ನ್ಯಾಯಾಲಯಗಳು ಮತ್ತು ನ್ಯಾಯಾಧೀಶರನ್ನು ರಕ್ಷಿಸುವುದು ವಕೀಲರ ಕರ್ತವ್ಯ. ವಕೀಲರು ನ್ಯಾಯಾಂಗವನ್ನು ತಾಯಿಯಂತೆ ಕಾಣಬೇಕು. ಅದರಿಂದ ಅವರ ಘನತೆ ಹೆಚ್ಚುತ್ತದೆ ಎಂದು ಕಲ್ಕತ್ತ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಟಿಎಸ್ ಶಿವಜ್ಞಾನಂ ಅವರು ಶನಿವಾರ ಹೇಳಿದರು.
ಶನಿವಾರ ನಡೆದ ಹೊಸದಾಗಿ ವಿಭಜಿತವಾದ ಅಲಿಪುರ್ದೂರ್ ನ್ಯಾಯಾಂಗ ಜಿಲ್ಲೆಗಾಗಿ ನಿರ್ಮಿಸಲಾದ ನೂತನ ಜಿಲ್ಲಾ ನ್ಯಾಯಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
''ಜಿಲ್ಲಾ ನ್ಯಾಯಾಲಯವನ್ನು ನಿಮ್ಮ ತಾಯಿ ಎಂದು ಪರಿಗಣಿಸಿ, ಆಕೆ ನಿಮ್ಮನ್ನು ಘನತೆಯಿಂದ ನಡೆಸಿಕೊಳ್ಳುತ್ತಾಳೆ, ಗಂಗಾ ನದಿಯ ಸನ್ನಿಧಿಯಲ್ಲಿ ವಕೀಲಿಕೆ ಮಾಡಲು ಸಾಧ್ಯವಿಲ್ಲದ ಕಾರಣ ನ್ಯಾಯಾಲಯಗಳನ್ನು ರಕ್ಷಿಸುವುದು ನಿಮ್ಮ ಕರ್ತವ್ಯ, ನಿಮಗೆ ನ್ಯಾಯಾಲಯಗಳು ಬೇಕು, ಆದ್ದರಿಂದ ನೀವು ನ್ಯಾಯಾಲಯಗಳು, ನ್ಯಾಯಾಧೀಶರು ಹಾಗೂ ಇದಕ್ಕೆ ಪ್ರತಿಯಾಗಿ ನೀವು ಪ್ರತಿಫಲವನ್ನು ಪಡೆದು ವಕೀಲಿಕೆ ವೃತ್ತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತೀರಿ” ಎಂದು ಎಸಿಜೆ ಹೇಳಿದರು.
ಹೊಸ ನ್ಯಾಯಾಂಗ ಜಿಲ್ಲೆಯ ವಿಭಜನೆಯಿಂದ ವಕೀಲರ ವೃತ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಧೀಶರು ವಕೀಲರಿಗೆ ಭರವಸೆ ನೀಡಿದರು.
"ನಾನು ಇದುವರೆಗಿನ ನನ್ನ ವೃತ್ತಿಜೀವನದಲ್ಲಿ ನೋಡಿದ್ದೇನೆ, ನ್ಯಾಯಾಂಗ ಜಿಲ್ಲೆ ವಿಭಜನೆಯಾದಾಗ, ಆ ಜಿಲ್ಲೆಯ ವಕೀಲರು ತಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೆದರುತ್ತಾರೆ. ಹೊಸ ಜಿಲ್ಲೆಯ ಹೊಸ ವಕೀಲರು ತಮ್ಮ ಕೆಲಸ ಕಸಿದುಕೊಳ್ಳುತ್ತಾರೆ ಇದರಿಂದ ಪ್ರಕರಣಗಳು ತಮಗೆ ಸಿಗುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಅದು ಹಾಗಲ್ಲ, ಅಂತಹ ಪ್ರತಿ ಹೊಸ ವಿಭಜನೆಯೊಂದಿಗೆ, ವಕೀಲರು ಪ್ರವರ್ಧಮಾನಕ್ಕೆ ಬರುವುದನ್ನು ಕಂಡಿದ್ದೇನೆ. ಹೀಗಾಗಿ ಹೆದರುವ ಅಗತ್ಯವಿಲ್ಲ” ಎಂದು ಅಭಯ ನೀಡಿದರು.
ಅವರು ಅಲಿಪುರ್ದೂರ್ ಜಿಲ್ಲೆಯಲ್ಲಿ ಹೆಚ್ಚಿನ ದೀನದಲಿತ ಸಮುದಾಯಗಳು ವಾಸವಾಗಿರುವುದರಿಂದ ಆ ಜನರ ಹಕ್ಕುಗಳನ್ನು ರಕ್ಷಿಸುವುದು ವಕೀಲರ ಕರ್ತವ್ಯವಾಗಿದೆ ಎಸಿಜೆ ಶಿವಜ್ಞಾನಂ ಎಂದು ತಿಳಿಸಿದರು.
ಸಮಾರಂಭದಲ್ಲಿ ರಾಜ್ಯದ ಕಾನೂನು ಸಚಿವ ಮೊಲೊಯ್ ಘಟಕ್ ಮತ್ತು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ರವಿ ಕ್ರಿಶನ್ ಕಪೂರ್ ಅವರು ಉಪಸ್ಥಿತರಿದ್ದರು, ಅವರು ಜಲ್‌ಪಾಯ್‌ಗುರಿ ಜಿಲ್ಲೆಯ ರಕ್ಷಕ ನ್ಯಾಯಾಧೀಶರಾಗಿದ್ದಾರೆ, ಜಲ್‌ಪಾಯ್‌ಗುರಿ ಜಿಲ್ಲೆಯಿಂದ ಅಲಿಪುರ್ದುವಾರ್ ನ್ಯಾಯಾಂಗ ಜಿಲ್ಲೆಯಾಗಿ ವಿಭಜಿತವಾಗಿದೆ.