ಎ ಐ ಬಳಸಿ ದೇಶದ ವಕೀಲರ ಉತ್ಪಾದಕತೆ ವೃದ್ಧಿಗೆ ಶ್ರಮಿಸುತ್ತಿರುವ ಹಾರ್ವರ್ಡ್ ವಿವಿಯ ಮೂವರು ಪದವೀಧರರು

ಈಗಿನ ಕಾನೂನು ತಂತ್ರಜ್ಞಾನ ಪರಿಕರಗಳಿಗಿಂತಲೂ ಝಾನ ಭಿನ್ನವಾಗಿದ್ದು ಭಾರತೀಯ ನ್ಯಾಯವ್ಯಾಪ್ತಿ ಮತ್ತು ಭಾರತದಲ್ಲಿನ ಕಾನೂನು ಪರಿಸರ ವ್ಯವಸ್ಥೆಗೆ ಸಮರ್ಪಿತವಾಗಿದೆ ಎನ್ನುತ್ತಾರೆ ಸಂಸ್ಥಾಪಕರು.
Ben, Em, and Hemanth, the founders of jhana
Ben, Em, and Hemanth, the founders of jhana
Published on

ಭಾರತದಲ್ಲಿ ವಕೀಲರು ಕೃತಕ ಬುದ್ಧಿಮತ್ತೆಗೆ (ಎಐ) ಈಗಷ್ಟೇ ಹೊಂದಿಕೊಳ್ಳುತ್ತಿರುವಾಗಲೇ ಹಾರ್ವರ್ಡ್ ವಿವಿಯ ಮೂವರು ಪದವೀಧರರು jhana.ai ಹೆಸರಿನ ಕೃತಕ ಬುದ್ಧಿಮತ್ತೆ ಆಧಾರಿತ ಪ್ಯಾರಾಲೀಗಲ್‌ ಕಾನೂನು ಸಹಾಯಕ ಜಾಲತಾಣ ರೂಪಿಸುವ  ಮೂಲಕ ಕಾನೂನು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಾರಂಭಕ್ಕೆ ಮುಂದಾಗಿದ್ದಾರೆ.

ಝಾನ ಎಂದರೆ ಪಾಲಿ ಭಾಷೆಯಲ್ಲಿ ಮಗ್ನತೆ, ಧ್ಯಾನ ಎಂದರ್ಥ. ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಸಹಪಾಠಿಗಳಾಗಿದ್ದ ಬೆನ್ ಹಾಫ್ನರ್-ಬ್ರಾಡ್ಸ್ಕಿ , ಹೇಮಂತ್ ಭರತ ಚಕ್ರವರ್ತಿ ಮತ್ತು ಎಮ್ ಮೆಕ್ಗ್ಲೋನ್ ಅವರು jhana.aiನ ಸ್ಥಾಪಕರು.

Also Read
ಎ ಐ ಮಾಡುವ ಅನುವಾದ ಎಡವಟ್ಟುಗಳತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೆರಳು

ದೀರ್ಘ ಮತ್ತು ಸಂಕೀರ್ಣ ದಾಖಲೆಗಳನ್ನು ಪರಿಶೀಲಿಸಿ ಸಂಕ್ಷಿಪ್ತಗೊಳಿಸುವುದು ಜೊತೆಗೆ ಸಂಶೋಧನೆಯನ್ನು ವೇಗವಾಗಿ ಮತ್ತು ಹೆಚ್ಚಿನ ಶ್ರದ್ಧೆಯೊಂದಿಗೆ ಮಂಡಿಸುವಂತಹ ಕಾರ್ಯಗಳನ್ನು ವಿಶ್ವಸನೀಯವಾಗಿ ಮಾಡಲು ಈ ಜಾಲತಾಣ ಸಾಧನ ವಕೀಲರಿಗೆ ಸಹಾಯ ಮಾಡುತ್ತದೆ.

