ನ್ಯಾಯ ದೇವತೆ ಪ್ರತಿಮೆ ಮತ್ತು ಸುಪ್ರೀಂ ಕೋರ್ಟ್ ಲಾಂಛನದಲ್ಲಿ ಏಕಪಕ್ಷೀಯ ಬದಲಾವಣೆ: ಎಸ್‌ಸಿಬಿಎ ಆಕ್ಷೇಪ

ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಆಡಳಿತ ವಿಭಾಗ ಏಕಪಕ್ಷೀಯವಾಗಿ ಬದಲಾವಣೆ ಮಾಡಿರುವುದಕ್ಕೆ ಸಂಘದ ಅಧ್ಯಕ್ಷ ಕಪಿಲ್ ಸಿಬಲ್ ನೇತೃತ್ವದ ಕಾರ್ಯಕಾರಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
Kapil Sibal and SCBA
Kapil Sibal and SCBA
Published on

ವಕೀಲ ವರ್ಗದೊಂದಿಗೆ ಸಮಾಲೋಚಿಸದೆಯೇ ನ್ಯಾಯದೇವತೆಯ ಪ್ರತಿಮೆ ಮತ್ತು ಸುಪ್ರೀಂ ಕೋರ್ಟ್‌ ಲಾಂಛನದಲ್ಲಿ ಏಕಪಕ್ಷೀಯವಾಗಿ ಬದಲಾವಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ಕಾರ್ಯಕಾರಿ ಸಮಿತಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ಸಿಜೆಐ ಡಿ ವೈ ಚಂದ್ರಚೂಡ್‌ ನೇತೃತ್ವದ ಆಡಳಿತ ಏಕಪಕ್ಷೀಯವಾಗಿ ಬದಲಾವಣೆ ಮಾಡಿರುವುದಕ್ಕೆ ಸಂಘದ ಅಧ್ಯಕ್ಷ ಕಪಿಲ್ ಸಿಬಲ್ ನೇತೃತ್ವದ ಕಾರ್ಯಕಾರಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು.

Also Read
ಸಿಜೆಐ ನಿವಾಸದಲ್ಲಿ ಪ್ರಧಾನಿ ಮೋದಿ ಗಣೇಶ ಪೂಜೆ: ನ್ಯಾಯಾಂಗಕ್ಕೆ ಧಕ್ಕೆ ಎಂದ ಹಿರಿಯ ವಕೀಲ ಸಿಬಲ್

ಈ ಬೆಳವಣಿಗೆಯನ್ನು ನ್ಯಾಯಿಕ ಆಡಳಿತದಲ್ಲಿ ಸಮಪಾಲು ಇರುವ ವಕೀಲ ವರ್ಗದ ಗಮನಕ್ಕೆ ತಂದಿಲ್ಲ. ಬದಲಾವಣೆಗಳ ಹಿಂದಿನ ತಾರ್ಕಿಕತೆ ಏನೆಂಬುದು ವಕೀಲ ವರ್ಗಕ್ಕೆ ಸ್ವಲ್ಪವೂ ಅರ್ಥವಾಗುತ್ತಿಲ್ಲ ಎಂದು ಅಕ್ಟೋಬರ್ 22 ರಂದು ಎಸ್‌ಸಿಬಿಎ ಕೈಗೊಂಡಿರುವ ನಿರ್ಣಯ ತಿಳಿಸಿದೆ.

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಜಿಲ್ಲಾ ನ್ಯಾಯಾಂಗದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್‌ನ ಹೊಸ ಧ್ವಜ ಮತ್ತು ಲಾಂಛನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅನಾವರಣಗೊಳಿಸಿದ್ದರು.

