ಜಪಾನ್‌ನಿಂದ ನೇತಾಜಿ ಅಸ್ಥಿ ತರಲು ಕಲ್ಕತ್ತಾ ಹೈಕೋರ್ಟ್‌ಗೆ ಮೊರೆ: ಚರಿತ್ರೆ ತಿರುಚದಂತೆ ಕ್ರಮ ಕೈಗೊಳ್ಳಲು ಮನವಿ

ಸ್ವಾತಂತ್ರ್ಯ ಚಳವಳಿ ಕುರಿತು ಚಲನಚಿತ್ರಗಳು, ಪುಸ್ತಕಗಳು ಮತ್ತಿತರ ಪ್ರಕಟಣೆಗಳಲ್ಲಿ ಚಿತ್ರಿಸಲಾದ ಘಟನೆಗಳ ಐತಿಹಾಸಿಕ ಸತ್ಯಾಸತ್ಯತೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
Calcutta High Court and Subhash Chandra Bose
Calcutta High Court and Subhash Chandra Bose

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ಸ್ವಾತಂತ್ರ್ಯ ಚಳವಳಿ ಕುರಿತಂತೆ ಕುರಿತಂತೆ ಸಾಹಿತ್ಯ ಮತ್ತು ಚಲನಚಿತ್ರಗಳಲ್ಲಿ ಇತಿಹಾಸ ತಿರುಚುವುದು, ತಪ್ಪು ಮಾಹಿತಿ ನೀಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕೋರಿ ನೇತಾಜಿ ಅವರ ವಂಶಸ್ಥ ಚಂದ್ರಕುಮಾರ್ ಬೋಸ್ ಅವರು ಕಲ್ಕತ್ತಾ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಅಲ್ಲದೆ ಜಪಾನ್‌ನ ಟೋಕಿಯೊದಲ್ಲಿರುವ ರೆಂಕೋಜಿ ಬೌದ್ಧಮಂದಿರದಲ್ಲಿ ಇರಿಸಿರುವ ನೇತಾಜಿ ಅವರ ಅಸ್ಥಿಯನ್ನು ಭಾರತಕ್ಕೆ ಮರಳಿ ತರಲು (ಸಂಬಂಧಿಗಳು ಸೇರಿದಂತೆ) ಉನ್ನತ ಪ್ರತಿನಿಧಿಗಳ ತಂಡವೊಂದನ್ನು ರಚಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Also Read
ಪಿಐಎಲ್ ನ ಅಪಹಾಸ್ಯ: ನೇತಾಜಿ ಜನ್ಮದಿನದಂದು ರಾಷ್ಟ್ರೀಯ ರಜೆ ಘೋಷಿಸಲು ಕೋರಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸ್ವಾತಂತ್ರ್ಯ ಚಳವಳಿಯ ಕುರಿತು ಚಲನಚಿತ್ರಗಳು, ಪುಸ್ತಕಗಳು ಮತ್ತಿತರ ಪ್ರಕಟಣೆಗಳಲ್ಲಿ ಚಿತ್ರಿಸಲಾದ ಘಟನೆಗಳ ಐತಿಹಾಸಿಕ  ಸತ್ಯಾಸತ್ಯತೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ ಎಂದು ಅರ್ಜಿದಾರರು ಹೇಳಿದ್ದಾರೆ.ನೇತಾಜಿ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿರುವ ಮತ್ತು ಅವರ ಜೀವನ ಚರಿತ್ರೆಯನ್ನು ತಿರುಚಿರುವುದರ ಬಗ್ಗೆ ಮನವಿ ಕಳವಳ ವ್ಯಕ್ತಪಡಿಸಿದೆ.

"ಸುಭಾಷ್ ಚಂದ್ರ ಬೋಸ್ ಅವರು ಪುರಾಣ ಅಥವಾ ಕಾಲ್ಪನಿಕ ಕಥೆಗಳಿಂದ ಸೃಷ್ಟಿಸಲಾದ ಪಾತ್ರವಲ್ಲ ಜೀವನ ಮತ್ತು ಪರಂಪರೆ ಕಥೆ ಕಟ್ಟುವ ಮತ್ತು ವದಂತಿಗಳನ್ನು ಹರಡುವವರ ಕಲ್ಪನೆಗೆ ಮುಕ್ತವಾದುದಲ್ಲ. ಉಪಖಂಡದ ಚರಿತ್ರೆಯಲ್ಲೇ ಅತ್ಯಂತ ಪ್ರಕ್ಷ್ಯುಬ್ಧ ಸಂದರ್ಭದಲ್ಲಿ ಅವರು ಬದುಕಿದ್ದು ದೇಶಕ್ಕೆ ಸೇವೆ ಸಲ್ಲಿಸಿದರು. ಅವರ ಕೊಡುಗೆ ಮತ್ತು ಕೈಗೊಂಡ ಕ್ರಮಗಳು ಸ್ವತಂತ್ರ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಮತ್ತು ಸಕಾರಾತ್ಮಕ ಪ್ರಭಾವ ಬೀರಿವೆ ಎಂದು ಅರ್ಜಿ ತಿಳಿಸಿದೆ.  

Also Read
ಬೋಸ್‌ ಕಣ್ಮರೆ ಸತ್ಯ ಶೋಧನಾ ಸಮಿತಿ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಕೆ ಮುಖರ್ಜಿ ನಿಧನ

ಈಗಿನ ಸರ್ಕಾರ ರಹಸ್ಯ ಪಟ್ಟಿಯಿಂದ ತೆಗೆದು ಹಾಕಿರುವ ಕೆಳಗಿನ ದಾಖಲೆಗಳ ಪ್ರಕಾರ  ನೇತಾಜಿ ಆಗಸ್ಟ್ 18, 1945 ರಂದು ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ನಿರ್ಣಾಯಕವಾಗಿ ಸಾಬೀತುಪಡಿಸಿವೆ ಎಂದು ಮನವಿ ಹೇಳಿದೆ:

1) ಜಪಾನೀಸ್ ಪ್ರಿಲಿಮಿನರಿ ರಿಪೋರ್ಟ್‌, ಸೆಪ್ಟೆಂಬರ್ 1945

2) ಬ್ರಿಟಿಷ್-ಭಾರತ ಸರ್ಕಾರದ ವರದಿ, ಅಕ್ಟೋಬರ್ 1945

3) ಫಿಗ್ಜೆಸ್ ವರದಿ, ಜುಲೈ 1946

4) ಹರಿನ್ ಶಾ (ಖಾಸಗಿ) ವರದಿ, ಸೆಪ್ಟೆಂಬರ್ 1946

5) ಟರ್ನರ್ ವರದಿ, ಅಕ್ಟೋಬರ್ 1946

6) ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ನ (ಖಾಸಗಿ) ವರದಿ, ಜೂನ್ 1954

7) ಜಪಾನೀಸ್ ಡಿಟೇಲ್ಡ್‌ ರಿಪೋರ್ಟ್‌, ಜನವರಿ 1956

8) ತೈವಾನ್ ಸರ್ಕಾರದ ವರದಿ, ಜೂನ್ 1956

9) ಶಾನ್ ನವಾಜ್ ಖಾನ್ ಸಮಿತಿ ವರದಿ, ಆಗಸ್ಟ್ 1956

10) ನ್ಯಾಯಮೂರ್ತಿಖೋಸ್ಲಾಆಯೋಗದವರದಿ, 1974

Related Stories

No stories found.
Kannada Bar & Bench
kannada.barandbench.com