ಆಪಲ್ ಕಂಪೆನಿಯ ಆ್ಯಪ್ ಸ್ಟೋರ್ ನೀತಿಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ ಸಿಸಿಐ

ಆಪಲ್ ಮೊಬೈಲ್ ಬಳಕೆದಾರರಿಗೆ ತಮ್ಮ ಆ್ಯಪ್ ತಲುಪದಂತೆ ಆ್ಯಪ್ ಅಭಿವೃದ್ಧಿಪಡಿಸುವವರ ಮೇಲೆ ಆಪಲ್ ನಿರ್ಬಂಧ ವಿಧಿಸಿರುವುದು ಮೇಲ್ನೋಟಕ್ಕೆ ಸ್ಪರ್ಧಾತ್ಮಕ ಕಾಯಿದೆಯ ಉಲ್ಲಂಘನೆ ಎಂದು ಸಿಸಿಐ ಹೇಳಿದೆ.
ಆಪಲ್ ಕಂಪೆನಿಯ ಆ್ಯಪ್ ಸ್ಟೋರ್ ನೀತಿಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ ಸಿಸಿಐ

ಆಪಲ್ ಕಂಪೆನಿಯ ಆ್ಯಪ್ ಸ್ಟೋರ್ ನೀತಿಗಳ ಬಗ್ಗೆ ತನಿಖೆ ನಡೆಸುವಂತೆ ತನ್ನ ತನಿಖಾ ವಿಭಾಗವಾದ ಡೈರೆಕ್ಟರ್‌ ಜನರಲ್‌ ಕಚೇರಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಆದೇಶಿಸಿದೆ.

ಆಪಲ್‌ ಮೊಬೈಲ್ ಸಾಧನಗಳ (ಐಪ್ಯಾಡ್ ಮತ್ತು ಐಫೋನ್) ಬಳಕೆದಾರರನ್ನು ತಲುಪದಂತೆ ಆ್ಯಪ್ ಡೆವಲಪರ್‌ಗಳ ಮೇಲೆ ಆಪಲ್‌ ಕಂಪೆನಿ ನಿರ್ಬಂಧ ವಿಧಿಸಿದ್ದು ಆ್ಯಪ್ ಸ್ಟೋರ್ ಮೂಲಕ ತನ್ನ ಬಳಕೆದಾರರನ್ನು ತಲುಪಲು ಶೇ 30ರಷ್ಟು ಕಮಿಷನ್‌ ವಿಧಿಸಲು ಸೂಚಿಸಿರುವುದು ಸ್ಪರ್ಧಾತ್ಮಕ ಕಾಯಿದೆಯ ಪ್ರಾಥಮಿಕ ಉಲ್ಲಂಘನೆಯಾಗಿದೆ ಎಂದು ಆಯೋಗ ತಿಳಿಸಿದೆ. ಆಯೋಗದ ತನಿಖಾ ವಿಭಾಗವಾದ ಡೈರೆಕ್ಟರ್ ಜನರಲ್ ತನಿಖೆ ನಡೆಸಲು ಸಾಕಷ್ಟು ಆಧಾರಗಳಿವೆ ಎಂದು ಸಿಸಿಐ ನಿರ್ದೇಶಿಸಿದೆ.

Also Read
[ಪ್ಲೇಸ್ಟೋರ್ ವಿವಾದ] ಉತ್ತರಿಸಲು ಗೂಗಲ್‌ಗೆ ಜ.5ರ ವರೆಗೆ ಅವಕಾಶ; ಮಾಹಿತಿದಾರರ ಬೆನ್ನತ್ತಲು ಗೂಗಲ್‌ ಯತ್ನ ಎಂದ ಸಿಸಿಐ

ಆಪ್‌ ಸ್ಟೋರ್‌ ಬಳಸದೇ ಅಪ್ಲಿಕೇಷನ್‌ ಡೆವಲಪರ್‌ಗಳನ್ನು ತಲುಪದಂತೆ ತಡೆಯುವುದು ಅಸಮಂಜಸ ಮತ್ತು ಕಾನೂನು ಬಾಹಿರ ನಿರ್ಬಂಧ ಎಂದು ಟುಗೆದರ್ ವಿ ಫೈಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿತ್ತು. ಇತ್ತ ಆಪಲ್‌ “ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆ ಪಾಲು ಕೇವಲ ಶೇ 0-5 ರಷ್ಟು. ಹೀಗಾಗಿ ಮಾರುಕಟ್ಟೆಯಲ್ಲಿ ಯಾವುದೇ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯೆ ನೀಡಿತು.

Also Read
ಸಿಸಿಐ ತನಿಖೆ ಪ್ರಶ್ನಿಸಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮೇಲ್ಮನವಿ: ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಆದರೆ “ಕಾಯಿದೆಯ 4(2)(a), 4(2)(b), 4(2)(c), 4(2)(d) ನಿಯಮಗಳನ್ನು ಆಪಲ್‌ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಶುಕ್ರವಾರ ತಿಳಿಸಿದ ಆಯೋಗ ವಿಸ್ತೃತ ತನಿಖೆ ನಡೆಸಿ 60 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಡಿಜೆ ಕಚೇರಿಗೆ ಸೂಚಿಸಿದೆ.

Related Stories

No stories found.
Kannada Bar & Bench
kannada.barandbench.com