ಪ್ರೊಪೊಸಿಷನ್‌ಗಳು, ಮೆಮೊಗಳು, ಅಡ್ವೈಸರಿಗಳು, ಅಥವಾ ಪೂರ್ಣ ಪ್ರಮಾಣದ ಡ್ರಾಫ್ಟ್‌  ಮತ್ತು ರೆಡ್‌ಲೈನ್‌ಗಳಂತಹ ಯಾವುದೇ ರೀತಿಯ ವೃತ್ತಿಪರ ಫಲಿತಾಂಶಗಳನ್ನು ಪಡೆಯುವುದಕ್ಕಾಗಿ ಝಾನವನ್ನು ಬಳಸಬಹುದು. ಇದಕ್ಕೆ ಬೇಕಾದ ಮಾಹಿತಿಯನ್ನು ಎ ಐ ಜಾಲಾಡಿ ಕೇಸ್ ಲಾ, ಕಾನೂನು ಮತ್ತು ಶೈಕ್ಷಣಿಕ ಪ್ರಾಧಿಕಾರಗಳ 1.5 ಕೋಟಿಗೂ ಹೆಚ್ಚಿನ ದತ್ತಾಂಶವನ್ನು ಒದಗಿಸಲಿದೆ. ಇದು ಮಾನವನಂತೆ ವೆಬ್ ಬ್ರೌಸ್ ಮಾಡಬಲ್ಲದು ಅಥವಾ ಪ್ಲಗಿನ್‌ಗಳನ್ನು ಬಳಸಲಿದೆ ಎಂಬುದಾಗಿ ಚಕ್ರವರ್ತಿ ಹೇಳುತ್ತಾರೆ.

ವ್ಯಾಪಕವಾದ ಕಾನೂನು ದತ್ತಾಂಶದೊಂದಿಗೆ ಝಾನ ಸುಧಾರಿತ ಸರ್ಚ್‌ ಸಾಮರ್ಥ್ಯಗಳ ಮೂಲಕ ಸಂವಹಿಸುತ್ತದೆ. ಆ ಮುಖಾಂತರ ವಕೀಲರಿಗೆ ಅಗತ್ಯವಾದ ನಿರ್ಣಾಯಕ ಹಾಗೂ ಸಮಯ ಮಿತಿಯೊಳಗಿನ ಕಾರ್ಯೋದ್ದೇಶಗಳನ್ನು ಸ್ವಯಂಚಾಲಿತವಾಗಿ ಮಾಡುವ ಮೂಲಕ ನ್ಯಾಯದ ಲಭಿಸುವಿಕೆಯನ್ನು ವಿಸ್ತರಿಸುತ್ತದೆ ಎಂದು ಸಂಸ್ಥಾಪಕರು ಹೇಳುತ್ತಾರೆ .

ಝಾನ ಭಾರತದ ಮೊದಲ ಕೃತಕ ಬುದ್ಧಿಮತ್ತೆಯ ಕಾನೂನು ಸಹಾಯಕನಾಗಿದೆ (ಎಐ ಪ್ಯಾರಾಲೀಗಲ್) ಆಗಿದೆ. ಕಾನೂನು ಪ್ರಾಕ್ಟೀಸ್‌ ಮತ್ತು ನಿರ್ವಹಣಾ ಸಾಧನಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ನಾವು ಸ್ಪಷ್ಟವಾಗಿ ಪಶ್ಚಿಮದ ದೇಶಗಳಿಗಿಂತಲೂ ಹಿಂದೆ ಇದ್ದೇವೆ. ಭಾರತೀಯ ಕಾನೂನು ಕ್ಷೇತ್ರದ ಪ್ರಾಕ್ಟೀಸ್‌ ಸಾಧನಗಳ ಹಳೆಯ ಕಾಲದ ಸ್ಥಿತಿ ಈ ಯೋಜನೆ ಆರಂಭಿಸಲು ಕಾರಣ ಎನ್ನುತ್ತಾರೆ  ಬ್ರಾಡ್ಸ್ಕಿ.

