ದೆಹಲಿ ಲೆ. ಗವರ್ನರ್ ಮರಗಳ ಮಾರಣಹೋಮ ಪ್ರಕರಣ: ನ್ಯಾ. ಓಕಾ ನೇತೃತ್ವದ ಪೀಠ ವಿಚಾರಣೆಗೆ ಸುಪ್ರೀಂ ತ್ರಿಸದಸ್ಯ ಪೀಠ ಆಕ್ಷೇಪ

ಬೇರೆ ಪೀಠ ನ್ಯಾಯಾಂಗ ಔಚಿತ್ಯತೆ ಅನುಸರಿಸದಿದ್ದರೂ ನಾವು ಪಾಲಿಸುತ್ತೇವೆ ಎಂದು ನ್ಯಾ. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ನುಡಿಯಿತು.
Trees
Trees
Published on

ಸರ್ವೋಚ್ಚ ನ್ಯಾಯಾಲಯದ ಆದೇಶ  ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಅಧ್ಯಕ್ಷರೂ ಆಗಿರುವ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು ನಿರ್ದೇಶನ ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ಮತ್ತೊಂದು ಪೀಠವೂ ಏಕಕಾಲದಲ್ಲಿ ವಿಚಾರಣೆ ನಡೆಸುತ್ತಿರುವುದಕ್ಕೆ ನ್ಯಾ. ಬಿ ಆರ್‌ ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಒಂದು ಪೀಠದೆದುರು ಪಟ್ಟಿ ಮಾಡಲು ಅನುವಾಗುವಂತೆ ಪ್ರಕರಣವನ್ನು ಸಿಜೆಐ ನೇತೃತ್ವದ ಪೀಠಕ್ಕೆ ವರ್ಗಾಯಿಸಲು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರನ್ನೂ ಒಳಗೊಂಡ ತ್ರಿಸದಸ್ಯ ಪೀಠ ನಿರ್ಧರಿಸಿತು.

Also Read
ಮರಗಳ ಮಾರಣಹೋಮ: ದೆಹಲಿ ಲೆ. ಗವರ್ನರ್‌ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

ಬೇರೆ ಪೀಠ ನ್ಯಾಯಾಂಗ ಔಚಿತ್ಯತೆ ಅನುಸರಿಸದಿದ್ದರೂ ನಾವು ಪಾಲಿಸುತ್ತೇವೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇದೇ ವ್ಯಾಜ್ಯ ಕಾರಣಕ್ಕಾಗಿ ಆದರ್ಶನೀಯವಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಕರಣವನ್ನು ವರ್ಗಾಯಿಸಬೇಕಿತ್ತು ಎಂದು ಅದು ನುಡಿಯಿತು.

ವಿಶೇಷವೆಂದರೆ ಲೆ. ಗವರ್ನರ್‌ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಕ್ರಮಗಳ ಬಗ್ಗೆ ನ್ಯಾ. ಎ ಎಸ್‌ ಓಕಾ ಮತ್ತು ಉಜ್ಜಲ್‌ ಭುಯಾನ್‌ ಅವರಿದ್ದ ವಿಭಾಗೀಯ ಪೀಠ ಟೀಕೆಯ ಮಳೆ ಸುರಿಸಿತ್ತು.  

Also Read
ದೆಹಲಿಯ ಲೆ. ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

ಆದರೆ, ನ್ಯಾಯಮೂರ್ತಿ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಇದೀಗ ವಿಭಾಗೀಯ ಪೀಠದ ಕ್ರಮಗಳ ಔಚಿತ್ಯವನ್ನು ಪ್ರಶ್ನಿಸಿದೆ.

"ಇಲ್ಲಿ ಈ ವ್ಯಾಜ್ಯ ಕಾರಣಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಮುನ್ನ ಮತ್ತೊಂದು ಪೀಠ ಸಿಜೆಐ ನೇತೃತ್ವದ ಪೀಠದಿಂದ ಸ್ಪಷ್ಟೀಕರಣ ಪಡೆಯುವುದು ಹೆಚ್ಚು ಸೂಕ್ತವಾಗಿರುತ್ತಿತ್ತು” ಎಂದು ತ್ರಿಸದಸ್ಯ ಪೀಠ ನುಡಿದಿದೆ.

Kannada Bar & Bench
kannada.barandbench.com