ಗೂಕಲ್ ಹೌಸಿಂಗ್, ಗೂಕಲ್ ತಮಿಳು ನ್ಯೂಸ್ , ಜಿ (GI) ಪೇ ಆನ್‌ಲೈನ್ ಸರ್ವಿಸ್ ಹಾಗೂ ಗೂಕಲ್ ಟ್ರೇಡ್ ಪೇಮೆಂಟ್ ಮತ್ತು 'ಗೂಕಲ್' ಅನ್ನು ಪ್ರಧಾನ ಪದವಾಗುಳ್ಳ ಹಲವು ಡೊಮೇನ್ ಹೆಸರುಗಳನ್ನು ರಾಮ್ ನೋಂದಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಬಿಗ್ ಬಜಾರ್ ಮಳಿಗೆಗೆ ಆಹಾರ ಉತ್ಪನ್ನ ಪೂರೈಕೆ ಮಾಡುವವರೊಬ್ಬರಿಗೆ ರೂ 12 ಲಕ್ಷಕ್ಕೂ ಹೆಚ್ಚು ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಆ ವ್ಯಕ್ತಿ 2022ರಲ್ಲಿ ಬಿಯಾನಿ ವಿರುದ್ಧ ಕ್ರಿಮಿನಲ್ ವಿಶ್ವಾಸ ದ್ರೋಹ ಪ್ರಕರಣ ದಾಖಲಿಸಿದ್ದರು.
ಕವಿತಾ ಅವರನ್ನು ಅವರ ಹೈದರಾಬಾದ್ ನಿವಾಸದಲ್ಲಿ ಮಾರ್ಚ್ 15ರಂದು ಬಂಧಿಸಿದ ಜಾರಿ ನಿರ್ದೇಶನಾಲಯ, ಹತ್ತು ದಿನಗಳ ಕಾಲ ವಶಕ್ಕೆ ನೀಡುವಂತೆ ವಿಚಾರಣಾ ನ್ಯಾಯಾಲಯವನ್ನು ಕೋರಿತು. ಆದರೆ ನ್ಯಾಯಾಲಯ ಒಂದು ವಾರ ಕಾಲ ಅನುಮತಿ ನೀಡಿತು.
ರಾಮನಗರ ಜಿಲ್ಲೆಯ ಕನಕಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿ ಬಾಕಿರುವ ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಯತ್ನಾಳ್ ಮಧ್ಯಂತರ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರವು ವಿಶೇಷ ನ್ಯಾಯಾಲಯ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಜಾಮೀನು ನೀಡಲು ವಿಚಾರಣೆ ಮುಕ್ತಾಯಗೊಳ್ಳುವುದು ವಿಳಂಬವಾಗಲಿದೆ ಎಂಬ ವಾದವನ್ನು ಒಪ್ಪಲಾಗದು ಎಂದ ನ್ಯಾಯಾಲಯ.