ದಾಖಲೆ ಸಂಖ್ಯೆಯಲ್ಲಿ ವಕೀಲರ ನೋಂದಣಿ: ಕೆಎಸ್‌ಬಿಸಿ ಇತಿಹಾಸದಲ್ಲಿಯೇ ಹೊಸ ವಿಕ್ರಮ

ಶೀಘ್ರದಲ್ಲೇ ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆಯೂ (ಎಐಬಿಇ) ನಡೆಯುವುದರಿಂದ ಹೆಚ್ಚಿನ ಕಾನೂನು ಪದವೀಧರರು ವಕೀಲಿಕೆಗೆ ನೋಂದಣಿ ಮಾಡಿಸಿದ್ದಾರೆ ಎನ್ನುವ ಅಭಿಪ್ರಾಯವಿದೆ.
Karnataka State Bar Council
Karnataka State Bar Council
Published on

ದಾಖಲೆಯ 2,103 ವಕೀಲರನ್ನು ನೋಂದಣಿ ಮಾಡುವ ಮೂಲಕ 64 ವರ್ಷಗಳ ಇತಿಹಾಸದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಈಚೆಗೆ ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.

ಅಕ್ಟೋಬರ್ 22ರಂದು ಕೆಎಸ್‌ಬಿಸಿಯಿಂದ ಕಾನೂನು ಪದವಿ ಹೊಂದಿರುವವರು ವಕೀಲರ ಸನ್ನದು ಪಡೆಯುವ ಸಂಬಂಧ ನೋಂದಣಿ ಹಮ್ಮಿಕೊಂಡಿತ್ತು. ಅಂದು ವ್ಯಾಪಕವಾಗಿ ವಕೀಲರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ನೋಂದಣಿ ಮಾಡಿಸಿದ್ದಾರೆ. "ಶೀಘ್ರದಲ್ಲೇ ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆಯೂ (ಎಐಬಿಇ) ನಡೆಯುವುದರಿಂದ ಹೆಚ್ಚಿನ ಕಾನೂನು ಪದವೀಧರರು ವಕೀಲಿಕೆಗೆ ನೋಂದಣಿ ಮಾಡಿಸಿದ್ದಾರೆ" ಎಂದು ಕೆಎಸ್‌ಬಿಸಿಯ ನೋಂದಣಿ ಸಮಿತಿ ಸದಸ್ಯ ವಕೀಲ ಹರೀಶ್‌ ಅವರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದ್ದಾರೆ.

ನ್ಯಾಯಾಂಗ, ಕಾರ್ಪೊರೆಟ್‌ ಮತ್ತು ಸರ್ಕಾರಿ ವಲಯದಲ್ಲಿ ವಕೀಲರಿಗೆ ಅವಕಾಶಗಳು ಹೆಚ್ಚೆಚ್ಚು ಸೃಷ್ಟಿಯಾಗುತ್ತಿರುವುದರಿಂದ ಯುವ ಸಮೂಹ ಈ ಕ್ಷೇತ್ರದತ್ತ ಒಲವು ತೋರುತ್ತಿದೆ ಎಂದೂ ಹರೀಶ್‌ ಅವರು ತಿಳಿಸಿದ್ದಾರೆ.

Also Read
ವೃತ್ತಿ ಪ್ರಮಾಣಪತ್ರ ಅರ್ಜಿ ಸಲ್ಲಿಕೆಗೆ ಜನವರಿ 10ರ ಗಡುವು ವಿಧಿಸಿದ ಕೆಎಸ್‌ಬಿಸಿ

ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷಾ (ಎಐಬಿಇ) ನಿಯಮಾವಳಿ ಪ್ರಕಾರ ವಕೀಲರು ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡಲು ಎಐಬಿಇ ಉತ್ತೀರ್ಣರಾಗಿರಬೇಕು.

ನೋಂದಣಿ ಸಮಿತಿಯ ಉಸ್ತುವಾರಿಗಳಾದ ರಮೇಶ್‌ ಎಸ್‌. ನಾಯಕ್‌, ಎನ್‌ ಮಂಜುಳಾ ಮತ್ತು ಸಿಬ್ಬಂದಿ ಸತತವಾಗಿ ಮೂರು ದಿನಗಳ ಕಾಲ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.

Kannada Bar & Bench
kannada.barandbench.com