ವಿವಾಹಿತರ ನಡುವೆ ಲಿವ್‌-ಇನ್‌ ಅಪರಾಧವಲ್ಲ, ಮದುವೆ ಆಮಿಷ ತೋರಿಸಿ ಅತ್ಯಾಚಾರವೆಸಗಿದ ಆರೋಪ ಮಾಡಲಾಗದು: ದೆಹಲಿ ಹೈಕೋರ್ಟ್‌

ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಕಾನೂನಾತ್ಮಕವಾಗಿ ವಿವಾಹವಾಗಲು ಸಾಧ್ಯವಾಗದ ಮಹಿಳೆಗೆ ಐಪಿಸಿ ಸೆಕ್ಷನ್‌ 376 (ಅತ್ಯಾಚಾರ) ಅಡಿ ರಕ್ಷಣೆ ದೊರೆಯದು ಎಂದಿರುವ ಹೈಕೋರ್ಟ್‌.
Delhi High Court, Couple
Delhi High Court, Couple

ವಿವಾಹಿತರಾದ ಇಬ್ಬರು ವಯಸ್ಕರ ನಡುವಿನ ಲಿವ್‌ ಇನ್‌ ಸಂಬಂಧವು ಸಾಮಾಜಿಕವಾಗಿ ಒಪ್ಪಿಗೆಯಾಗದಿದ್ದರೂ ಅದು ಅಪರಾಧವಲ್ಲ ಎಂದು ಈಚೆಗೆ ದೆಹಲಿ ಹೈಕೋರ್ಟ್‌ ಹೇಳಿದೆ [ಎಸ್‌ ರಾಜಾದೊರೈ ವರ್ಸಸ್‌ ದೆಹಲಿ (ಎನ್‌ಸಿಟಿ) ರಾಜ್ಯ ಮತ್ತು ಇತರರು].

ಸಮಾಜದ ದೃಷ್ಟಿಯಿಂದ ನೈತಿಕ ತಪ್ಪು ಮತ್ತು ಕಾನೂನಾತ್ಮಕ ಕ್ರಿಮಿನಲ್‌ ತಪ್ಪುಗಳು ಎರಡು ಪ್ರತ್ಯೇಕ ವಿಚಾರಗಳಾಗಿವೆ. ಇಬ್ಬರು ವಿವಾಹಿತರ ಲಿವ್‌ ಇನ್‌ ಸಂಬಂಧದ ಬಗ್ಗೆ ಸಮಾಜದಲ್ಲಿ ಕೆಲವರು ಕಟುವಾಗಿ ಟೀಕೆ ಮಾಡಬಹುದು, ಇತರರು ಅದರ ಬಗ್ಗೆ ಚಕಾರ ಎತ್ತದಿರಬಹುದು ಎಂದು ನ್ಯಾಯಮೂರ್ತಿ ಸ್ವರನಾ ಕಾಂತ ಶರ್ಮಾ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

“ಬೇರೆ ಬೇರೆಯವರ ಜೊತೆ ವಿವಾಹವಾಗಿರುವ ಇಬ್ಬರು ವಯಸ್ಕರ ಲಿವ್‌ ಇನ್‌ ಸಂಬಂಧವು ಕಾನೂನಾತ್ಮಕ ಅಥವಾ ಶಾಸನಾತ್ಮಕವಾಗಿ ವಿರುದ್ಧವಲ್ಲ. ನೈತಿಕತೆಯನ್ನು ಕಾನೂನಾತ್ಮಕವಾಗಿ ಜಾರಿ ಮಾಡುವುದು ಶಾಸನಬದ್ಧವಲ್ಲ. ತೀರ್ಪಿನ ಮೂಲಕ ಬೋಧಿಸಲಾದ ಯಾವುದೇ ಕಾನೂನು ನೈತಿಕತೆಯ ವಿಷಯವಾಗಿರಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.

