ನಟ ಸೈಫ್‌ ಮೇಲೆ ದಾಳಿ: ಜನವರಿ 29ರವರೆಗೆ ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಿದ ಮುಂಬೈ ನ್ಯಾಯಾಲಯ

ಐದು ದಿನಗಳ ಬಂಧನ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಂಧನ ಅವಧಿ ವಿಸ್ತರಿಸುವಂತೆ ಪೊಲೀಸರು ಮಾಡಿದ ಮನವಿಯನ್ನು ಬಾಂದ್ರಾ ನ್ಯಾಯಾಲಯ ಪುರಸ್ಕರಿಸಿತು.
Facebook
Saif Ali Khan Pataudi
Published on

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಎಸಗಿದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂನ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂಬೈ ನ್ಯಾಯಾಲಯ ಶುಕ್ರವಾರ ಜನವರಿ 29ರವರೆಗೆ ವಿಸ್ತರಿಸಿದೆ.

ಬಾಂದ್ರಾದಲ್ಲಿರುವ ಸೈಫ್‌ ನಿವಾಸಕ್ಕೆ ಜನವರಿ 16 ರಂದು ನುಗ್ಗಿದ್ದ ಆರೋಪಿ ವಿಫಲ ದರೋಡೆ ಯತ್ನದ ವೇಳೆ ನಟ ಸೈಫ್‌ಗೆ ಹಲವು ಬಾರಿ ಇರಿದಿದ್ದ. ಜನವರಿ 19ರಿಂದ ಆತ ಪೊಲೀಸ್‌ ವಶದಲ್ಲಿದ್ದಾನೆ.

Also Read
ಗಾಯಕ ಲಕ್ಕಿ ಅಲಿ ವಿರುದ್ದ ದೂರು: ಜ.6ಕ್ಕೆ ಇತ್ಯರ್ಥಪಡಿಸಲಿದೆ ಹೈಕೋರ್ಟ್‌

ತನಿಖೆಯಲ್ಲಿ ಗಣನೀಯ ಪ್ರಗತಿ ಕಂಡುಬಂದಿರುವುದನ್ನು ಗಮನಿಸಿದ ಬಾಂದ್ರಾ ನ್ಯಾಯಾಲಯ, ಆತನ ಮೊದಲ ಐದು ದಿನಗಳ ಕಸ್ಟಡಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಸ್ಟಡಿ ಅವಧಿ ವಿಸ್ತರಿಸಿತು. ಪ್ರಕರಣದ ಇತರ ನಿರ್ಣಾಯಕ ಅಂಶಗಳನ್ನು ಶೋಧಿಸಲು ಮುಂಬೈ ಪೊಲೀಸರಿಗೆ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ.

Also Read
ತ್ರಿಷಾ, ಚಿರಂಜೀವಿ, ಖುಷ್ಬೂ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ ಮನ್ಸೂರ್ ಅಲಿ ಖಾನ್

ಬೇರೆ ಆರೋಪಿಗಳೂ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು ಇರಿತಕ್ಕೆ ಬಳಸಿದ ಆಯುಧವನ್ನು ಪತ್ತೆ ಹಚ್ಚುವಲ್ಲಿ ಆರೋಪಿ ಸಹಕರಿಸದೆ ಇರುವುದರಿಂದ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸುವಂತೆ ಮುಂಬೈ ಪೊಲೀಸರು ಮನವಿ ಮಾಡಿದ್ದರು.

ನಟನ ನಿವಾಸದ ದರೋಡೆಗೆ ಯತ್ನಿಸಿದ್ದ ಬಾಂಗ್ಲಾದೇಶದ ಪ್ರಜೆಯೆಂದು ಹೇಳಲಾದ ಇಸ್ಲಾಂ ದಾಳಿಯಿಂದಾಗಿ ಸೈಫ್‌ ಅವರ ಬೆನ್ನುಮೂಳೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿತ್ತು. ಸೈಫ್‌ ಅವರಿಗೆ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.  ಜನವರಿ 21 ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು.

Kannada Bar & Bench
kannada.barandbench.com