ನವರಾತ್ರಿ ವೇಳೆ ಸುಪ್ರೀಂ ಕೋರ್ಟ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ನೀಡುವುದಕ್ಕೆ ವಕೀಲರ ಇನ್ನೊಂದು ಗುಂಪಿನ ವಿರೋಧ

ಒಂಬತ್ತು ದಿನಗಳ ಉತ್ಸವದ ವೇಳೆ ಕ್ಯಾಂಟೀನ್ ಮೆನು ನವರಾತ್ರಿ ಆಹಾರಕ್ಕೆ ಸೀಮಿತಗೊಳಿಸಿದ ಬಗ್ಗೆ ಈ ಹಿಂದೆ ವಕೀಲರ ಮತ್ತೊಂದು ಗುಂಪು ಕಳವಳ ವ್ಯಕ್ತಪಪಡಿಸಿತ್ತು.
Supreme Court of India
Supreme Court of India
Published on

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಸೇವೆ ಪುನರಾರಂಭಿಸುವ ನಿರ್ಧಾರದ ವಿರುದ್ಧ ವಕೀಲರ ಗುಂಪೊಂದು ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಮತ್ತು ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ (ಎಸ್‌ಸಿಎಒಆರ್‌ಎ) ಸಂಘಕ್ಕೆ ಪತ್ರ ಬರೆದಿದೆ.

ವಕೀಲರ ಉಳಿದ ಸದಸ್ಯರ ಭಾವನೆಗಳನ್ನು ಪರಿಗಣಿಸದೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಕೀಲ ರಜತ್ ನಾಯರ್ ಅವರು ಸುಪ್ರೀಂ ಕೋರ್ಟ್ ವಕೀಲ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.

Also Read
ಎಸ್‌ಸಿಬಿಎ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಆರು ವಕೀಲರ ಸ್ಪರ್ಧೆ

ಈ ನಿರ್ಧಾರ ವಕೀಲ ವರ್ಗದ ಬಹುತ್ವದ ಆಚರಣೆಗೆ ಅನುಗುಣವಾಗಿರದೆ ಅಸಹಿಷ್ಣುತೆ ಮತ್ತು ಪರಸ್ಪರ ಗೌರವದ ಕೊರತೆಯನ್ನು ಹೇಳುತ್ತದೆ ಎಂದು ಪತ್ರ ವಿವರಿಸಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡುವ 133 ವಕೀಲರು ಪತ್ರಕ್ಕೆ ಸಹಿ ಹಾಕಿದ್ದಾರೆ.

 ಒಂಬತ್ತು ದಿನಗಳ ಉತ್ಸವದ ವೇಳೆ ಕ್ಯಾಂಟೀನ್ ಮೆನು ನವರಾತ್ರಿ ಆಹಾರಕ್ಕೆ ಸೀಮಿತಗೊಳಿಸಿದ ಬಗ್ಗೆ ಈ ಹಿಂದೆ ವಕೀಲರ ಮತ್ತೊಂದು ಗುಂಪು ಕಳವಳ ವ್ಯಕ್ತಪಪಡಿಸಿತ್ತು. ಶುಕ್ರವಾರ ಮಾಂಸಾಹಾರ ಸೇವೆ ಒದಗಿಸದಿರುವ ನಿರ್ಧಾರ ಹಿಂಪಡೆಯಲಾಗಿತ್ತು.

Also Read
ಬಿಗ್‌ ಬಾಸ್‌ ಸ್ಪರ್ಧಿ ಜಗದೀಶ್‌ರನ್ನು ವಕೀಲ ಎಂದು ಸಂಬೋಧಿಸದಿರಲು ಎಎಬಿ ಮನವಿ; ತಪ್ಪಿದಲ್ಲಿ ಸೂಕ್ತ ಕ್ರಮದ ಎಚ್ಚರಿಕೆ

ವಕೀಲರ ಸಂಘದ ಪದಾಧಿಕಾರಿಗಳ ನಿರ್ದೇಶನದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಾಯರ್‌ ಟೀಕಿಸಿದ್ದು ಈ ಏಕಪಕ್ಷೀಯ ನಿರ್ಧಾರಕ್ಕೆ ಔಪಚಾರಿಕವಾಗಿ ಪ್ರತಿಭಟನೆ ದಾಖಲಿಸಲು ಪತ್ರ ಬರೆಯಲಾಗಿದೆ. ಸುಪ್ರೀಂ ಕೋರ್ಟ್‌ ಆವರಣದಲ್ಲಿ ಆರೇಳು ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಒಂದು ಕ್ಯಾಂಟಿನ್‌ನಲ್ಲಿ ಕೇವಲ ಎರಡು ದಿನದ ಮಟ್ಟಿಗೆ ಮಾಂಸಾಹಾರ ಸೇವೆ ನೀಡದಿದ್ದರೆ ಅದರಿಂದ ಸರಿಪಡಿಸಲಾಗದ ನಷ್ಟ ಉಂಟಾಗುವುದಿಲ್ಲ. ಉಳಿದ ಕ್ಯಾಂಟೀನ್‌ಗಳು ಈಗಾಗಲೇ ತಮ್ಮ ಮೆನು ಪಟ್ಟಿಯಲ್ಲಿ ಮಾಂಸಾಹಾರ, ಈರುಳ್ಳಿ ಬೆಳ್ಳುಳ್ಳಿ ಇತ್ಯಾದಿಗಳಿರುವ ಸಾಮಾನ್ಯ ಆಹಾರ ನೀಡುತ್ತಿವೆ ಎಂದು ತಿಳಿಸಿದ್ದಾರೆ. 

Kannada Bar & Bench
kannada.barandbench.com