ರಾಷ್ಟ್ರೀಯ ಷೇರು ವಿನಿಮಯ ಸಂಸ್ಥೆಯ (ಎನ್ಎಸ್ಇ) ಮಧ್ಯವರ್ತಿಗಳ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾಗ ಕಕ್ಷೀದಾರರೊಬ್ಬರು ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ಪ್ರಸ್ತುತಪಡಿಸಿದ್ದು ಬಾಂಬೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ.
ನ್ಯಾಯಾಲಯಕ್ಕೆ ಮಾಹಿತಿಯನ್ನು ಪ್ರಸ್ತುತಪಡಿಸುವ ಈ ವಿಧಾನವನ್ನು ಮರೆಮಾಚಲು ಯತ್ನಿಸದ ನ್ಯಾಯಮೂರ್ತಿ ಜಿ.ಎಸ್. ಪಟೇಲ್ ಅವರು ತಮ್ಮ ನ್ಯಾಯಾಲಯದಲ್ಲಿ ಮುಚ್ಚಿದ ಲಕೋಟೆಗಳಲ್ಲಿ ವಸ್ತುಗಳನ್ನು ಸಲ್ಲಿಸಲು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಪ್ರತಿಪಾದಿಸಿದರು. ವರ್ಚುವಲ್ ವಿಚಾರಣೆ ಆರಂಭವಾದಾಗಿನಿಂದಲೂ ಮುಚ್ಚಿದ ಲಕೋಟೆಯಲ್ಲಿದ್ದ ವಸ್ತುಗಳನ್ನು ತಾನು ನೋಡಿಲ್ಲ ಎಂದು ಅವರು ತಿಳಿಸಿದರು.
‘ನಾನು ನೋಡಬಹುದಾದ ಯಾವುದನ್ನಾದರೂ ನನ್ನ ಎದುರಿರುರುವ ಎಲ್ಲಾ ಕಕ್ಷೀದಾರರು ನೋಡಲು ಅರ್ಹರು. ಅದು ಇಷ್ಟೇ, ಮುಕ್ತ ಮತ್ತು ಪಾರದರ್ಶಕ. ನಿರ್ಧಾರ ಕೈಗೊಳ್ಳಲು ನನಗೆ ತಿಳಿದಿರುವ ಏಕೈಕ ವಿಧಾನ ಇದು. ಆದ್ದರಿಂದ ಆ ವಿವರಗಳನ್ನು ಅಫಿಡವಿಟ್ ರೂಪದಲ್ಲಿ ಸಲ್ಲಿಸಬೇಕಿದೆ. ಯಾವುದೇ ಕಡೆಯವರು ಏಕಪಕ್ಷೀಯವಾಗಿ ವಸ್ತುಗಳನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಬಹುದು ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ.’ನ್ಯಾ. ಗೌತಮ್ ಪಟೇಲ್
ಅದರಂತೆ, ಮೊಹರು ಮಾಡಿದ ಲಕೋಟೆಯನ್ನು ಅಫಿಡವಿಟ್ ಮೂಲಕ ಸಲ್ಲಿಸುವಂತೆ ಅರ್ಜಿದಾರರಾದ ಅನುಗ್ರಹ ಸ್ಟಾಕ್ ಅಂಡ್ ಬ್ರೋಕರಿಂಗ್ ಏಜೆಂಟ್ ಸಂಸ್ಥೆಗೆ ಸೂಚಿಸಲಾಯಿತು. ಮಾಹಿತಿ ಸೂಕ್ಷ್ಮವಾಗಿದ್ದು ಅದನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸದಿದ್ದರೆ ಮಾಧ್ಯಮಗಳಿಗೆ ಸೋರಿಕೆಯಾಗಬಹುದು ಎಂದು ಪ್ರತಿವಾದಿಗಳು ವಾದಿಸಿದರು.
ಅದರಂತೆ, ಮೊಹರು ಮಾಡಿದ ಲಕೋಟೆಯನ್ನು ಅಫಿಡವಿಟ್ ಮೂಲಕ ಸಲ್ಲಿಸುವಂತೆ ಅರ್ಜಿದಾರರಾದ ಅನುಗ್ರಹ ಸ್ಟಾಕ್ ಅಂಡ್ ಬ್ರೋಕರಿಂಗ್ ಏಜೆಂಟ್ ಸಂಸ್ಥೆಗೆ ಸೂಚಿಸಲಾಯಿತು. ಮಾಹಿತಿ ಸೂಕ್ಷ್ಮವಾಗಿದ್ದು ಅದನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸದಿದ್ದರೆ ಮಾಧ್ಯಮಗಳಿಗೆ ಸೋರಿಕೆಯಾಗಬಹುದು ಎಂದು ಪ್ರತಿವಾದಿಗಳು ವಾದಿಸಿದರು.
ಪತ್ರಿಕಾ ಸ್ವಾತಂತ್ರ್ಯವನ್ನು ಬಲವಾಗಿ ಸಮರ್ಥಿಸಿಕೊಂಡ ನ್ಯಾಯಮೂರ್ತಿಗಳು ಹೀಗೆಂದರು:
‘ಮಾಧ್ಯಮಗಳು ಅಸ್ತಿತ್ವದಲ್ಲಿರಲು ಒಂದು ಕಾರಣವಿದೆ. ಅವುಗಳಿಗೊಂದು ಉದ್ದೇಶವೂ ಇದ್ದು ಅದರಂತೆ ನಡೆಯುತ್ತದೆ. ಈ ಪಕ್ಷ ಅಥವಾ ಆ ಪಕ್ಷದವರು ಹೇಳಿದರೆಂದು ಮುಕ್ತ ಪತ್ರಿಕಾ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಮೊಟುಕುಗೊಳಿಸುವುದೂ ಇಲ್ಲ. ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತವೆ ಎಂಬ ಆಧಾರದಲ್ಲಿ ಮುಂದುವರಿಯಲು ನಾನು ಒಪ್ಪುವುದಿಲ್ಲ. ಇಲ್ಲಿ ಯಾವುದೂ ನಿರ್ಬಂಧಿತ ಆದೇಶಗಳು ಇರುವುದಿಲ್ಲ’ನ್ಯಾ. ಗೌತಮ್ ಪಟೇಲ್
ಮುಚ್ಚಿದ ಲಕೋಟೆಯಲ್ಲಿ ಇರಿಸದೆ ಅಫಿಡವಿಟ್ ಜೊತೆಗೆ ಸ್ಪಷ್ಟವಾದ ಪ್ರತಿಯನ್ನು ಮತ್ತೆ ಸಲ್ಲಿಸದೇ ಹೋದರೆ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ನ್ಯಾಯಮೂರ್ತಿಗಳು ಒಂದು ಹಂತದಲ್ಲಿ ಎಚ್ಚರಿಕೆ ನೀಡಿದರು.
ಹೂಡಿಕೆದಾರರು ಹಣ ಕಳೆದುಕೊಂಡ ಪ್ರಕರಣ ಇದಾಗಿದ್ದು ಕೋಟ್ಯಂತರ ರೂಪಾಯಿ ಅವ್ಯವಹಾರದ ವಿಚಾರಣೆ ಬಾಂಬೆ ಹೈಕೋರ್ಟಿನಲ್ಲಿ ನಡೆಯುತ್ತಿದೆ.
ಆದೇಶವನ್ನು ಇಲ್ಲಿ ಓದಿ: