ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಹೆಸರು ಆರೋಪ: ಆದೇಶ ಕಾಯ್ದಿರಿಸಿದ ದೆಹಲಿ ನ್ಯಾಯಾಲಯ

ವಿಕಾಸ್ ತ್ರಿಪಾಠಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರೌಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ವೈಭವ್ ಚೌರಾಸಿಯಾ, ತೀರ್ಪನ್ನು ಕಾಯ್ದಿರಿಸಿದರು.
Sonia Gandhi
Sonia Gandhi Facebook
Published on

ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿ ನ್ಯಾಯಾಲಯ ಬುಧವಾರ ಕಾಯ್ದಿರಿಸಿದೆ.

ದೂರುದಾರ ವಿಕಾಸ್ ತ್ರಿಪಾಠಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪವನ್ ನಾರಂಗ್ ಅವರ ವಾದ ಆಲಿಸಿದ ರೌಸ್‌ ಅವೆನ್ಯೂ ನ್ಯಾಯಾಲಯದ ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ತೀರ್ಪನ್ನು ಕಾಯ್ದಿರಿಸಿದರು.

Also Read
ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಹೆಸರು: ಎಫ್ಐಆರ್ ದಾಖಲಿಸುವಂತೆ ದೆಹಲಿ ನ್ಯಾಯಾಲಯಕ್ಕೆ ಅರ್ಜಿ

ಸೋನಿಯಾ ಗಾಂಧಿ ಅವರು 1983ರಲ್ಲಷ್ಟೇ ಭಾರತೀಯ ಪೌರತ್ವ ಪಡೆದರಾದರೂ, 1980ರಲ್ಲಿಯೇ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು ಎಂದು  ತ್ರಿಪಾಠಿ ದೂರಿದ್ದರು.

Also Read
ನ್ಯಾಷನಲ್ ಹೆರಾಲ್ಡ್: ರಾಹುಲ್, ಸೋನಿಯಾ ವಿರುದ್ಧದ ಆರೋಪ ಪರಿಗಣನೆ ಕುರಿತು ತೀರ್ಪು ಕಾಯ್ದಿರಿಸಿದ ದೆಹಲಿ ನ್ಯಾಯಾಲಯ

ಸೋನಿಯಾ ಅವರ ಹೆಸರನ್ನು 1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಯಿತು. ಆದರೆ 1982ರಲ್ಲಿ ಅಳಿಸಿಹಾಕಲಾಯಿತು. ನಂತರ 1983ರಲ್ಲಿ ಮತ್ತೆ ಸೇರ್ಪಡೆ ಮಾಡಲಾಯಿತು ಎಂದು ಅವರು ಆರೋಪಿಸಿದ್ದರು.

1980ರಲ್ಲಿ ಮತದಾರರ ಪಟ್ಟಿಗೆ ಅವರ ಹೆಸರು ಸೇರ್ಪಡೆ ಮಾಡುವುದಕ್ಕಾಗಿ ಕೆಲವು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದ್ದು ಸಂಜ್ಞೇಯ ಅಪರಾಧ ಎಸಗಲಾಗಿದೆ. ಆದ್ದರಿಂದ, ಎಫ್‌ಐಆರ್ ದಾಖಲಿಸಲು ಆದೇಶಗಳನ್ನು ಹೊರಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು. ಆಗ ನ್ಯಾಯಾಲಯ ಸೋನಿಯಾ ಅವರಿಗಾಗಲೀ ದೆಹಲಿ ಪೊಲೀಸರಿಗಾಗಲಿ ಔಪಚಾರಿಕ ನೋಟಿಸ್‌ ನೀಡಿರಲಿಲ್ಲ.

Kannada Bar & Bench
kannada.barandbench.com