ಕೋವಿಡ್ ಸೋಂಕಿತ ಸಿಎಲ್ಎಟಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ: ‘ಸುಪ್ರೀಂ’ಗೆ ತುರ್ತು ಅರ್ಜಿ ಸಲ್ಲಿಕೆ

ವೇಳಾಪಟ್ಟಿಯಂತೆ ಸಿಎಲ್ಎಟಿ ನಡೆಸಲು 'ಸುಪ್ರೀಂ' ಈ ಹಿಂದೆ ಸೂಚಿಸಿತ್ತು. ಪ್ರಸ್ತುತ ಅರ್ಜಿಯಲ್ಲಿ ಕೋವಿಡ್ ಪೀಡಿತ ಆಕಾಂಕ್ಷಿಗಳಿಗೆ ಸಿಎಲ್ಎಟಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿ ಒದಗಿಸಲಾಗಿದೆಯೇ ಎಂಬ ಕುರಿತು ಸ್ಪಷ್ಟೀಕರಣ ಕೋರಲಾಗಿದೆ.
ಕೋವಿಡ್ ಸೋಂಕಿತ ಸಿಎಲ್ಎಟಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ: ‘ಸುಪ್ರೀಂ’ಗೆ ತುರ್ತು ಅರ್ಜಿ ಸಲ್ಲಿಕೆ
Published on

ಕೋವಿಡ್-19 ಸೋಂಕಿಗೆ ತುತ್ತಾದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಿಎಲ್ಎಟಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಲಾಗಿದೆಯೇ ಎಂಬ ಕುರಿತು ಸ್ಪಷ್ಟನೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.

ಸೆಪ್ಟೆಂಬರ್ 21 ರಂದು ಸುಪ್ರೀಂಕೋರ್ಟ್ ಎನ್‌ಎಲ್‌ಎಸ್‌ಐಯುನ ಪ್ರವೇಶಾತಿ ಪರೀಕ್ಷೆ ವಿರುದ್ಧ ತೀರ್ಪು ನೀಡಿ ವೇಳಾಪಟ್ಟಿಯಂತೆ ಸಿಎಲ್ಎಟಿ ನಡೆಸಲು ನಿರ್ದೇಶಿಸಿತ್ತು.

Also Read
ಸೆ.28ರ ಮಧ್ಯಾಹ್ನ 2 ಗಂಟೆಗೆ ಸಿಎಲ್ಎಟಿ- 2020 ಪ್ರವೇಶಾತಿ ಪರೀಕ್ಷೆ ನಿಗದಿ: ಒಕ್ಕೂಟದಿಂದ ಸೂಚನೆ ಬಿಡುಗಡೆ
Also Read
ಆನ್‌ಲೈನ್ ಮೂಲಕ ಸಿಎಲ್ಎಟಿ- 2020 ಪರೀಕ್ಷೆ ನಡೆಸಲು ಕೋರಿ ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

ಅರ್ಜಿದಾರ ಸೆಪ್ಟೆಂಬರ್ 28ರಂದು ಸಿಎಲ್ಎಟಿ ಪರೀಕ್ಷೆ ಬರೆಯಲಿದ್ದು ಸೂಕ್ತ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಅವರು ಈಗಾಗಲೇ ಐಸೋಲೇಷನ್ ನಲ್ಲಿ ಇದ್ದು ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆಯೇ ಎಂಬ ಕುರಿತು ಸ್ಪಷ್ಟನೆ ಕೋರಿದ್ದಾರೆ.

ಅರ್ಜಿದಾರ ಸೆಪ್ಟೆಂಬರ್ 28ರಂದು ಸಿಎಲ್ಎಟಿ ಪರೀಕ್ಷೆ ಬರೆಯಲಿದ್ದು ಸೂಕ್ತ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಅವರು ಈಗಾಗಲೇ ಐಸೋಲೇಷನ್ ನಲ್ಲಿ ಇದ್ದು ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆಯೇ ಎಂಬ ಕುರಿತು ಸ್ಪಷ್ಟನೆ ಕೋರಿದ್ದಾರೆ.

Also Read
ಸಿಎಲ್ಎಟಿ ಗೃಹ ಕೇಂದ್ರಿತ ಆನ್‌ಲೈನ್ ಪರೀಕ್ಷೆಯಲ್ಲ, ಅತ್ಯಂತ ಸುರಕ್ಷತೆಯಿಂದ ಪರೀಕ್ಷೆ ನಡೆಸಲಾಗುವುದು: ಎನ್ಎಲ್‌ಯುಸಿ
Also Read
ಸಿಎಲ್ಎಟಿ ನಿರಂತರ ಮುಂದೂಡಿಕೆ, ಅಡೆತಡೆಯಿಂದ ಎನ್ಎಲ್ಎಟಿಗೆ ನಿರ್ಧಾರ:ಹೈಕೋರ್ಟ್‌ಗೆ ಎನ್ಎಲ್ಎಸ್ಐಯು ಅಫಿಡವಿಟ್ ಸಲ್ಲಿಕೆ

"ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳ ಒಕ್ಕೂಟದ ನಿಲುವಿನಲ್ಲಾದ ಹಠಾತ್ ಬದಲಾವಣೆಯಿಂದಾಗಿ ಸಂವಿಧಾನದ 14ನೇ ಪರಿಚ್ಛೇದ ಪ್ರತಿಪಾದಿಸುವ ಸಮಾನತೆಯ ಮತ್ತು ಪರೀಕ್ಷೆ ಬರೆಯುವ ತಮ್ಮ ಮೂಲಭೂತ ಹಕ್ಕನ್ನು ನಿರಾಕರಿಸಿದಂತಾಗಿದೆ. ಇಲ್ಲದಿದ್ದರೆ ತಮ್ಮನ್ನೂ ಇತರ ಅಭ್ಯರ್ಥಿಗಳಂತೆ ಪರಿಗಣಿಸಬೇಕು” ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನು ಆಧರಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್-19ಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವಾಲಯಗಳು ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರೀಕ್ಷೆ ನಡೆಯುತ್ತಿದೆ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಲಾಗಿದೆ. ವಕೀಲರಾದ ಗರೀಮಾ ಪ್ರಸಾದ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

Kannada Bar & Bench
kannada.barandbench.com