

ಇಸ್ಕಾನ್ ಬೆಂಗಳೂರು ಬೆಂಗಳೂರು ಸ್ವತಂತ್ರ ಕಾನೂನಾತ್ಮಕ ಅಸ್ತಿತ್ವ ಹೊಂದಿದ್ದು, ಬೆಂಗಳೂರಿನಲ್ಲಿರುವ ಐತಿಹಾಸಿಕ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಸಂಕೀರ್ಣದ ಮಾಲೀಕತ್ವ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಮೇ 2025ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮುಂಬೈ ಇಸ್ಕಾನ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಈಚೆಗೆ ಭಿನ್ನ ತೀರ್ಪು ನೀಡಿದೆ [ಇಸ್ಕಾನ್ ಮುಂಬೈ ಮತ್ತು ಇಸ್ಕಾನ್ ಬೆಂಗಳೂರು ನಡುವಣ ಪ್ರಕರಣ].
ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರು ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದರೆ, ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಅವರು ಅವುಗಳಿಗೆ ಅವಕಾಶ ನೀಡಿದರು.
ಗಮನಾರ್ಹವಾಗಿ, ನ್ಯಾಯಮೂರ್ತಿ ಮಸಿಹ್ ಅವರು ಇಸ್ಕಾನ್ ಬೆಂಗಳೂರಿನ ಪರವಾಗಿ ತೀರ್ಪು ಈ ಹಿಂದೆ ತೀರ್ಪು ನೀಡಿದ್ದ ನ್ಯಾಯಮೂರ್ತಿ ಅಭಯ್ ಎಸ್ ಓಕಾ ನೇತೃತ್ವದ ಮೂಲ ಪೀಠದಲ್ಲಿಯೂ ಕಾರ್ಯ ನಿರ್ವಹಿಸಿದ್ದರು.
ಇಸ್ಕಾನ್ ಬೆಂಗಳೂರು ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ- 1960ರ ಅಡಿಯಲ್ಲಿ ನೋಂದಾಯಿಸಲಾದ ವಿಶಿಷ್ಟ ಕಾನೂನಾತ್ಮಕ ಘಟಕವಾಗಿದ್ದು ಇದು ಇಸ್ಕಾನ್ ಮುಂಬೈನ ಶಾಖೆಯಲ್ಲ ಎಂದು ಮೇ 16ರಂದು ತೀರ್ಪು ನೀಡಲಾಗಿತ್ತು.
ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನದ ಮೇಲೆ ಬೆಂಗಳೂರು ಇಸ್ಕಾನ್ ಸಂಸ್ಥೆ ಸ್ವತಂತ್ರ ಅಸ್ತಿತ್ವ ಮತ್ತು ಮಾಲೀಕತ್ವಇದೆ ಎಂದಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಆಗ ನ್ಯಾಯಾಲಯ ಎತ್ತಿಹಿಡಿದಿತ್ತು. ಆ ಮೂಲಕ ಇಸ್ಕಾನ್ ಮುಂಬೈ ಪರವಾಗಿ ಕರ್ನಾಟಕ ಹೈಕೋರ್ಟ್ 2011ರಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಲಾಗಿತ್ತು.
ಮರುಪರಿಶೀಲನಾ ಅರ್ಜಿಯ ಕುರಿತು ಇದೀಗ ಭಿನ್ನ ತೀರ್ಪು ಹೊರಬಿದ್ದಿರುವುದರಿಂದ ಪ್ರಕರಣ ಸೂಕ್ತ ನಿರ್ದೇಶನಗಳಿಗಾಗಿ ಇದೀಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದೆದುರು ಬರಲಿದೆ.
[ತೀರ್ಪಿನ ಪ್ರತಿ]