ಸಿಎಲ್ಎಟಿ- 2020
ಸಿಎಲ್ಎಟಿ- 2020  
ಸುದ್ದಿಗಳು

ಸೆ.28ರ ಮಧ್ಯಾಹ್ನ 2 ಗಂಟೆಗೆ ಸಿಎಲ್ಎಟಿ- 2020 ಪ್ರವೇಶಾತಿ ಪರೀಕ್ಷೆ ನಿಗದಿ: ಒಕ್ಕೂಟದಿಂದ ಸೂಚನೆ ಬಿಡುಗಡೆ

Bar & Bench

ಸೆಪ್ಟೆಂಬರ್ 28 ರಂದು ಪ್ರವೇಶ ಪರೀಕ್ಷೆ ಎದುರಿಸಲಿರುವ ಕಾನೂನು ಅಧ್ಯಯನಾಕಾಂಕ್ಷಿ ಅಭ್ಯರ್ಥಿಗಳಿಗಾಗಿ ಸಿಎಲ್ಎಟಿ ಒಕ್ಕೂಟ ಸೂಚನೆಗಳನ್ನು ನೀಡಿದೆ.

ಪರಿಷ್ಕೃತ ಸೂಚನೆಯಂತೆ ಸೆ. 28ರಂದು ನಡೆಯುವ ಪರೀಕ್ಷೆಗೆ ಕೋವಿಡ್ 19 ದೃಢಪಟ್ಟ ಅಥವಾ ಕ್ವಾರಂಟೈನಿನಲ್ಲಿರುವ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.

ಸೆಪ್ಟೆಂಬರ್ 28 ರಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎಂದು ಪರೀಕ್ಷೆ ಆರಂಭವಾದ 15 ನಿಮಿಷಗಳ ನಂತರ ಯಾವುದೇ ಅಭ್ಯರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಲಾಗಿದೆ.

ಅಭ್ಯರ್ಥಿ ಈ ಕೆಳಗಿನವುಗಳನ್ನು ಮಾತ್ರ ಪರೀಕ್ಷಾ ಕೊಠಡಿಗೆ ಕೊಂಡೊಯ್ಯಬಹುದು:

  1. ನೀಲಿ / ಕಪ್ಪು ಬಾಲ್ ಪೆನ್

  2. ಹಾಜರಾತಿ ಪತ್ರ

  3. ಸರ್ಕಾರ ಒದಗಿಸಿರುವ ಯಾವುದೇ ಫೋಟೋ ಗುರುತಿನ ಚೀಟಿ

  4. ಪಾರದರ್ಶಕ ನೀರಿನ ಬಾಟಲ್

  5. ಸ್ವಂತ ಮುಖಗವಸು, ಕೈಗವಸುಗಳು ಹಾಗೂ ವೈಯಕ್ತಿಕ ಕೈ ಸ್ಯಾನಿಟೈಜರ್ (50 ಮಿಲಿ).

  6. ಸ್ವ-ಆರೋಗ್ಯ ಘೋಷಣಾಪತ್ರ

  7. ವಿಕಲಚೇತನ ಅಭ್ಯರ್ಥಿಗಳ ಅಂಗವೈಕಲ್ಯ ಪ್ರಮಾಣಪತ್ರ

ಯಾವುದೇ ರೀತಿಯ ನಕಲು ಮಾಡುವ ಅಥವಾ ಅದಕ್ಕೆ ಸಹಾಯ ನೀಡುವ / ಪಡೆಯುವ ಯಾವುದೇ ಅಭ್ಯರ್ಥಿ ಅನರ್ಹನಾಗುತ್ತಾರೆ ಮತ್ತು ಮುಂದಿನ ಕ್ರಮಕ್ಕೆ ಹೊಣೆಗಾರರಾಗಿರುತ್ತಾರೆ. ಅಲ್ಲದೆ, ಪರೀಕ್ಷೆಯ ಸಮಯದಲ್ಲಿ ಯಾವುದೇ ವ್ಯಕ್ತಿಯಿಂದ ಯಾವುದೇ ಸ್ಪಷ್ಟೀಕರಣ ಪಡೆಯುವಂತಿಲ್ಲ.

ಪರೀಕ್ಷೆಯ ಉದ್ದೇಶಕ್ಕಾಗಿ ಆಕ್ಷೇಪಾರ್ಹ ವಸ್ತುಗಳನ್ನು ಇಟ್ಟುಕೊಳ್ಳುವುದು ಮತ್ತು ಬಳಸುವುದು ದುಷ್ಕೃತ್ಯಕ್ಕೆ ಸಮನಾಗಿರುತ್ತದೆ.

ಪದವಿ ಕಾನೂನು ಕೋರ್ಸ್ ಗಳಿಗೆ (ಸಿಎಲ್‌ಎಟಿ ಯುಜಿ) ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ 150 ಪ್ರಶ್ನೆಗಳು ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ (ಸಿಎಲ್‌ಎಟಿ ಪಿಜಿ) ಪ್ರವೇಶಕ್ಕಾಗಿ 120 ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತ ಮಾಡಲಾಗುತ್ತದೆ.

ಸಾಮಾನ್ಯ ಸೂಚನೆ ತಿಳಿಸಿರುವಂತೆ ಪರೀಕ್ಷಾ ಸಭಾಂಗಣದಲ್ಲಿ ಅಭ್ಯರ್ಥಿಗಳು ಮೊಬೈಲ್ ಫೋನ್, ಕೈಗಡಿಯಾರಗಳು, ಕ್ಯಾಲ್ಕುಲೇಟರ್, ಹೆಡ್‌ಫೋನ್‌ಗಳು ಮುಂತಾದ ಎಲೆಕ್ಟ್ರಾನಿಕ್ / ಸಂವಹನ ಸಾಧನಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ಅಭ್ಯರ್ಥಿಗಳ ಯಾವುದೇ ವಸ್ತು/ ಗ್ಯಾಜೆಟ್‌ಗಳ ನಷ್ಟಕ್ಕೆ ಜವಾಬ್ದಾರರಲ್ಲ ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳು ಬಳಸುವ ರಫ್ ಶೀಟುಗಳ ಮೇಲೆ ತಮ್ಮ ರೋಲ್ ನಂಬರ್ ಬರೆದಿರಬೇಕು ಮತ್ತು ಅಭ್ಯರ್ಥಿ ಪರೀಕ್ಷಾ ಕೊಠಡಿಯಿಂದ ಹೊರಡುವ ಮೊದಲು ಅವುಗಳನ್ನು ಡ್ರಾಪ್ ಬಾಕ್ಸಿನಲ್ಲಿ ವಿಲೇವಾರಿ ಮಾಡಬೇಕು.

ಸೂಚನಾ ಪ್ರಕಟಣೆಯನ್ನು ಇಲ್ಲಿ ಓದಿ:

CLAT_instructions_to_candidates.pdf
Preview