ಬಾಲಕಿಯ ಭುಜದ ಮೇಲೆ ಕೈ ಹಾಕಿ ಬಟ್ಟೆ ಎಳೆದರೆ ಪೋಕ್ಸೊ ಅಡಿ ಲೈಂಗಿಕ ಉದ್ದೇಶ ಸಾಬೀತಾಗುತ್ತದೆ: ಮಧ್ಯಪ್ರದೇಶ ಹೈಕೋರ್ಟ್

ಕಾನೂನಿನ ಪ್ರಕಾರ, ಪೋಕ್ಸೊ ಅಪರಾಧಕ್ಕಾಗಿ ಆರೋಪಿಯ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ಆರೋಪಿಯ ಅಪರಾಧಿಕ ಮಾನಸಿಕ ಸ್ಥಿತಿ ಹೊಂದಿರುವ ಅಗತ್ಯವಿರಲಿದ್ದು, ಅಂತಹ ಅಪರಾಧಗಳಲ್ಲಿ ನ್ಯಾಯಾಲಯ ಅದನ್ನು ಊಹಿಸುತ್ತದೆ ಎಂದು ಹೈಕೋರ್ಟ್‌ ಹೇಳಿದೆ.
Indore Bench of Madhya Pradesh High Court
Indore Bench of Madhya Pradesh High Court

ಬಾಲಕಿಯ ಬಟ್ಟೆಗಳನ್ನು ಎಳೆದು ಆಕೆಯ ಭುಜದ ಮೇಲೆ ಕೈ ಹಾಕಿದರೆ ಅದು ವ್ಯಕ್ತಿಯ ಲೈಂಗಿಕ ಉದ್ದೇಶ ತೋರಿಸುತ್ತದೆ ಎಂದು ಈಚೆಗೆ ತಿಳಿಸಿರುವ ಮಧ್ಯಪ್ರದೇಶ ಹೈಕೋರ್ಟ್ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಡಿ (ಪೋಕ್ಸೊ ಕಾಯಿದೆ) ವ್ಯಕ್ತಿಯೊಬ್ಬರ ಶಿಕ್ಷೆ ದೃಢಪಡಿಸಿದೆ [ನಾಗೇಶ್ವರ ಮತ್ತು ಸರ್ಕಾರ ನಡುವಣ ಪ್ರಕರಣ].

ಕಾನೂನಿನ ಪ್ರಕಾರ, ಪೋಕ್ಸೊ ಕಾಯಿದೆ ಅಡಿಯ ಅಪರಾಧಕ್ಕಾಗಿ ಆರೋಪಿಯ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ಆರೋಪಿ ಅಪರಾಧಿಕ ಮಾನಸಿಕ ಸ್ಥಿತಿ ಹೊಂದಿರುವುದು ಅಗತ್ಯವಾಗಿರಲಿದೆ (ಅಪರಾಧಿಕ ವಿಷಯಗಳಲ್ಲಿ ತನ್ನ ವರ್ತನೆ ಅಥವಾ ಅದರ ಪರಿಣಾಮದ ಅರಿವಿದ್ದೂ ಪ್ರಜ್ಞಾಪೂರ್ವಕವಾಗಿ ಅಂತಹ ಉದ್ದೇಶ ಅಥವಾ ಬಯಕೆಯಿಂದ ಕೃತ್ಯದಲ್ಲಿ ತೊಡಗುವುದನ್ನು ಅಪರಾಧಿಕ ಮಾನಸಿಕ ಸ್ಥಿತಿ ಅಥವಾ ಹಂತ ಎನ್ನಲಾಗುತ್ತದೆ) ಮತ್ತು ಅಂತಹ ಅಪರಾಧಗಳಲ್ಲಿ ನ್ಯಾಯಾಲಯ ಅದನ್ನು ಊಹಿಸುತ್ತದೆ ಎಂದು ನ್ಯಾ. ಪ್ರೇಮ್‌ ನಾರಾಯಣ್‌ ಸಿಂಗ್‌ ಅವರಿದ್ದ ಪೀಠ ನುಡಿದಿದೆ.

Also Read
ಮೆಮೊ ಸಲ್ಲಿಸಿದರೂ ವಿಚಾರಣೆಗೆ ಪ್ರಕರಣ ಪಟ್ಟಿ ಮಾಡಲು ರಿಜಿಸ್ಟ್ರಿಯಿಂದ ವಿಳಂಬ: ಎಎಬಿ ಅಸಮಾಧಾನ

“ಲೈಂಗಿಕ ಉದ್ದೇಶಕ್ಕೆ ತಕರಾರು ಎತ್ತಿರುವುದಕ್ಕೆ ಸಂಬಂಧಿಸಿದಂತೆ ಘಟನೆಯ ಸಮಯದಲ್ಲಿ, ಅಪೀಲುದಾರನಿಗೆ 22 ವರ್ಷ ವಯಸ್ಸಾಗಿತ್ತು. ಅವನು ಸಂತ್ರಸ್ತೆಯ ಬಟ್ಟೆ ಎಳೆದು ಆಕೆಯ ಭುಜದ ಮೇಲೆ ಕೈಹಾಕಿದ್ದ. ಈ ನಡವಳಿಕೆ ಮೇಲ್ಮನವಿದಾರನ ಲೈಂಗಿಕ ಪ್ರವೃತ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ ಐಪಿಸಿ ಸೆಕ್ಷನ್‌ 354 (ಮಹಿಳೆಯ ಘನತೆಗೆ ಧಕ್ಕೆ) ಹಾಗೂ ಪೋಕ್ಸೊ ಕಾಯಿದೆಯ ಸೆಕ್ಷನ್ 7/8 ರ ಅಡಿಯಲ್ಲಿ ಮೇಲ್ಮನವಿದಾರನ ಅಪರಾಧವನ್ನು ಅದು ದೃಢಪಡಿಸಿತು. ಜೊತೆಗೆ ಕೆಳ ನ್ಯಾಯಾಲಯ ವಿಧಿಸಿದ್ದ ₹ 4,000 ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಯನ್ನೂ ಅದು ಎತ್ತಿ ಹಿಡಿಯಿತು.

Related Stories

No stories found.
Kannada Bar & Bench
kannada.barandbench.com