ವಿದ್ಯಾರ್ಥಿ ಆತ್ಮಹತ್ಯೆ ತಡೆ: ಮಾರ್ಗಸೂಚಿ ಹೊರಡಿಸಿದ ಸುಪ್ರೀಂ ಕೋರ್ಟ್

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ನೆರವು, ಸಂಸ್ಥಾತ್ಮಕ ಆರೈಕೆ ಹಾಗೂ ನಿಯಂತ್ರಣಾತ್ಮಕ ಅನುಸರಣೆಯಲ್ಲಿ ಗಂಭೀರ ಕೊರತೆಗಳಿವೆ ಎಂದು 2025ರ ಕಾರ್ಯಪಡೆ ವರದಿ ತಿಳಿಸಿದ್ದ ಹಿನ್ನೆಲೆಯುಲ್ಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಟಿಸಿದೆ.
Students, Supreme Court
Students, Supreme Court
Published on

ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳನ್ನು ಕಡ್ಡಾಯವಾಗಿ ವರದಿ ಮಾಡುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳೂಔ ಊಧಧೇಶದಿಂದ ಸುಪ್ರೀಂ ಕೋರ್ಟ್‌ ಗುರುವಾರ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ [ಅಮಿತ್‌ಕುಮಾರ್‌ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ

ದೇಶಾದ್ಯಂತದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ, ಆರ್‌ ಮಹಾದೇವನ್‌ ಅವರಿದ್ದ ಪೀಠ ಹೊರಡಿಸಿರುವ ಮಾರ್ಗಸೂಚಿ ಯಾವುದೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣವನ್ನು ಕಡ್ಡಾಯವಾಗಿ ಪೊಲೀಸರಿಗೆ ವರದಿ ಮಾಡಬೇಕು. ಈ ನಿಯಮ ತರಗತಿ, ದೂರ ಶಿಕ್ಷಣ ಅಥವಾ ಆನ್‌ಲೈನ್ ಶಿಕ್ಷಣ ನೀಡುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಹೇಳಿದೆ.

Also Read
ಮಗುವಿನ ಮೇಲೆ ದಾಳಿ: ಆಕ್ರಮಣಕಾರಿ ನಾಯಿ ತಳಿ ನಿಷೇಧ ಕುರಿತು ಕೇಂದ್ರ, ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ವಿದ್ಯಾರ್ಥಿಗಳಿಗೆ 24 ಗಂಟೆಗಳ ವೈದ್ಯಕೀಯ ಸೌಲಭ್ಯ ಒದಗಿಸುವುದು ಕಡ್ಡಾಯವಾಗಿದ್ದು, ತಕ್ಷಣದ ಚಿಕಿತ್ಸೆ ಲಭ್ಯವಾಗದಿರುವುದೇ ಅನೇಕ ಮಾನಸಿಕ ಸಂಕಷ್ಟಗಳು ತೀವ್ರಗೊಳ್ಳಲು ಕಾರಣವಾಗುತ್ತಿದೆ ಎಂದು ತಿಳಿಸಲಾಗಿದೆ.

+ಅಧ್ಯಾಪಕರ ಕೊರತೆ ಹಾಗೂ ನಾಯಕತ್ವ ಹುದ್ದೆಗಳ ಖಾಲಿತನ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಶೈಕ್ಷಣಿಕ ಒತ್ತಡ ಸೃಷ್ಟಿಸುತ್ತಿದೆ ಎಂದಿರುವ ಅದು ಎಲ್ಲಾ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ನಾಲ್ಕು ತಿಂಗಳೊಳಗೆ ಭರ್ತಿ ಮಾಡುವಂತೆ ಆದೇಶಿಸಿದೆ. ಮೀಸಲು ವರ್ಗದʻ೧ʻʻ೧ʻ೧ʻ ಹುದ್ದೆಗಳ ಭರ್ತಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

ವಿದ್ಯಾರ್ಥಿವೇತನ ವಿತರಣೆಯಲ್ಲಿ ಆಗುತ್ತಿರುವ ವಿಳಂಬದಿಂದ ವಿದ್ಯಾರ್ಥಿಗಳು ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಬಾಕಿ ಇರುವ ಎಲ್ಲಾ ವಿದ್ಯಾರ್ಥಿವೇತನದ ಮೊತ್ತವನ್ನು ನಾಲ್ಕು ತಿಂಗಳೊಳಗೆ ವಿತರಿಸಬೇಕು ಹಾಗೂ ವಿಳಂಬದ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಅದು ಹೇಳಿದೆ.

