ಉತ್ತರಪ್ರದೇಶ ಪೊಲೀಸರ ಕ್ರೂರ ಹಿಂಸೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ಮೊರೆ ಹೋದ ಮಾಜಿ ಯೋಧ

ಉತ್ತರ ಪ್ರದೇಶ ಪೊಲೀಸರು ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ತಾನು ತೊಟ್ಟಿದ್ದ ಟರ್ಬನ್ (ಪೇಟ) ತೆಗೆದು ತಲೆಗೂದಲು ಎಳೆದಿದ್ದಾರೆ ಎಂದು ಸರ್ದಾರ್ ರೇಷಮ್ ಸಿಂಗ್ ಆರೋಪಿಸಿದ್ದಾರೆ.
ಉತ್ತರಪ್ರದೇಶ ಪೊಲೀಸರ ಕ್ರೂರ ಹಿಂಸೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ಮೊರೆ ಹೋದ ಮಾಜಿ ಯೋಧ

ಉತ್ತರಪ್ರದೇಶ ಪೊಲೀಸರು ತಮ್ಮನ್ನು ಅವಮಾನಿಸಿ ಕ್ರೂರವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ಸೇನೆಯ ಮಾಜಿ ಯೋಧ ರೇಷಮ್‌ ಸಿಂಗ್‌ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಯುತ ತನಿಖೆ ನಡೆಸಬೇಕೆಂದು ಅವರು ಕೋರಿದ್ದಾರೆ.

"ಮುಗ್ಧ ಯೋಧನ ಮೇಲೆ ನಡೆದ ಕ್ರೂರ ದಾಳಿ ಮತ್ತು ಚಿತ್ರಹಿಂಸೆ ರಾಷ್ಟ್ರಕ್ಕಾಗಿ ಜೀವ ಮುಡಿಪಿಟ್ಟ ಸಶಸ್ತ್ರ ಪಡೆಗಳ ಪ್ರತಿಯೊಬ್ಬ ಸಿಬ್ಬಂದಿಗೂ ಮಾಡಿದ ಅವಮಾನ. ನಿವೃತ್ತ ಯೋಧರನ್ನೇ ಹೀಗೆ ನಡೆಸಿಕೊಂಡರೆ ಸಾಮಾನ್ಯ ವ್ಯಕ್ತಿಯ ಗತಿಯೇನು” ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ನ್ಯಾಯಮೂರ್ತಿಗಳಾದ ಪ್ರೀತಿಂಕರ್‌ ದಿವಾಕರ್ ಮತ್ತು ಸಮಿತ್ ಗೋಪಾಲ್ ಅವರಿದ್ದ ವಿಭಾಗೀಯ ಪೀಠವು ಸೂಚನೆಗಳನ್ನು ಪಡೆಯಲು ರಾಜ್ಯದ ಪರ ವಕೀಲರನ್ನು ಕೇಳಿತು. ಜುಲೈ 8ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

