ಕೆಲ ವಿಷಯಗಳನ್ನು ತೆಗೆದುಹಾಕಲು ಕೇಂದ್ರದ ಆದೇಶ: ಕರ್ನಾಟಕ ಹೈಕೋರ್ಟ್ ಮೊರೆ ಹೋದ ಟ್ವಿಟರ್

ನಿರ್ದಿಷ್ಟ ಕಂಟೆಂಟ್‌ಗಳನ್ನು ತೆಗೆದು ಹಾಕಬೇಕು, ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಟ್ವಿಟರ್‌ಗೆ ಸೂಚಿಸಿತ್ತು.
ಕೆಲ ವಿಷಯಗಳನ್ನು ತೆಗೆದುಹಾಕಲು ಕೇಂದ್ರದ ಆದೇಶ: ಕರ್ನಾಟಕ ಹೈಕೋರ್ಟ್ ಮೊರೆ ಹೋದ ಟ್ವಿಟರ್

ಕೆಲವು ಟ್ವೀಟ್‌ ವಿಷಯಗಳನ್ನು (ಕಂಟೆಂಟ್‌) ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಟ್ವಿಟರ್‌ ಸಾಮಾಜಿಕ ಮಾಧ್ಯಮ ತಾಣವು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದೆ.

ಒಂದು ವೇಳೆ ಅಂತಹ ವಿಷಯಗಳನ್ನು ತೆಗೆದು ಹಾಕದಿದ್ದರೆ ಕ್ರಿಮಿನಲ್‌ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸಾಮಾಜಿಕ ಜಾಲತಾಣಕ್ಕೆ ಎಚ್ಚರಿಕೆ ನೀಡಿತ್ತು.

Also Read
[ರೈತರ ಧರಣಿ] ಒಂದು ಹ್ಯಾಷ್‌ಟ್ಯಾಗ್‌, 257 ಯುಆರ್‌ಎಲ್‌ ನಿರ್ಬಂಧಕ್ಕೆ ಟ್ವಿಟರ್‌ ನಕಾರ; ಕೇಂದ್ರದ ಕೆಂಗಣ್ಣು

ಕೇಂದ್ರ ಹಾಗೂ ಕೆಲ ರಾಜ್ಯ ಸರ್ಕಾರಗಳ ವಿರುದ್ಧ ಟ್ವಿಟರ್‌ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕಳೆದ ವರ್ಷ ಟ್ವಿಟರ್‌ ಇಂಡಿಯಾ ಮುಖ್ಯಸ್ಥ ಮನೀಶ್‌ ಮಹೇಶ್ವರಿ ಅವರಿಗೆ ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ನೋಟಿಸ್‌ ನೀಡಿದ್ದರು.

Also Read
[ಗಾಜಿಯಾಬಾದ್‌ ವಿಡಿಯೋ] ಟ್ವೀಟ್‌ ತೆಗೆದುಹಾಕುವ ಅಧಿಕಾರ ಟ್ವಿಟರ್‌ ಇಂಡಿಯಾಗೆ ಇದೆಯೇ ಎಂದು ಕೇಳಿದ ಕರ್ನಾಟಕ ಹೈಕೋರ್ಟ್

ವಯೋವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಗಡ್ಡ ಬೋಳಿಸಲು ಹೇಳಿ ʼವಂದೇ ಮಾತರಂʼ ಮತ್ತು ʼಜೈ ಶ್ರೀರಾಮ್‌ʼ ಹೆಸರು ಪಠಿಸಲು ಒತ್ತಾಯಿಸಿದ್ದ ವೀಡಿಯೊ ಕುರಿತು ಮಾಡಿದ್ದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ (ಗಾಜಿಯಾಬಾದ್‌ ಪ್ರಕರಣ) ಅವರಿಗೆ ನೋಟಿಸ್‌ ನೀಡಲಾಗಿತ್ತು.

ಆಗ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿ ಮಧ್ಯಂತರ ರಕ್ಷಣೆ ಪಡೆದಿದ್ದರು. ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

Related Stories

No stories found.
Kannada Bar & Bench
kannada.barandbench.com