ಒಳಉಡುಪು ಸಾಕ್ಷ್ಯ ನಾಶಪಡಿಸಿದ ಆರೋಪ: ಕೇರಳ ಸಚಿವ ಆಂಟೋನಿ ವಿರುದ್ಧ ಹೊಸದಾಗಿ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ತಡೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ತಿರುವನಂತಪುರಂನ ನ್ಯಾಯಾಲಯ ಇತ್ತೀಚೆಗೆ ಆಂಟೋನಿ ರಾಜು ಅವರ ವಿರುದ್ಧ ವಿಚಾರಣೆ ಆರಂಭಿಸಿತ್ತು.
Antony raju
Antony raju Facebook

ವಕೀಲರಾಗಿದ್ದ ವೇಳೆ ಒಳ ಉಡುಪು ಸಾಕ್ಷ್ಯ ತಿರುಚಿದ ಆರೋಪ ಎದುರಿಸುತ್ತಿರುವ ಸಚಿವ ಆಂಟೋನಿ ರಾಜು ವಿರುದ್ಧದ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.  

ಈ ಸಂಬಂಧ ಕೇರಳ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ನೋಟಿಸ್‌ ಜಾರಿ ಮಾಡಿದೆ.

ಆಂಟೋನಿ ಅವರು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ ಭಾಗವಾದ ಜನಾಧಿಪತ್ಯ ಕೇರಳ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ರಾಜ್ಯ ಸಾರಿಗೆ ಸಚಿವರಾಗಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಆಂಟೋನಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಆಂಟನಿ ವಿರುದ್ಧದ ಸಾಕ್ಷ್ಯ ನಾಶಪಡಿಸಿದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್, ಸುಳ್ಳು ಸಾಕ್ಷ್ಯಕ್ಕಾಗಿ ಅವರ ವಿರುದ್ಧ ಹೊಸದಾಗಿ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣವನ್ನು ಮುಕ್ತವಾಗಿಟ್ಟಿತ್ತು.

ಮೂರು ದಶಕಗಳ ಹಿಂದೆ ವಿವಾದಾತ್ಮಕ ಘಟನೆ ನಡೆದಿದ್ದು ತ್ವರಿತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ತನ್ನ ರಿಜಿಸ್ಟ್ರಿಗೆ ನಿರ್ದೇಶಿಸಿತ್ತು.

ಇತ್ತೀಚೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ನ್ಯಾಯಾಲಯ ತನ್ನ ವಿರುದ್ಧ ವಿಚಾರಣೆ  ಆರಂಭಿಸಿದ ಹಿನ್ನೆಲೆಯಲ್ಲಿ ಆಂಟೋಣಿ ಅವರು ವಕೀಲ ದೀಪಕ್ ಪ್ರಕಾಶ್ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ವಕೀಲ ಎಂ ಆರ್ ಐಜಯನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು. ಪ್ರಕರಣದಲ್ಲಿ ವಕೀಲರ ಸ್ಥಾನದ ಬಗ್ಗೆ ಸುಪ್ರೀಂ ಕೋರ್ಟ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಬದಲಿಗೆ ಆಕ್ಷೇಪಣೆ ಸಲ್ಲಿಸಲು ಆರೋಪಿಗಳಿಗೆ ಸ್ವಾತಂತ್ರ್ಯ ನೀಡಿತು.

[ಪ್ರಕರಣದ ಹಿನ್ನೆಲೆ ವಿವರಗಳಿಗಾಗಿ ಈ ಕೆಳಗಿನ ವರದಿಗಳನ್ನು ಓದಿ]

Also Read
ಚೋಟುದ್ದ ಚಡ್ಡಿ ಕತೆಯೂ, ಕೇರಳ ಸಚಿವರೊಬ್ಬರ ಪ್ರತಿಷ್ಠೆಯೂ!
Also Read
ಸಾರಿಗೆ ಸಚಿವ ರಾಜು ವಿರುದ್ಧದ ʼಒಳಉಡುಪು ಪ್ರಕರಣʼ ರದ್ದು; ಆದರೂ ವಿಚಾರಣೆ ಅಭಾದಿತ ಎಂದ ಕೇರಳ ಹೈಕೋರ್ಟ್
Also Read
ಕೇರಳ ಸಚಿವ ಆಂಟೋನಿ ರಾಜು ವಿರುದ್ಧ ಒಳಉಡುಪು ಸಾಕ್ಷ್ಯ ನಾಶಪಡಿಸಿದ ಆರೋಪ: ಪ್ರಕರಣಕ್ಕೆ ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ

Related Stories

No stories found.
Kannada Bar & Bench
kannada.barandbench.com