ಮೇ 2 ರಂದು ನಿಧನಾರಾದ ತಮ್ಮ ಸೋದರ ಸಂಬಂಧಿಯೊಬ್ಬರಿಗೆ ಅಂತಿಮ ನಮನ ಸಲ್ಲಿಸಲು ಅರ್ಜಿದಾರರಾದ ಸರ್ದಾರ್‌ ರೇಷಮ್‌ ಸಿಂಗ್‌ ಮತ್ತವರ ತಾಯಿ ಹಾಗೂ ಇಬ್ಬರು ಸೋದರಿಯರು ಪೀಲಿಭೀತ್‌ನಿಂದ ಲಖಿಂ ಪುರ್‌ ಕೇರಿಗೆ ಮರುದಿನ ಪ್ರಯಾಣ ಕೈಗೊಂಡಿದ್ದರು. ಪ್ರಯಾಣದ ಉದ್ದೇಶ ಏನೆಂದು ತಿಳಿಯಲು ಪೊಲೀಸರು ಅವರನ್ನು ಅಡ್ಡಗಟ್ಟಿದರು. ದಾಖಲೆಗಳನ್ನು ತೋರಿಸುತ್ತಿದ್ದಾಗ ಪೊಲೀಸರು ಸಿಂಗ್‌ ಮತ್ತು ಅವರ ಕುಟುಂಬವನ್ನು ನಿಂದಿಸಲಾರಂಭಿಸಿದರು. ತಾಯಿ, ಸೋದರಿ ಹಾಗೂ ತನ್ನನ್ನು ಪೊಲೀಸರು ಲಾಠಿ ಕೋಲು ಹಾಗೂ ಮುಷ್ಠಿಗಳಿಂದ ಥಳಿಸತೊಡಗಿದರು. ಹೀಗೆ ಹೊಡೆದದ್ದಲ್ಲದೆ ತಮ್ಮ ಧಾರ್ಮಿಕ ನಂಬಿಕೆಗಳಿಗೂ ಹಾನಿ ಮಾಡಿದರು. ತಮ್ಮ ಟರ್ಬನ್‌ ತೆಗೆದು ತಲೆಗೂದಲು ಎಳೆದರು ಹಾಗೂ ಅದನ್ನು ಕತ್ತರಿಸುವುದಾಗಿ ಬೆದರಿಸಿದರು. ನಂತರ ಪೊಲೀಸ್‌ ಠಾಣೆಗೆ ಕರೆದೊಯ್ದು ಲಾಕಪ್‌ನಲ್ಲಿ ಒಂದು ಮಂಚಕ್ಕೆ ಕಟ್ಟಿಹಾಕಲಾಯಿತು. ಅಲ್ಲಿಯೂ ಥಳಿಸಿದ ಪೊಲೀಸರು ಲಾಠಿಯನ್ನು ತಮ್ಮ ಗುದದ್ವಾರಕ್ಕೆ ತುರುಕಿ ಅವಮಾನಿಸಿದರು. ಕೊನೆಗೆ ಬಿಡುಗಡೆಗೊಳಿಸಿದರು. ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Also Read
ಬ್ರೇಕಿಂಗ್: ಹಾಥ್‌ರಸ್‌ ಸಂತ್ರಸ್ತೆ ಅಂತ್ಯಕ್ರಿಯೆ ಕುರಿತು ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಅಲಹಾಬಾದ್ ಹೈಕೋರ್ಟ್‌

ಪೊಲೀಸರ ದೌರ್ಜನ್ಯ ವಿವರಿಸುವ ವೀಡಿಯೊ ಒಂದನ್ನು ಸಿಂಗ್‌ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದರು. ವೀಡಿಯೊ ವೈರಲ್‌ ಆಗುತ್ತಿದ್ದಂತೆ ಅಧಿಕಾರಿಗಳು ಅವರನ್ನು ಕರೆಸಿ ನ್ಯಾಯಕೊಡಿಸುವುದಾಗಿ ತಿಳಿಸಿದರು. ಇದರ ಹೊರತಾಗಿ ಧರ್ಮಾಧಾರಿತವಾಗಿ ತಮ್ಮ ಮೇಲೆ ದೌರ್ಜನ್ಯ ನಡೆದಿದ್ದರೂ ಸೆಕ್ಷನ್‌ 295ರ ಅಡಿ ಯಾವುದೇ ಪ್ರಕರಣ ದಾಖಲಿಸಲಿಲ್ಲ. ಅಲ್ಲದೆ ಸೆಕ್ಷನ್‌ 377ರ ಅಡಿಯೂ ದೂರು ದಾಖಲಿಸಿಕೊಳ್ಳಲಾಗಿಲ್ಲ ಎಂದು ಆರೋಪಿಸಿರುವ ಅವರು ವಿವಿಧ ಪರಿಹಾರಗಳನ್ನು ಕೋರಿದ್ದಾರೆ.

