ಸ್ನಾನಗೃಹದಿಂದ ಕೇರಳ ಹೈಕೋರ್ಟ್‌ನ ವರ್ಚುವಲ್‌ ವಿಚಾರಣೆಗೆ ಹಾಜರಾದ ವ್ಯಕ್ತಿ!

ಆಗಷ್ಟೇ ನಿದ್ದೆಯಿಂದ ಎಚ್ಚತ್ತಂತೆ ಕಂಡ ವ್ಯಕ್ತಿ ವಾಶ್ ಬೇಸಿನ್ ಇದ್ದ ಕೋಣೆಯಲ್ಲಿ ಅತ್ತಿತ್ತ ಓಡಾಡುತ್ತಾ, ಶೇವ್ ಮಾಡಿಕೊಂಡು, ಹಲ್ಲುಜ್ಜುತ್ತಿರುವುದು ವೀಡಿಯೊದಲ್ಲಿ ಕಂಡುಬಂತು.
Man shaving/brushing before Kerala HC

Man shaving/brushing before Kerala HC

Published on

ಕೋವಿಡ್‌ ಪ್ರಕರಣಗಳು ಉಲ್ಬಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಗಳು ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ಆರಂಭಿಸಿದ ಬಳಿಕ ವಕೀಲರು ಮತ್ತು ದಾವೆದಾರರು ನ್ಯಾಯಾಲಯದ ಶಿಷ್ಟಾಚಾರ ಉಲ್ಲಂಘಿಸುತ್ತಿರುವ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಕೇರಳ ಹೈಕೋರ್ಟ್‌ ಕೂಡ ಅಂತಹದ್ದೊಂದು ಘಟನೆಗೆ ಸೋಮವಾರ ಸಾಕ್ಷಿಯಾಯಿತು.

Also Read
ವರ್ಚುವಲ್‌ ವಿಚಾರಣೆಯಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ: ಜೈಸಿಂಗ್‌ ಆಕ್ಷೇಪ; ನೋಟಿಸ್‌ ನೀಡಲು ಆದೇಶಿಸಿದ ಪೀಠ

ಸೋಮವಾರದಿಂದ ಹೈಕೋರ್ಟ್‌ ಸಂಪೂರ್ಣವಾಗಿ ಆನ್‌ಲೈನ್‌ ಕಲಾಪಕ್ಕೆ ಹೊರಳಿದ್ದು ನ್ಯಾ. ವಿ ಜಿ ಅರುಣ್‌ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿರುವಾಗ ವ್ಯಕ್ತಿಯೊಬ್ಬ ಹಲ್ಲುಜ್ಜುತ್ತಾ, ಕ್ಷೌರ ಮಾಡಿಕೊಳ್ಳುತ್ತಾ ಆಗಾಗ್ಗೆ ಕ್ಯಾಮೆರಾ ಮುಂದೆ ಬರುತ್ತಿರುವುದು ಕಂಡುಬಂದಿತು.

Also Read
ವರ್ಚುವಲ್‌ ವಿಚಾರಣೆ ವೇಳೆ ಮಹಿಳೆ ಜೊತೆ ಚಕ್ಕಂದ: ತಮಿಳುನಾಡು ವಕೀಲರ ಪರಿಷತ್‌ನಿಂದ ಆರೋಪಿ ವಕೀಲ ವಜಾ

ಆಗಷ್ಟೇ ನಿದ್ದೆಯಿಂದ ಎಚ್ಚತ್ತಂತೆ ಕಂಡ ವ್ಯಕ್ತಿ ವಾಶ್‌ ಬೇಸಿನ್‌ ಇದ್ದ ಕೋಣೆಯಲ್ಲಿ ಹಿಂದೆ ಮುಂದೆ ನಡೆಯುತ್ತಿರುವುದು, ಶೇವ್‌ ಮಾಡಿಕೊಂಡು ಹಲ್ಲುಜ್ಜುತ್ತಿರುವುದು ವೀಡಿಯೊದಲ್ಲಿ ಗೋಚರಿಸಿತು. ನ್ಯಾ. ಅರುಣ್‌ ಬಹುಶಃ ಈ ವಿದ್ಯಮಾನವನ್ನು ಗಮನಿಸಲಿಲ್ಲ. ಆದರೆ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತು. ವರ್ಚುವಲ್‌ ವಿಚಾರಣೆ ನಡೆಯುವಾಗ ತಿಳಿಯದೆಯೂ ಇಂತಹ ಚಟುವಟಿಕೆಯಲ್ಲಿ ತೊಡಗುವುದು ಅನುಚಿತ ವರ್ತನೆಯಾಗಿದ್ದು ಅಂತಹ ಹಲವು ನಿದರ್ಶನಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆ ಸಾಲಿಗೆ ಇದು ಮತ್ತೊಂದು ಸೇರ್ಪಡೆ.

Kannada Bar & Bench
kannada.barandbench.com