ಪ್ರಧಾನಿ ಮೋದಿ, ಶಾ ನೇತೃತ್ವದಲ್ಲಿ ಭಾರತ ಸಂಪೂರ್ಣ ಸುರಕ್ಷಿತ: ಚುನಾವಣಾ ಫಲಿತಾಂಶ ಕುರಿತು ಅಭಿನಂದಿಸಿದ ಬಿಸಿಐ ಅಧ್ಯಕ್ಷ

ತಮ್ಮ ನೇತೃತ್ವದಲ್ಲಿ ಬಿಸಿಐ ಸದಸ್ಯರು ಗೋವಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಮಿಶ್ರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Manan Kumar Mishra , BCI

Manan Kumar Mishra , BCI

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅಭಿನಂದಿಸಿದ್ದಾರೆ.

ಚುನಾವಣಾ ಫಲಿತಾಂಶ ನಾಡಿನ ವಕೀಲ ಸಮುದಾಯದಲ್ಲಿ ಸಂತಸದ ಅಲೆ ಎಬ್ಬಿಸಿದೆ. ದೇಶದ ಮೂಲೆ ಮೂಲೆಗಳಿಂದ ವಕೀಲರ ಸಂಘಗಳ ಪ್ರತಿನಿಧಿಗಳು ಗೌರವಾನ್ವಿತ ನರೇಂದ್ರ ಮೋದಿಜೀ ಅವರಿಗೆ ಅಭಿನಂದನಾ ಸಂದೇಶ ಕಳುಹಿಸಿದ್ದಾರೆ ಎಂದು ಅವರು ನೀಡಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇಡೀ ದೇಶದ ಜನ ಪ್ರಧಾನಿ ಮೋದಿಯವರ ನಾಯಕತ್ವ ಒಪ್ಪಿಕೊಂಡಿದ್ದು ಈ ನಾಯಕತ್ವದಲ್ಲಿ ಭಾರತವು ಬಲಿಷ್ಠವಾಗುತ್ತಿದೆ ಎಂಬುದನ್ನು ಚುನಾವಣಾ ಫಲಿತಾಂಶಗಳು ತೋರಿಸಿವೆ ಎಂದು ಮಿಶ್ರಾ ವಿವರಿಸಿದ್ದಾರೆ.

"ಗೌರವಾನ್ವಿತ ನರೇಂದ್ರ ಮೋದಿಜೀ ಮತ್ತು ಗೌರವಾನ್ವಿತ ಅಮಿತ್ ಶಾ ಅವರ ನಾಯಕತ್ವದಲ್ಲಿ ನಮ್ಮ ಭಾರತ ಸಂಪೂರ್ಣ ಸುರಕ್ಷಿತ ಮತ್ತು ಭದ್ರವಾಗಿದೆ ಎಂಬುದನ್ನು ಈ ಚುನಾವಣಾ ಫಲಿತಾಂಶಗಳು ಸಾಬೀತುಪಡಿಸಿವೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Also Read
ಬಿಸಿಐ ಹಾಗೂ ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಶೇ. 30 ಮಹಿಳಾ ಮೀಸಲಾತಿ ಕಲ್ಪಿಸಲು ಕೋರಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ

ಬಿಸಿಸಿಐ ಮತ್ತು ಇತರ ವಕೀಲ ಪ್ರತಿನಿಧಿಗಳ ಪಾತ್ರವನ್ನು ಚರ್ಚಿಸುತ್ತಾ, ಅಧ್ಯಕ್ಷರ ನೇತೃತ್ವದಲ್ಲಿ ಬಿಸಿಐ ಸದಸ್ಯರು ಗೋವಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

"ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಮುಖ್ಯಮಂತ್ರಿಗಳಾದ ಪ್ರಮೋದ್ ಸಾವಂತ್ ಮತ್ತು ಯೋಗಿ ಜಿ ಅವರು ಕೈಗೊಂಡ ಅಭಿವೃದ್ಧಿ ಮತ್ತು ಕೆಲಸಗಳ ಬಗ್ಗೆ ವಕೀಲರ ಸಂಘಗಳಲ್ಲಿ ಚರ್ಚಿಸಲಾಯಿತು, ವಕೀಲರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದರು. ಹೀಗಾಗಿ ಬಿಜೆಪಿ ಜಯಗಳಿಸಿತು" ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ತಮ್ಮ ನೇತೃತ್ವದಲ್ಲಿ ಬಿಸಿಐ ಸದಸ್ಯರು ಗೋವಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಮಿಶ್ರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಸಿಐ ಮತ್ತು ದೇಶದ ವಕೀಲರ ಪರವಾಗಿ ಪ್ರಧಾನಿಗೆ ಬಿಸಿಐ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com