ಪೊಲೀಸರ ದೌರ್ಜನ್ಯ ವಿವರಿಸುವ ವೀಡಿಯೊ ಒಂದನ್ನು ಸಿಂಗ್‌ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದರು. ವೀಡಿಯೊ ವೈರಲ್‌ ಆಗುತ್ತಿದ್ದಂತೆ ಅಧಿಕಾರಿಗಳು ಅವರನ್ನು ಕರೆಸಿ ನ್ಯಾಯಕೊಡಿಸುವುದಾಗಿ ತಿಳಿಸಿದರು. ಇದರ ಹೊರತಾಗಿ ಧರ್ಮಾಧಾರಿತವಾಗಿ ತಮ್ಮ ಮೇಲೆ ದೌರ್ಜನ್ಯ ನಡೆದಿದ್ದರೂ ಸೆಕ್ಷನ್‌ 295ರ ಅಡಿ ಯಾವುದೇ ಪ್ರಕರಣ ದಾಖಲಿಸಲಿಲ್ಲ. ಅಲ್ಲದೆ ಸೆಕ್ಷನ್‌ 377ರ ಅಡಿಯೂ ದೂರು ದಾಖಲಿಸಿಕೊಳ್ಳಲಾಗಿಲ್ಲ ಎಂದು ಆರೋಪಿಸಿರುವ ಅವರು ವಿವಿಧ ಪರಿಹಾರಗಳನ್ನು ಕೋರಿದ್ದಾರೆ.

ಇತ್ತ ಪೀಲಿಭೀತ್‌ ಪೊಲೀಸರು ತಮ್ಮ ವಿರುದ್ಧದ ಆರೋಪಗಳ ಜೊತೆಗೆ ತನಿಖೆಯ ಮಾಹಿತಿಯನ್ನೂ ನ್ಯಾಯಾಲಯಕ್ಕೆ ನೀಡಿದ್ದಾರೆ. ಅವರ ಪ್ರಕಾರ ಪಂಚಾಯತ್‌ ಚುನಾವಣೆ ಹಿನ್ನೆಲೆಯಲ್ಲಿ ಮೇ 3 ರಂದು ಸಂಚಾರ ಬದಲಾವಣೆ ಮಾಡಲಾಗಿತ್ತು. ಆದರೆ ಬೇರೊಂದು ಮಾರ್ಗದಲ್ಲಿ ಚಲಿಸುವ ಬದಲು ಸಿಂಗ್‌ ಅದೇ ಹಾದಿ ಹಿಡಿದರು. ಕರ್ತವ್ಯ ನಿರತರಾಗಿದ್ದ ರಹೀಶ್‌ ಅಹ್ಮದ್‌ ಎಂಬ ಪೊಲೀಸ್‌ ಸಿಬ್ಬಂದಿ ಮೇಲೆ ಸಿಂಗ್‌ ಹಲ್ಲೆ ನಡೆಸಿದರು. ಈ ಕುರಿತಂತೆ ಸಿಂಗ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮನೆ ದಾಖಲಿಸಲಾಗಿದೆ. ಸಿಂಗ್‌ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಸಾಕ್ಷ್ಯ ನುಡಿದಿದ್ದಾರೆ ಇತ್ಯಾದಿ ಪ್ರತ್ಯಾರೋಪಗಳ ಜೊತೆಗೆ ರೇಷಮ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಿ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿಯೂ ಪೊಲೀಸರ ಪ್ರತಿಕ್ರಿಯಾ ಪತ್ರದಲ್ಲಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರವಿಂದ ವರ್ಮಾ ವಾದ ಮಂಡಿಸಿದ್ದಾರೆ. ವಕೀಲರಾದ ಜಸ್ಪ್ರೀತ್‌ ರೈ, ಸಯ್ಯದ್‌ ಇಮ್ರಾನ್‌ ಇಬ್ರಾಹಿಂ ಅವರಿಗೆ ನೆರವಾಗಿದ್ದಾರೆ. ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ವಕೀಲ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com