ಗೆ ಸುಪ್ರೀಂ ತರಾಟೆ

ಕಾಯಿದೆಯ ಕ್ಷನ್ 4(2)(a)(i), 4(2)(b)(i) ಮತ್ತು 4(2)(c) ಉಲ್ಲಂಘಿಸಿರುವ ಇಂಟೆಲ್‌ ಭಾರತಕ್ಕೆ ಆಮದು ಮಾಡಿದ ಬಾಕ್ಸ್ಡ್ ಮೈಕ್ರೋಪ್ರೊಸೆಸರ್‌ಗಳಿಗೆ ಸಂಬಂಧಿಸಿದಂತೆ ಅನ್ಯಾಯಯುತ ಮತ್ತು ತರತಮದಿಂದ ಕೂಡಿದ ಭಾರತಕ್ಕೇ ನಿರ್ದಿಷ್ಟವಾದ ವಾರಂಟಿ ನೀತಿ ಜಾರಿಗೊಳಿಸಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಹಾನಿ ಉಂಟಾಗಿದ್ದು 2016ರ ಏಪ್ರಿಲ್ 25ರಿಂದ 2024ರ ಏಪ್ರಿಲ್ 1ರವರೆಗೆ ಗ್ರಾಹಕರು ನಿಜವಾದ ಇಂಟೆಲ್ ಬಾಕ್ಸ್ಡ್ ಮೈಕ್ರೋಪ್ರೊಸೆಸರ್‌ಗಳ ಮೇಲೆ ಮಾರಾಟೋತ್ತರ ವಾರಂಟಿ ಸೇವೆ ಪಡೆಯುವುದನ್ನು ತಡೆಯಲಾಗಿದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿತು.

ದೆಹಲಿ ಮೂಲದ ಮ್ಯಾಟ್ರಿಕ್ಸ್ ಇನ್ಫೋ ಸಿಸ್ಟಮ್ಸ್ ನೀಡಿದ ಮಾಹಿತಿಯ ಆಧಾರದಲ್ಲಿ ಪ್ರಕರಣ ಕಣ್ತೆರೆದಿತ್ತು. 2019ರಲ್ಲಿ ಸೆಕ್ಷನ್ 26(1) ಅಡಿಯಲ್ಲಿ ತನಿಖೆಗೆ ಆದೇಶಿಸಲಾಯಿತು. 2016–2021 ಅವಧಿಯಲ್ಲಿ ಇಂಟೆಲ್ ಸಂಬಂಧಿತ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅದು ಹೇಳಿದೆ.

Also Read
ನೈಲಾನ್ ಮಾಂಜಾ ಬಳಸಿ ಗಾಳಿಪಟ ಹಾರಿಸಿದರೆ ₹25,000 ದಂಡ: ಬಾಂಬೆ ಹೈಕೋರ್ಟ್

ಬೇರೆ ದೇಶಗಳಲ್ಲಿ ಈ ಬಗೆಯ ನಿರ್ಬಂಧ ಇರದಿದ್ದರೂ ಭಾರತದಲ್ಲಿಯಷ್ಟೇ ವಾರಂಟಿ ನಿರಾಕರಿಸಿರುವುದು ಹಾಗೂ ಕೆಲ ಮಾಡೆಲ್‌ಗಳಲ್ಲಿ ಆಮದು ಬೆಲೆ ಹಾಗೂ ಅಧಿಕೃತ ವಿತರಕರ ಬೆಲೆಯಲ್ಲಿ ವ್ಯತ್ಯಾಸ ಇರುವುದಾಗಿ ಆಯೋಗ ಹೇಳಿದೆ.

ಇಂಟೆಲ್‌ ನೀತಿ ಎಂಟು ವರ್ಷಗಳ ಕಾಲ ಜಾರಿಯಲ್ಲಿದ್ದುದನ್ನು ಪರಿಗಣಿಸಿದ ಅದು ಸರಾಸರಿ ವಹಿವಾಟಿನ ಶೇ 8ರಷ್ಟು ದಂಡ ವಿಧಿಸಲಾಗಿದ್ದು ₹27.38 ಕೋಟಿ ನಿಗದಿಪಡಿಸಲಾಗಿದೆ. ಇಂಟೆಲ್ 60 ದಿನಗಳೊಳಗೆ ದಂಡ ಪಾವತಿಸಬೇಕು ಹಾಗೂ ನೀತಿ ಹಿಂಡೆದಿರುವುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಅದು ಸೂಚಿಸಿದೆ. 

Kannada Bar & Bench
kannada.barandbench.com