ಮಾದಕವಸ್ತು ಪ್ರಕರಣ: ರಾಗಿಣಿ, ಸಂಜನಾ ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ

ನಟಿಯರು ಮತ್ತು ಇತರರ ವಿರುದ್ಧದ ಆರೋಪಗಳು ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಹಲವು ನಿಬಂಧನೆಗಳ ವ್ಯಾಪ್ತಿಗೂ ಬರಬಹುದು ಎಂದು ಜಾರಿ ನಿರ್ದೇಶನಾಲಯ ವಾದ ಮಂಡಿಸಿದೆ.
ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ
ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ

ಸ್ಯಾಂಡಲ್ ವುಡ್ ಮಾದಕ ವಸ್ತು ಜಾಲದಲ್ಲಿ ಭಾಗಿಯಾಗಿರುವ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನಿಗೆ ಸಂಬಂಧಿಸಿದಂತೆ ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ (ಎನ್‌ಡಿಪಿಎಸ್‌) ವಿಶೇಷ ನ್ಯಾಯಾಲಯ ಸೋಮವಾರ ಆದೇಶ ನೀಡಲಿದೆ.

ಇದೇ ವೇಳೆ ಕೋರ್ಟ್ ನಟಿಯರು ಮತ್ತು ಇತರ ಮೂವರು ಆರೋಪಿಗಳನ್ನು ಐದು ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸೂಚಿಸಿತು.

Also Read
ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿ ಸೆ.21ಕ್ಕೆ ಮುಂದೂಡಿಕೆ
Also Read
ನಟ ಸುಶಾಂತ್ ಗೆ ಖರೀದಿಸಿದ್ದ ಡ್ರಗ್ ಸಣ್ಣ ಪ್ರಮಾಣದ್ದು- ಜಾಮೀನು ನೀಡಬಹುದಾದ ಪ್ರಕರಣ ಎಂದಿದೆ ರಿಯಾ ಜಾಮೀನು ಅರ್ಜಿ

ಮಾದಕ ವಸ್ತು ದಂಧೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿರುವುದರಿಂದ ಆರೋಪಿಗಳನ್ನು ವಶಕ್ಕೆ ಒಪ್ಪಿಸಬೇಕೆಂದು ಇಡಿ, ನ್ಯಾಯಾಲಯವನ್ನು ಕೋರಿತ್ತು.

ನಟಿಯರು ಮತ್ತು ಇತರರ ವಿರುದ್ಧದ ಆರೋಪಗಳು ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಹಲವು ನಿಬಂಧನೆಗಳ ವ್ಯಾಪ್ತಿಗೂ ಬರಬಹುದು ಎಂದು ಜಾರಿ ನಿರ್ದೇಶನಾಲಯ ವಾದ ಮಂಡಿಸಿತು.

"...ಅನುಮತಿಸಲಾದ ಮಿತಿಯನ್ನೂ ಮೀರಿ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳನ್ನು ಹೊಂದಿದ್ದ ಆರೋಪದ ಆಧಾರದಲ್ಲಿ ಮೇಲ್ಕಂಡ ಪ್ರಕರಣದಡಿ ಬೆಂಗಳೂರಿನ ಸಿಸಿಬಿಯಿಂದ ಆರೋಪಿಗಳು ಬಂಧನಕ್ಕೊಳಗಾಗಿದ್ದು ಇತರ ದೊಡ್ಡ ಅಪರಾಧಗಳ ಜೊತೆಗೆ ಅವರು ಮಾದಕ ವಸ್ತುಗಳ ಸರಬರಾಜಿಗೂ ಹಣ ಒದಗಿಸಿರುವುದು ಕಂಡುಬಂದಿದೆ’
ಇಡಿ ಸಲ್ಲಿಸಿರುವ ಅರ್ಜಿ

ಖರೀದಿ ಮತ್ತು ಹೂಡಿಕೆ ಇತ್ಯಾದಿಗಳ ವಿವರಗಳನ್ನು ಪತ್ತೆಹಚ್ಚಲು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸುವುದು ಅತ್ಯಗತ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com