ದೇಶದ ಹೆಸರಿಗೆ ಮಸಿ, ಕೋಮು ದ್ವೇಷ ಬಿತ್ತನೆ: ಪ್ರಮುಖ ಸಾಮಾಜಿಕ ಮಾಧ್ಯಮಗಳ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್‌ಗೆ ದೂರು

ದೇಶದ ಹೆಸರಿಗೆ ಮಸಿ, ಕೋಮು ದ್ವೇಷ ಬಿತ್ತನೆ: ಪ್ರಮುಖ ಸಾಮಾಜಿಕ ಮಾಧ್ಯಮಗಳ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್‌ಗೆ ದೂರು

ವಾಟ್ಸಾಪ್ ತನ್ನ ನೂತನ ಗೌಪ್ಯತಾ ನೀತಿಯನ್ನು ತಕ್ಷಣ ರದ್ದುಪಡಿಸುವಂತೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅಶ್ಲೀಲ, ಕೋಮುಪ್ರಚೋದಕ, ಅನಿಯಂತ್ರಿತ ಮತ್ತು ಕಾನೂನಿಂದ ನಿರ್ಬಂಧಿತವಾದ ವಿಚಾರಗಳನ್ನು ಪ್ರಕಟಿಸುತ್ತಿರುವುದಕ್ಕಾಗಿ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ.

ಮಾತ್ರ್‌ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ ಅರ್ಜಿಯಲ್ಲಿ ಲೈಂಗಿಕ ದಾಳಿ ವಿಚಾರ, ದೇವಾನುದೇವತೆ ಧರ್ಮ ವಿರೋಧಿ ವಿಷಯಗಳು, ಸರ್ಕಾರ, ಸಶಸ್ತ್ರ ಪಡೆಗಳು ಮತ್ತಿತರ ಅಂಗಗಳ ವಿರುದ್ಧ ಮಾನಹಾನಿಕರ ಸಂಗತಿಗಳಿಗೆ ಅನುವು ಮಾಡಿಕೊಡುವ ಮೂಲಕ , ಸಾಮಾಜಿಕ ಮಾಧ್ಯಮ ವೇದಿಕೆಗಳು ಕೋಮು ದ್ವೇಷ, ದ್ವೇಷಾಪರಾಧ, ಆರ್ಥಿಕ ಅಪರಾಧಕ್ಕೆ ಎಡೆ ಮಾಡಿಕೊಡುತ್ತಿವೆ ಎಂದು ಆರೋಪಿಸಲಾಗಿದೆ.

Also Read
ಸಾಮಾಜಿಕ ಜಾಲತಾಣದಲ್ಲಿ ಅನೈತಿಕ ವಿಷಯ, ಸೇಡಿನ ಅಶ್ಲೀಲತೆಯ ಪ್ರಸರಣ ಪ್ರಶ್ನಿಸಿ ಪಿಐಎಲ್: ನೋಟಿಸ್ ನೀಡಿದ ‘ಸುಪ್ರೀಂ’

ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೇ ಇರುವ ಕಾರಣ ಕೋಮುದ್ವೇಷ, ದಂಗೆ, ಭಾರತ ಸರ್ಕಾರ, ನ್ಯಾಯಾಂಗ, ಕಾರ್ಯಾಂಗ, ಸ್ವಾತಂತ್ರ್ಯ ಹೋರಾಟಗಾರರು, ಸೇನಾಪಡೆಗಳು ಹಾಗೂ ಧರ್ಮ, ದೇವರು, ದೇವತೆಗಳ ವಿರುದ್ಧ ಧರ್ಮನಿಂದೆಯ ವಿಷಯಗಳನ್ನು ಇವು ಹರಡುತ್ತಿವೆ. ಇದು ಜಗತ್ತಿನೆಲ್ಲೆಡೆ ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣ ನೀಡುತ್ತದೆ ಮಾತ್ರವಲ್ಲ ದೇಶದೊಳಗೆ ಅನಾಹುತ ಸೃಷ್ಟಿಸುತ್ತಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮಹಿಳೆಯರು ಮತ್ತು ಅಪ್ರಾಪ್ತರ ಘನತೆಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಸಂಗತಿಗಳು ಈ ವೇದಿಕೆಗಳ ಮೂಲಕ ವಿಫುಲವಾಗಿ ದೊರೆಯುತ್ತಿವೆ. ಅಲ್ಲದೆ ಬೌದ್ಧಿಕ ಆಸ್ತಿ ಕಾನೂನು ಉಲ್ಲಂಘನೆ, ಆನ್‌ಲೈನ್‌ ಬಾಜಿ ಮತ್ತು ಜೂಜಿಗೆ ಸಂಬಂಧಿಸಿದ ನಿಯಂತ್ರಣಗಳು ಹಾಗೂ ಮಾಹಿತಿ ಗೌಪ್ಯತೆಯನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

