ಯುವ ವಕೀಲರು ತಮ್ಮ ವೃತ್ತಿಪರ ಯಾನವನ್ನು ತಾಳ್ಮೆ ಮತ್ತು ನಮ್ರತೆಯಿಂದ ಆರಂಭಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಭಾನುವಾರ ಕರೆ ನೀಡಿದರು.
ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯ 32ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಕಾನೂನು ಶಾಲೆಯ ಕುಲಪತಿಯೂ ಆಗಿರುವ ಅವರು ಮಾತನಾಡಿದರು.
ತ್ವರಿತವಾಗಿ ಕಾರ್ಯೋನ್ಮುಖವಾಗಬೇಕು ಎಂಬ ಹಂಬಲ ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲ. ಅಲ್ಲದೆ ಆತುರದಿಂದ ಕೈಗೊಳ್ಳುವ ನಿರ್ಧಾರಗಳು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಅವರು ಕಿವಿಮಾತು ಹೇಳಿದರು.
ಸಿಜೆಐ ಭಾಷಣದ ಪ್ರಮುಖಾಂಶಗಳು
ಸ್ಥಿರವಾದ ಪ್ರಜಾಪ್ರಭುತ್ವ ಇರುವ ಸಂದರ್ಭದಲ್ಲಿ ಉತ್ತಮ ಸಂಸ್ಥೆಗಳಲ್ಲಿ ಬದಲಾವಣೆಗಳು ಹೆಚ್ಚೆಚ್ಚು ನಡೆಯುವಂತೆ ನೋಡಿಕೊಳ್ಳಬೇಕು. ಆತುರದಿಂದ ತೆಗೆದುಕೊಂಡ ನಿರ್ಧಾರಗಳು ನಮ್ಮನ್ನು ಬರಿದುಮಾಡುತ್ತವೆ, ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.
ವಕೀಲ ವೃತ್ತಿ ಗಮನ ಕೇಂದ್ರೀಕರಿಸುವುದನ್ನು ಬಯಸುತ್ತದೆ. ಯುವ ವಕೀಲರು ತಾವು ಗಮನ ಕೇಂದ್ರೀಕರಿಸುವುದರಲ್ಲೇ ದೀರ್ಘಾವಧಿಯಿಂದ ಮಗ್ನರಾಗಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಬೇಕು.
ತಾಳ್ಮೆ ಎಂಬುದು ಅರ್ಥಪೂರ್ಣ ಫಲಿತಾಂಶಗಳಿಗೆ ಕಾರಣವಾಗುತ್ತದೆ.
ವಕೀಲ ವೃತ್ತಿಯಲ್ಲಿ ಹಲವು ಸವಾಲುಗಳಿದ್ದು ಪದವೀಧರರು ದೃಢವಾದ ನೆರವಿನ ಜಾಲ ಸೃಷ್ಟಿಸಿಕೊಳ್ಳಬೇಕು. ಅವರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಬೇಕು.
ಯುವ ವಕೀಲರು ಕೇವಲ ದೊಡ್ಡ ಮನಸ್ಸಿನವರಾಗಿರದೆ, ಸಹಾನುಭೂತಿಯುಳ್ಳ ಮಾನವರಾಗಿರಬೇಕು.
24 ವರ್ಷಗಳ ಕಾಲ ನ್ಯಾಯಾಧೀಶನಾಗಿರುವ ಅನುಭವದಲ್ಲಿ ಹೇಳುವುದಾದರೆ ನ್ಯಾಯಾಲಯದಲ್ಲಿ ವಕೀಲರು ಏಕೆ ಕಕ್ಷಿದಾರರ ಪರವಾಗಿ ವಾದಿಸದೆ ಸ್ವತಃ ಕಕ್ಷಿದಾರರು ಎಂಬ ನೆಲೆಯಲ್ಲಿ ಏಕೆ ವಾದಿಸುತ್ತಾರೆ ಎಂದರೆ ನಾವು ಕೇವಲ ಕಕ್ಷಿದಾರರನ್ನು ಪ್ರತಿನಿಧಿಸುತ್ತಿರುವುದಿಲ್ಲ ಬದಲಿಗೆ ಅವರ ಧ್ವನಿಯಾಗಿರುತ್ತೇವೆ.
ಪದವೀಧರರು ಕಾನೂನು ಕ್ಷೇತ್ರದ ಸಾಂಪ್ರದಾಯಿಕ ಪಾತ್ರಗಳಿಂದ ಹಿಡಿದು ಸಂಶೋಧನೆ, ಬರವಣಿಗೆ ಅಥವಾ ಹಾಸ್ಯಗಾರಿಕೆಯಂತಹ ಸಾಂಪ್ರದಾಯಿಕವಲ್ಲದ ಪಾತ್ರಗಳನ್ನು ನಿರ್ವಹಿಸುತ್ತಿದ್ದು ಅವರು ಏನೇ ಮಾಡಿದರೂ ಆ ಕಾರ್ಯವನ್ನು ಉತ್ಸಾಹದಿಂದ ಮಾಡಬೇಕಿದೆ.