ಲೋಕಸಭೆಯಲ್ಲಿ 454: 2 ಬಹುಮತದೊಂದಿಗೆ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು. ಆದರೆ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಮಸೂದೆ ಏಕೆ ಅನಿಶ್ಚಿತತೆಯಿಂದ ಕೂಡಿದೆ ಎಂದು ಅವರು ಪ್ರಶ್ನಿಸಿದರು.
Women's Reservation Bill
Women's Reservation Bill
Published on

ಸಂಸತ್‌ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಸಂವಿಧಾನ (128 ನೇ ತಿದ್ದುಪಡಿ) ಮಸೂದೆ- 2023ನ್ನು (ಮಹಿಳಾ ಮೀಸಲಾತಿ ಮಸೂದೆ) ಲೋಕಸಭೆ ಬುಧವಾರ ಅಂಗೀಕರಿಸಿತು.

ಲೋಕಸಭೆಯ ಸದಸ್ಯರು ಚೀಟಿಗಳನ್ನು ಬಳಸಿ ಮಸೂದೆ ಅಂಗೀಕಾರಕ್ಕಾಗಿ ಮತ ಚಲಾಯಿಸಿದರು. 454 ಸಂಸದರು (ಸಂಸದರು) ಮಸೂದೆಯ ಪರವಾಗಿ ಮತ ಹಾಕಿದರೆ, ಇಬ್ಬರು ವಿರುದ್ಧವಾಗಿ ಮತ ಚಲಾಯಿಸಿದರು.

Also Read
ಸಂಸತ್ ವಿಶೇಷ ಅಧಿವೇಶನ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು. ಆದರೆ ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ವಿಚಾರದಲ್ಲಿ ಮಸೂದೆ ಏಕೆ ಅನಿಶ್ಚಿತತೆಯಿಂದ ಕೂಡಿದೆ ಎಂದು ಅವರು ಪ್ರಶ್ನಿಸಿದರು.

ಬಹುಜನ ಸಮಾಜವಾದಿ ಪಕ್ಷದ ಸಂಸದೆ ಸಂಗೀತಾ ಆಜಾದ್‌ ಮಸೂದೆಯನ್ನು ಬೆಂಬಲಿಸಿದರೂ ಮಹಿಳೆಯರಿಗೆ ಶೇ 33ರ ಬದಲಿಗೆ ಶೇ 50ರಷ್ಟು ಮೀಸಲಾತಿ ಒದಗಿಸಬೇಕಿತ್ತು ಎಂದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತನಾಡಿ ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೆ ಮಹಿಳಾ ಮೀಸಲಾತಿ ಅಪೂರ್ಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ಸಂಸದೆ ಕನಿಮೋಳಿ ಅವರು ಮಸೂದೆಯನ್ನು ಮುಕ್ತ ಚರ್ಚೆಗೆ ಅವಕಾಶ ಇಲ್ಲದೆ ಗುಪ್ತವಾಗಿ ಮಂಡಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Also Read
ಸುಪ್ರೀಂನಲ್ಲಿ ಗುರುವಾರ ಕಾವೇರಿ ನದಿ ನೀರು ವಿವಾದದ ವಿಚಾರಣೆ: ಮಧ್ಯಪ್ರವೇಶಿಸಲು ಕೋರಿದ ಬೆಂಗಳೂರಿನ ಎಂಟು ಸಂಸ್ಥೆಗಳು

ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ವಿರೋಧಪಕ್ಷಗಳು ಎತ್ತಿದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಸ್ತುತ ಸಂವಿಧಾನ ಒಬಿಸಿಯನ್ನು ಒಳಗೊಂಡ ಸಾಮಾನ್ಯ ವರ್ಗ ಮತ್ತು ಎಸ್‌ಸಿ ಎಸ್‌ಟಿ ವರ್ಗಗಳಿಂದ ಚುನಾವಣೆಗೆ ಅವಕಾಶ ನೀಡುತ್ತದೆ ಎಂದರು.

ಮಸೂದೆಯ ಪ್ರತಿಯನ್ನು ಓದಿಲ್ಲ ಎಂಬ ಸಂಸದರ ವಿರೋಧ ನಡುವೆಯೇ ಮಂಗಳವಾರ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಸೂದೆ ಮಂಡಿಸಿದ್ದರು. ಮಸೂದೆಯನ್ನು 'ವ್ಯವಹಾರದ ಪೂರಕ ಪಟ್ಟಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ' ಎಂದು ಸರ್ಕಾರ ಸಮರ್ಥಿಸಿಕೊಂಡ ನಂತರ, ಮಸೂದೆಯನ್ನು ಧ್ವನಿ ಮತದ ಮೂಲಕ ಮಂಡಿಸಲಾಗಿತ್ತು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಮಸೂದೆ ಯತ್ನಿಸುತ್ತದೆ. ಈಗಾಗಲೇ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ಗಳಿಗೆ ಮೀಸಲಾಗಿರುವ ಸ್ಥಾನಗಳು ಸಹ ಮಹಿಳಾ ಮೀಸಲಾತಿಯ ವ್ಯಾಪ್ತಿಗೆ ಬರುತ್ತವೆ.

[ಮಸೂದೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Constitution__128th_Amendment__Bill__2023.pdf
Preview
Kannada Bar & Bench
kannada.barandbench.com