CJI DY Chandrachud bows before the Goddess of Justice
CJI DY Chandrachud bows before the Goddess of Justice
The new Supreme Court emblem
The new Supreme Court emblem

ಅಶೋಕ ಚಕ್ರ, ಸುಪ್ರೀಂ ಕೋರ್ಟ್ ಕಟ್ಟಡ ಮತ್ತು ಭಾರತದ ಸಂವಿಧಾನ ಹೀಗೆ ಹೊಸದಾಗಿ ಅನಾವರಣಗೊಂಡ ಧ್ವಜದಲ್ಲಿ ಭಾರತದ ಕಾನೂನು ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಧಾನ ಚಿಹ್ನೆಗಳಿವೆ. ಹೊಸ ಸುಪ್ರೀಂ ಕೋರ್ಟ್ ಧ್ವಜ ನೀಲಿ ಬಣ್ಣದಲ್ಲಿದೆ. ಚಿಹ್ನೆಯ ಮೇಲೆ 'ಭಾರತದ ಸರ್ವೋಚ್ಚ ನ್ಯಾಯಾಲಯ' ಮತ್ತು 'ಯತೋ ಧರ್ಮಸ್ತತೋ ಜಯಃ' ಎಂದು (ದೇವನಾಗರಿ ಲಿಪಿಯಲ್ಲಿ) ಕೆತ್ತಲಾಗಿದೆ.

ಇತ್ತೀಚೆಗೆ ಸಿಜೆಐ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಅಂಗಳದಲ್ಲಿ ಅನಾವರಣಗೊಳಸಿದ ಹೊಸ ನ್ಯಾಯದೇವತೆಯ ಪ್ರತಿಮೆ ಸೀರೆಯಿಂದ ಅಲಂಕೃತವಾಗಿದ್ದು ಆಕೆಯ ಕಣ್ಣಿಗೆ ಈ ಹಿಂದೆ ಕಟ್ಟಿರುತ್ತಿದ್ದ ಬಟ್ಟೆಯನ್ನು ತೆಗೆಯಲಾಗಿದೆ. ಒಂದು ಕೈಯಲ್ಲಿ ತಕ್ಕಡಿ ಮತ್ತೊಂದು ಕೈಯಲ್ಲಿ ದೇಶದ ಸಂವಿಧಾನ ಹಿಡಿದಿರುವಂತೆ ಮೂರ್ತಿಯನ್ನು ಕೆತ್ತಲಾಗಿದೆ.

Also Read
ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

ವಕೀಲ ವರ್ಗ ಮನವಿ ಮಾಡಿದಂತೆ ಕೆಫೆ ಮತ್ತು ಲೈಬ್ರರಿ ಬದಲಿಗೆ ಪೂರ್ವ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸುವುದಕ್ಕೆ ಅದು ಆಕ್ಷೇಪ ವ್ಯಕ್ತಪಡಿಸಿದೆ. ಈಗಿನ ಕೆಫೆಟೇರಿಯಾ ವಕೀಲ ವರ್ಗದ ಅಗತ್ಯತೆ ಪೂರೈಸಲು ಅಸಮರ್ಪಕವಾಗಿರುವುದರಿಂದ ಗ್ರಂಥಾಲಯ ಮತ್ತು ಕೆಫೆ ಕಮ್‌ ಲಾಂಜ್‌ ಸೌಲಭ್ಯವನ್ನು ಅದು ಕೇಳಿತ್ತು. ಈಗಾಗಲೇ  ವಸ್ತು ಸಂಗ್ರಹಾಲಯದ ವಿರುದ್ಧ ಧ್ವನಿ ಎತ್ತಿದ್ದರೂ ಅದರ ಕಾಮಗಾರಿ ಆರಂಭವಾಗಿರುವುದು ಕಳವಳಕಾರಿ ಎಂದು ಸಂಘ ತಿಳಿಸಿದೆ.

ಅತಿ ಭದ್ರತಾ ವಲಯದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುತ್ತಿರುವುದನ್ನು ಸರ್ವಾನುಮತದಿಂದ ಖಂಡಿಸಿರುವ ಸಂಘ ಗ್ರಂಥಾಲಯ ಮತ್ತು ಕೆಫೆ ಕಮ್‌ ಲಾಂಜ್‌ ಸ್ಥಾಪಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. 

Kannada Bar & Bench
kannada.barandbench.com