

ಪರಹಿತ ಚಿಂತನೆಯ ದೃಷ್ಟಿಯಿಂದ ಅಗತ್ಯವಾಗಿರುವ ವ್ಯಕ್ತಿಗೆ ಯಾವುದೇ ಪ್ರತಿಫಲಾಪೇಕ್ಷೆ ಪಡೆಯದೆ ತನ್ನ ಒಂದು ಮೂತ್ರಪಿಂಡ (ಕಿಡ್ನಿ) ನೀಡಲು ವೈದ್ಯೆಯೊಬ್ಬರು ಮುಂದಾಗಿರುವ ವಿರಳಾತೀವಿರಳ ಪ್ರಕರಣಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್ ಸಾಕ್ಷಿಯಾಗಿದೆ.
ಆಸ್ಪತ್ರೆ ಆಧಾರಿತ ಅಧಿಕಾರ ಸಮಿತಿಯ (ಎಚ್‌ಬಿಎಸಿ) ಮುಖ್ಯಸ್ಥರು ತನ್ನ ಕಿಡ್ನಿ ನೀಡುವುದಕ್ಕೆ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ 58 ವರ್ಷದ ವೈದ್ಯೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
“ಪರಹಿತ ಚಿಂತನೆಯ ದೃಷ್ಟಿಯಿಂದ ಅಗತ್ಯವಾಗಿರುವ ವ್ಯಕ್ತಿಗೆ ಯಾವುದೇ ಪರಿಹಾರ ಪಡೆಯದೆ ತನ್ನ ಒಂದು ಮೂತ್ರಪಿಂಡ
“ಅರ್ಜಿದಾರೆಯು ವೃತ್ತಿಯಿಂದ ವೈದ್ಯೆಯಾಗಿದ್ದು, ವಯಸ್ಕರಾಗಿದ್ದಾರೆ. ಕಿಡ್ನಿ ದಾನ ಮಾಡುವುದರ ಬಗ್ಗೆ ಅವರಿಗೆ ಅರಿವಿದ್ದು, ತನ್ನ ಸ್ವಚ್ಛೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಿಡ್ನಿದಾನ ಮಾಡಲು ಅವರು ಮುಂದಿರುವ ನಿರ್ಧಾರವನ್ನು ಪುರಸ್ಕರಿಸಲಾಗಿದೆ” ಎಂದು ಪೀಠ ಆದೇಶಿಸಿದೆ.
“ಅರ್ಜಿದಾರ ವೈದ್ಯೆಯ ಕಿಡ್ನಿಯು ಯಾವ ವ್ಯಕ್ತಿಗೆ ಹೊಂದಾಣಿಕೆಯಾಗುತ್ತದೆ ಎಂಬುದಕ್ಕೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ನಡೆಸಿ, ಅದನ್ನು ಸಮಿತಿಯ ಮುಂದೆ ಇಡಬೇಕು. ಇದನ್ನು ಪರಿಗಣಿಸಿ ಸಮಿತಿಯು ಒಂದು ವಾರದಲ್ಲಿ ನಿರ್ದೇಶನ ನೀಡಬೇಕು” ಎಂದು ಆದೇಶಿಸಿದೆ.
ವೈದ್ಯೆ ಪರ ವಕೀಲ ಶ್ರೀಪಾದ ವೆಂಕಟ ಜೋಗರಾವ್ ಅವರು “ಯಾವ ವ್ಯಕ್ತಿಗೆ ಕಿಡ್ನಿ ನೀಡಬೇಕು ಎಂಬುದನ್ನೂ ವೈದ್ಯೆ ನಿರ್ಧರಿಸುವುದಿಲ್ಲ. ಸಂಬಂಧಿತ ಆಸ್ಪತ್ರೆಯು ಅಗತ್ಯವಿರುವ ರೋಗಿಯನ್ನು ಹುಡುಕಬಹುದು. ಎಲ್ಲಾ ರೀತಿಯ ಪರೀಕ್ಷೆಗಳು ಹೊಂದಿಕೆಯಾದರೆ ಯಾವುದೇ ಪರಿಹಾರ ಪಡೆಯದೇ ತನ್ನ ಒಂದು ಕಿಡ್ನಿಯನ್ನು ನೀಡಲು ವೈದ್ಯೆಗೆ ಯಾವುದೇ ಆಕ್ಷೇಪವಿಲ್ಲ” ಎಂದರು.
ಮಣಿಪಾಲ್ ಆಸ್ಪತ್ರೆ ಮತ್ತು ಎಚ್‌ಬಿಎಸಿ ಪ್ರತಿನಿಧಿಸಿದ್ದ ವಕೀಲ ಮುಜ್ತಬಾ ಅವರು “ವೈದ್ಯೆಯ ಕಿಡ್ನಿ ಹೊಂದಬಹುದಾದ ಐವರು ಅಸಂಬಂಧಿತ ವ್ಯಕ್ತಿಗಳನ್ನು ಪತ್ತೆ ಮಾಡಲಾಗಿದೆ. ಅವರು ಈ ಕಿಡ್ನಿ ಪಡೆಯುವುದರಿಂದ ಯಾವುದೇ ಸಮಸ್ಯೆಯಿಲ್ಲ. ಕಿಡ್ನಿ ಹೊಂದಾಣಿಕೆ ಮತ್ತು ಇತರೆ ವಿಚಾರಗಳನ್ನು ಪರಿಶೀಲಿಸಲು ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಿದೆ. ಇದಕ್ಕೆ ತಿಂಗಳ ಕಾಲಾವಕಾಶ ಬೇಕಾಗಬಹುದು” ಎಂದಿದ್ದರು.
ಇದನ್ನು ಆಲಿಸಿದದ್ ಪೀಠವು ಮಣಿಪಾಲ್ ಆಸ್ಪತ್ರೆ ಮತ್ತು ಎಚ್‌ಬಿಎಸಿಯು ಅರ್ಜಿದಾರ ವೈದ್ಯೆ ನೀಡುವ ಕಿಡ್ನಿ ಪಡೆಯಲು ಯಾರು ಅರ್ಹರಾಗಿದ್ದಾರೆ ಎಂಬುದನ್ನು ಪರಿಶೀಲಿಸಲು ಸೂಚಿಸಿದೆ. “ಕಿಡ್ನಿ ದಾನ/ಸ್ವೀಕಾರ ಮಾಡುವುದಕ್ಕೂ ಮುನ್ನ ಹಲವು ಪರೀಕ್ಷೆಗಳನ್ನು ನಡೆಸಬೇಕಿದ್ದು, ಅದೆಲ್ಲವೂ ಹೊಂದಿಕೆಯಾಗಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
“ನ್ಯಾಯಾಲಯದ ಮುಂದೆ ಬರುವುದಕ್ಕೂ ಮುನ್ನ ಎಚ್‌ಬಿಎಸಿಗೆ ವೈದ್ಯೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರೆ ವೈದ್ಯೆ ಮತ್ತು ಕಿಡ್ನಿ ಪಡೆಯುವ ವ್ಯಕ್ತಿಯ ನಡುವೆ ಹೊಂದಾಣಿಕೆಯಾಗಿರುವ ಸಾಧ್ಯತೆ ಊಹಿಸಿ ಎಚ್‌ಬಿಎಸಿಯು ಅರ್ಜಿ ತಿರಸ್ಕರಿಸಿರಬಹುದು” ಎಂದು ನ್ಯಾಯಾಲಯ ಹೇಳಿದೆ.