Also Read
ಫೇಸ್‌ಬುಕ್ ಭಾರತದ ಮುಖ್ಯಸ್ಥರಿಗೆ ದೆಹಲಿ ಸರ್ಕಾರದ ಸಮಿತಿಯಿಂದ ಸಮನ್ಸ್‌: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಫೇಸ್‌ಬುಕ್

ಹೀಗಾಗಿ ಈ ಕೆಳಗಿನ ಮಧ್ಯಂತರ ಪರಿಹಾರಗಳನ್ನು ಅರ್ಜಿಯಲ್ಲಿ ಕೋರಲಾಗಿದೆ:

  • ಆಕ್ಷೇಪಾರ್ಹ ಸಂಗತಿಗಳನ್ನು ತೆಗೆದುಹಾಕುವುದು.

  • ಅಪ್‌ಲೋಡ್ ಮಾಡಿದ 24 ಗಂಟೆ ಒಳಗೆ ಆಕ್ಷೇಪಾರ್ಹ ವಿಷಯ ತೆಗೆದುಹಾಕಲು ಕಂಪೆನಿಗಳು ನೀತಿ ರೂಪಿಸುವುದು.

  • 2000ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 ಮತ್ತು 69 ಎ ಅಡಿಯಲ್ಲಿ ನೀಡಲಾದ ಅಧಿಕಾರಗಳಿಂದ ಆಕ್ರಮಣಕಾರಿ ವಿಚಾರಗಳನ್ನು ಭೌಗೋಳಿಕವಾಗಿ ನಿರ್ಬಂಧಿಸುವುದು.

ಸಾಮಾಜಿಕ ಜಾಲತಾಣಗಳು ಗೌಪ್ಯತೆ ಮತ್ತು ಮಾಹಿತಿ ಕದಿಯುವಿಕೆಗೆ ಪ್ರಚೋದನೆ ನೀಡುತ್ತಿವೆ ಎಂದು ಆರೋಪಿಸಿರುವ ಅರ್ಜಿ ವಾಟ್ಸಾಪ್‌ ತನ್ನ ನೂತನ ಗೌಪ್ಯತಾ ನೀತಿಯನ್ನು ತಕ್ಷಣ ರದ್ದುಪಡಿಸುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ. ವಕೀಲರಾದ ಅಮಯ್ ಬಜಾಜ್, ಆಶಿ ವೈದ್ಯ, ಮಾನ್ಸಿ ದುಬೆ, ಪರಿತೋಷ್ ಶ್ರೀವಾಸ್ತವ ಮತ್ತು ಪೂರ್ವಿ ಖಂಡೇಲ್ವಾಲ್ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.

ವಾಟ್ಸಾಪ್‌ ವಿರುದ್ಧ ಇದೇ ಬಗೆಯ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಕೂಡ ಸಲ್ಲಿಸಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ ಕಳೆದ ಅಕ್ಟೋಬರ್‌ನಲ್ಲಿ ಸರ್ವೋಚ್ಛ ನ್ಯಾಯಾಲಯ ಅತ್ಯಾಚಾರದ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮತ್ತು ವೀಕ್ಷಣೆ ಮಾಡದಂತೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Related Stories

No stories found.
Kannada Bar & Bench
kannada.barandbench.com