ಸೆಕ್ಷನ್ 498ಎ ದುರುಪಯೋಗದಿಂದ ಮದುವೆ ಎಂಬ ಸಂಸ್ಥೆ ಮೇಲೆ ಪರಿಣಾಮ: ಅಲಾಹಾಬಾದ್ ಹೈಕೋರ್ಟ್

ಸಾಂಪ್ರದಾಯಿಕ ವಿವಾಹದ ಬದಲಾಗಿ ಬಂದಿರುವ ಲಿವ್ ಇನ್ ಸಂಬಂಧ ಸದ್ದಿಲ್ಲದೆ ನಮ್ಮ ಸಮಾಜೋ ಸಾಂಸ್ಕೃತಿಕ ನೀತಿಗೆ ಲಗ್ಗೆ ಇಡುತ್ತಿದ್ದು ಇದು ಒಪ್ಪಬೇಕಾದ ವಾಸ್ತವವಾಗಿದೆ ಎಂದು ಪೀಠ ತಿಳಿಸಿತು.
ಸೆಕ್ಷನ್ 498ಎ ದುರುಪಯೋಗದಿಂದ ಮದುವೆ ಎಂಬ ಸಂಸ್ಥೆ ಮೇಲೆ ಪರಿಣಾಮ: ಅಲಾಹಾಬಾದ್ ಹೈಕೋರ್ಟ್
A1
Published on

ಐಪಿಸಿ ಸೆಕ್ಷನ್‌ 498 ಎ (ಕೌಟುಂಬಿಕ ದೌರ್ಜನ್ಯ) ದುರುಪಯೋಗದಿಂದ ಮದುವೆ ಎಂಬ ಸಾಂಪ್ರದಾಯಿಕ ಸಂಸ್ಥೆಯ ಮೇಲೆ ಪರಿಣಾಮ ಬೀರುತ್ತಿದ್ದು ಕಾನೂನಿನ ಹೊಣೆಗಾರಿಕೆಯಿಂದ ಮುಕ್ತವಾಗಿರುವ 'ಲಿವ್‌ ಇನ್‌' ಸಂಬಂಧವು ಸಾಂಪ್ರಾದಾಯಿಕ ಮದುವೆಯ ಸ್ಥಾನವನ್ನು ಕದಲಿಸತೊಡಗಿದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ಹೇಳಿದೆ [ಮುಖೇಶ್‌ ಬನ್ಸಾಲ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಸಾಂಪ್ರದಾಯಿಕ ವಿವಾಹದ ಬದಲಾಗಿ ಬಂದಿರುವ 'ಲಿವ್‌ ಇನ್‌' ಸಂಬಂಧ ಸದ್ದಿಲ್ಲದೇ ನಮ್ಮ ಸಮಾಜೋ ಸಾಂಸ್ಕೃತಿಕ ನೀತಿಗೆ ಲಗ್ಗೆ ಇಡುತ್ತಿದ್ದು ಇದು ಒಪ್ಪಬೇಕಾದ ವಾಸ್ತವವಾಗಿದೆ ನ್ಯಾ. ರಾಹುಲ್‌ ಚತುರ್ವೇದಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

Also Read
ಲಿವ್‌-ಇನ್‌ ಸಂಬಂಧ ಎಲ್ಲರಿಗೂ ಒಪ್ಪಿತವಾಗದಿರಬಹುದು, ಆದರೆ ಕಾನೂನುಬಾಹಿರ, ಅಪರಾಧವಲ್ಲ: ಪಂಜಾಬ್‌ & ಹರಿಯಾಣ ಹೈಕೋರ್ಟ್‌

“ಐಪಿಸಿ ಸೆಕ್ಷನ್‌ 498ಎ ಅನ್ನು ಅನುಚಿತವಾಗಿ, ಅಜಾಗರೂಕವಾಗಿ ದುರ್ಬಳಕೆ ಮಾಡಿಕೊಂಡರೆ ಮದುವೆ ಎಂಬ ಪುರಾತನ ಸಂಸ್ಥೆಯ ಗಂಧವು ಕಾಲಕ್ರಮೇಣ ಇಲ್ಲವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

Also Read
ಲೈಂಗಿಕ ಸಂಬಂಧ ಸಮ್ಮತ ಎಂಬುದಕ್ಕೆ ಲಿವ್‌–ಇನ್‌ ಸಂಬಂಧವೇ ಸಾಕು: ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ ಮುಂಬೈ ನ್ಯಾಯಾಲಯ

ಲಿವ್‌ ಇನ್‌ ಸಂಬಂಧ ಎಂಬುದು ಅವಿವಾಹಿತ ಪುರುಷ ಅಥವಾ ಮಹಿಳೆ ಲೈಂಗಿಕ ಮತ್ತು ಪ್ರಣಯ ಸಂಬಂಧದಲ್ಲಿ ಒಂದೇ ಸೂರಿನಡಿ ಒಟ್ಟಿಗೆ ವಾಸಿಸಲು ನಿರ್ಧರಿಸುವ ಸ್ವಯಂಪ್ರೇರಿತ ಒಪ್ಪಂದವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಸಾಮಾನ್ಯ ಮತ್ತು ದೊಡ್ಡಪ್ರಮಾಣದ ಆರೋಪದ ಮೂಲಕ ಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ಹಣಿಯುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಕ್ಷನ್ 498 ಎ ದುರುಪಯೋಗ ತಡೆಯಲು ಹಲವು ಮಾರ್ಗೋಪಾಯಗಳನ್ನು ರೂಪಿಸುವ ವೇಳೆ ಹೈಕೋರ್ಟ್‌ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

Kannada Bar & Bench
kannada.barandbench.com