ರ‍್ಯಾಗಿಂಗ್, ಲೈಂಗಿಕ ಕಿರುಕುಳ ಮತ್ತು ದೂರು ಪರಿಹಾರ ವ್ಯವಸ್ಥೆಗಳ ಅನುಷ್ಠಾನದಲ್ಲಿನ ಲೋಪಗಳ ಕುರಿತು ಪೀಠ ಕಠಿಣ ಎಚ್ಚರಿಕೆ ನೀಡಿದ್ದು, ನಿರ್ದೇಶನಗಳನ್ನು ಪಾಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳೊಂದಿಗೆ ತನ್ನ ಮಾರ್ಗಸೂಚಿಗಳನ್ನು ಸೇರ್ಪಡೆ ಮಾಡಿ ಕಾರ್ಯಪಡೆ ಸಾರ್ವತ್ರಿಕ ವಿದ್ಯಾರ್ಥಿ ಕಲ್ಯಾಣ ಮತ್ತು ಆತ್ಮಹತ್ಯೆ ತಡೆ ನಿಯಮ ರೂಪಿಸಬೇಕು ಎಂತಲೂ ನ್ಯಾಯಾಲಯ ನಿರ್ದೇಶಿಸಿದೆ.

Also Read
ಅನಿಲ್ ಅಂಬಾನಿ ವಿರುದ್ಧ ಬ್ಯಾಂಕ್‌ಗಳ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ನೆರವಿನ ಕೊರತೆ, ಸಂಸ್ಥಾತ್ಮಕ ಲೋಪ ಹಾಗೂ ನಿಯಂತ್ರಣ ವ್ಯವಸ್ಥೆಗಳಲ್ಲಿರುವ ನ್ಯೂನತೆಗೆ ಸಂಬಂಧಿಸಿದಂತೆ 2025ರ ಕಾರ್ಯಪಡೆ ವರದಿ ತಿಳಿಸಿದ್ದ ಹಿನ್ನೆಲೆಯುಲ್ಲಿ, ಸುಪ್ರೀಂ ಕೋರ್ಟ್ ಹೆಚ್ಚುತ್ತಿರುವ ವಿದ್ಯಾರ್ಥಿ ಆತ್ಮಹತ್ಯೆಯನ್ನು ತಡೆಯಲೆಂದು ಮಾರ್ಗಸೂಚಿ ಪ್ರಕಟಿಸಿದೆ.

ಭಾರತದಲ್ಲಿ 15–29 ವರ್ಷದ ಯುವಕರು ಆತ್ಮಹತ್ಯೆಯಿಂದಾಗಿ ಮರಣ ಹೊಂದುತ್ತಿದ್ದಾರೆ. 2022ರಲ್ಲಿ ಸುಮಾರು 13,000 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಹೇಳುತ್ತಿದೆ ಎಂಬುದಾಗಿ ಅದು ತಿಳಿಸಿದೆ. ವಿದ್ಯಾರ್ಥಿ ಆತ್ಮಹತ್ಯೆ ಎಂಬುದು ಅವರೊಳಗಿನ ಸಾಕಷ್ಟು ತಲ್ಲಣಗಳ ಮೇಲ್ಮೈ ರೂಪವಷ್ಟೇ ಎಂದು ಕೂಡ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.  

[ಆದೇಶದ ಪ್ರತಿ]

Attachment
PDF
Amit_Kumar___Ors__v__Union_of_India___Ors
Preview
Kannada Bar & Bench
kannada.barandbench.com