ಲಿವ್‌ ಇನ್‌ ಸಂಬಂಧಗಳ ಬಗ್ಗೆ ನ್ಯಾಯಮೂರ್ತಿಗಳಿಗೆ ತಮ್ಮದೇ ಆದ ಅಭಿಪ್ರಾಯ ಇರಬಹುದು. ಆದರೆ, ಅವರು ಗ್ರಹಿಸಿದ ಕಲ್ಪನೆಗಳ ನೈತಿಕತೆ ಆಧಾರದ ಮೇಲೆ ಅಂತಹ ಕೃತ್ಯಗಳಿಗೆ ಅಪರಾಧವನ್ನು ಲಗತ್ತಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಕಾನೂನಾತ್ಮಕವಾಗಿ ವರಿಸಲು ಸಾಧ್ಯವಿಲ್ಲದ ಸಂತ್ರಸ್ತೆಗೆ ಐಪಿಸಿ ಸೆಕ್ಷನ್‌ 376 ಅನ್ನು ವಿಸ್ತರಿಸಲಾಗದು. ಕಾನೂನಾತ್ಮಕವಾಗಿ ಆ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿದ್ದಲ್ಲಿ, ಮದುವೆಯ ನೆಪದಲ್ಲಿ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುವ ವ್ಯಕ್ತಿಯ ವಿರುದ್ದ ಐಪಿಸಿ ಸೆಕ್ಷನ್‌ 376 ಅಡಿ ಪ್ರಕರಣ ದಾಖಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಸಾಮಾಜಿಕ ಮಾನದಂಡಗಳು ಅಥವಾ ನಿರೀಕ್ಷೆಗಳೊಂದಿಗೆ ಹೊಂದಿಕೆಯಾಗದಿದ್ದರೂ ವಯಸ್ಕರು ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು. ಹಾಗಾಗಿ, ಕೆಲವು ಸಂದರ್ಭಗಳಲ್ಲಿ, ಅಂತಹ ಸಂಬಂಧದ ಸಂಭಾವ್ಯ ಪರಿಣಾಮಗಳನ್ನು ಎದುರಿಸಲು ಅವರು ಸಿದ್ಧರಾಗಿರಬೇಕು ಪೀಠ ಅಭಿಪ್ರಾಯಪಟ್ಟಿದೆ.

Also Read
ಲೈಂಗಿಕ ಸಂಬಂಧ ಸಮ್ಮತ ಎಂಬುದಕ್ಕೆ ಲಿವ್‌–ಇನ್‌ ಸಂಬಂಧವೇ ಸಾಕು: ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ ಮುಂಬೈ ನ್ಯಾಯಾಲಯ

ಇಬ್ಬರೂ ಪಕ್ಷಕಾರರು ಬೇರೆಬೇರೆಯವರನ್ನು ವರಿಸಿದ್ದೂ ಲಿವ್‌ ಇನ್‌ ಸಂಬಂಧದಲ್ಲಿದ್ದರೆ ಅದು ಸಾಮಾಜಿಕವಾಗಿ ಒಪ್ಪಿಗೆಯಾಗದಿದ್ದರೂ ಅದು ಅಪರಾಧವಲ್ಲ. “ನೈತಿಕತೆ ಬೋಧನೆ ಮಾಡುವ ಮೂಲಕ ನ್ಯಾಯಾಲಯಗಳು ಕಾನೂನಾತ್ಮಕ ನೈತಿಕ ವ್ಯಾಖ್ಯಾನಕಾರನಾಗಲಾಗದು. ಪ್ರತಿಯೊಂದು ಪ್ರಕರಣದಲ್ಲಿನ ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಅದರಲ್ಲಿ ಅಪರಾಥಿಕ ಅಂಶಗಳನ್ನು ತೀಕ್ಷ್ಣವಾಗಿ ವಿಶ್ಲೇಷಿಸುವ ಮೂಲಕ ಪ್ರಕರಣನ್ನು ಪರಿಶೀಲಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಮಹಿಳೆಯರು ತಲೆತಲಾಂತರದಿಂದ ಬಂದಿರುವ ನೈತಿಕತೆಯನ್ನು ಮೀರಿ ಎಲ್ಲರಂತೆ ಅವರು ತಮ್ಮ ಆಯ್ಕೆ ಮಾಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com