ವ್ಯಾಪಕವಾದ ಕಾನೂನು ದತ್ತಾಂಶದೊಂದಿಗೆ ಝಾನ ಸುಧಾರಿತ ಸರ್ಚ್‌ ಸಾಮರ್ಥ್ಯಗಳ ಮೂಲಕ ಸಂವಹಿಸುತ್ತದೆ. ಆ ಮುಖಾಂತರ ವಕೀಲರಿಗೆ ಅಗತ್ಯವಾದ ನಿರ್ಣಾಯಕ ಹಾಗೂ ಸಮಯ ಮಿತಿಯೊಳಗಿನ ಕಾರ್ಯೋದ್ದೇಶಗಳನ್ನು ಸ್ವಯಂಚಾಲಿತವಾಗಿ ಮಾಡುವ ಮೂಲಕ ನ್ಯಾಯದ ಲಭಿಸುವಿಕೆಯನ್ನು ವಿಸ್ತರಿಸುತ್ತದೆ.
ಝಾನ ಸಂಸ್ಥಾಪಕರು

ಝಾನ ಮೂಲಕ ವಕೀಲರು ಸಂಶೋಧನೆಗಾಗಿ ಉತ್ತಮ ಸಾಧನಗಳನ್ನು ಬಳಸಿದರೆ, ಅದು ಎಲ್ಲೆಡೆ ನ್ಯಾಯದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಜಾಲತಾಣದ ಮತ್ತೊಬ್ಬ ಸಂಸ್ಥಾಪಕ ಮೆಕ್ಗ್ಲೋನ್ ಹೇಳುತ್ತಾರೆ.

ಬಳಕೆದಾರರು ಅವಲಂಬಿಸಬಹುದಾದ ಇದೇ ರೀತಿಯ ಎಐ ಪರಿಕರಗಳಲ್ಲಿ ಥಾಮ್ಸನ್ ರಾಯಿಟರ್ಸ್, ಕೋಕೌನ್ಸೆಲ್ ಹಾಗೂ ಹಾರ್ವೆ ಸೇರಿವೆ. ಆದರೆ ಭಾರತೀಯ ನ್ಯಾಯವ್ಯಾಪ್ತಿ ಮತ್ತು ಭಾರತದಲ್ಲಿನ ಕಾನೂನು ಪರಿಸರ ವ್ಯವಸ್ಥೆಗೆ ಸಮರ್ಪಿತವಾಗುವ ಮೂಲಕ ಝಾನ ಅಸ್ತಿತ್ವದಲ್ಲಿರುವ ಕಾನೂನು ತಂತ್ರಜ್ಞಾನ ಪರಿಕರಗಳಿಗಿಂತಲೂ ಭಿನ್ನವಾಗಿದೆ ಎಂಬುದು ಸಂಸ್ಥಾಪಕರ ಮಾತು.

ಭಾರತದ ಕಾನೂನು ವಲಯವನ್ನು ಆಧುನೀಕರಿಸುವುದು ಮತ್ತು ಎಐ ಚಾಲಿತ ಸಾಧನಗಳನ್ನು ಬಳಸಿಕೊಂಡು ಕಾನೂನು ಸಂಪನ್ಮೂಲಗಳಿಗೆ ಇರುವ ಪ್ರವೇಶ ಸೌಕರ್ಯವನ್ನು ಸುಧಾರಿಸುವುದು ಈ ಸ್ಟಾರ್ಟ್‌ಅಪ್‌ನ ಉದ್ದೇಶವಾಗಿದೆ. ಬಳಕೆದಾರರು ಇಂತಿಷ್ಟು ಹಣ ಪಾವತಿಸಿ ಝಾನದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.  

Kannada Bar & Bench
kannada.barandbench.com