ಅಪಘಾತ ಪರಿಹಾರ ನಿರ್ಧರಿಸಲು ಪರಿಹಾರ ಕೋರಿದವರ ಅಪಘಾತಾನಂತರದ ಸ್ಥಿತಿ ಅತ್ಯಗತ್ಯ ಅಂಶ: ಸುಪ್ರೀಂ ಕೋರ್ಟ್

ಪರಿಹಾರದ ಮೊತ್ತ ಎಂಬುದು ಇದಮಿತ್ಥಂ ಎಂಬ ಸೂತ್ರದಲ್ಲಿ ಇರುವುದಿಲ್ಲ ಬದಲಿಗೆ ಅದು ಪ್ರತಿ ಪ್ರಕರಣದ ವಾಸ್ತವಾಂಶ ಮತ್ತು ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಸಂತ್ರಸ್ತರಿಂದ ಸಂತ್ರಸ್ತರಿಗೆ ಬದಲಾಗುತ್ತಿರುತ್ತದೆ ಎಂದಿದೆ ಪೀಠ.
Supreme Court, Motor Accident

Supreme Court, Motor Accident

ಮೋಟಾರು ಅಪಘಾತ ಪರಿಹಾರದಲ್ಲಿ ನೋವು, ಯಾತನೆ, ಕಳೆದುಕೊಂಡ ಸವಲತ್ತು ಹಾಗೂ ಖುಷಿ ಇತ್ಯಾದಿಗಳ ಅಡಿ ನೀಡಬೇಕಾದ ಪರಿಹಾರದ ಮೊತ್ತವನ್ನು ಏಕಸೂತ್ರದ ಆಧಾರದಲ್ಲಿ ಲೆಕ್ಕ ಹಾಕಲಾಗದು ಎಂಬುದಾಗಿ ಸುಪ್ರೀಂ ಕೋಟ್‌ ಶುಕ್ರವಾರ ಹೇಳಿದೆ [ಶ್ರೀ ಬೆನ್ಸನ್ ಜಾರ್ಜ್ ಮತ್ತು ರಿಲಯನ್ಸ್ ಜನರಲ್ ವಿಮಾ ಕಂಪನಿ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಅಪಘಾತಕ್ಕೆ ನೀಡುವ ಪರಿಹಾರ ಎಂಬುದು ಪರಿಹಾರ ಪಡೆಯುವವರ ಅಪಘಾತಾನಂತರದ ಸ್ಥಿತಿಯನ್ನೂ ಕೂಡ ಅವಲಂಬಿಸಿರುತ್ತದೆ. ಪರಿಹಾರ ಕೋರಿದವರು ಅನುಭವಿಸಿದ ನೋವು, ಸಂಕಟ ಆಘಾತವನ್ನು ಹಣದ ಪರಿಭಾಷೆಯಲ್ಲಿ ಸರಿದೂಗಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಅಪಘಾತವೊಂದರಲ್ಲಿ 29 ವರ್ಷದ ವ್ಯಕ್ತಿಯೊಬ್ಬರ ಮೆದುಳಿಗೆ ಗಾಯವಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಕೋಮಾಸ್ಥಿತಿಯಲ್ಲೇ ಉಳಿದರು. ಮೋಟರು ಅಪಘಾತ ಪರಿಹಾರ ನ್ಯಾಯಮಂಡಳಿ ಅಪಘಾತಕ್ಕೀಡಾದ ವ್ಯಕ್ತಿಗೆ ₹94,37,300 ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಸೂಚಿಸಿತು.

Also Read
[ಚುಟುಕು] ಕುಡಿದ ಮತ್ತಿನಲ್ಲಿ ಮಾಡಿದ ಅಪಘಾತ ಸಣ್ಣ ಪ್ರಮಾಣದ್ದು ಎಂದ ಮಾತ್ರಕ್ಕೆ ಚಾಲಕನಿಗೆ ಸೈರಣೆ ತೋರಲಾಗದು: ಸುಪ್ರೀಂ

ಆದರೆ ಇದನ್ನು ಪ್ರಶ್ನಿಸಿ ಪರಿಹಾರ ಕೋರಿದವರು ಮತ್ತು ವಿಮಾ ಕಂಪೆನಿ ಎರಡೂ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದವು. ಪರಿಹಾರ ಮೊತ್ತವನ್ನು ₹1,24,94,333ಗೆ ಹೆಚ್ಚಿಸಿ ನ್ಯಾಯಾಲಯ ಆದೇಶ ಹೊರಡಿಸಿತು. ಆದರೆ ಇನ್ನೂ ಹೆಚ್ಚಿನ ಪರಿಹಾರ ಅಗತ್ಯವಿದೆ ಎಂದು ಪರಿಹಾರ ಕೋರಿದವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮನವಿಯನ್ನು ಭಾಗಶಃ ಅಂಗೀಕರಿಸಿದ ನ್ಯಾಯಾಲಯ ಪರಿಹಾರ ಮೊತ್ತವನ್ನು ವಾರ್ಷಿಕ ಶೇ 6ರಷ್ಟು ಬಡ್ಡಿದರದೊಂದಿಗೆ ₹1,41,94,333ಕ್ಕೆ ಹೆಚ್ಚಿಸಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Sri_Benson_George_v__Reliance_General_Insurance_Company_Limited_and_Another.pdf
Preview

Related Stories

No stories found.
Kannada Bar & Bench
kannada.barandbench.com